ಉದಯವಾಹಿನಿ,ಚಿಂಚೋಳಿ: ವಿಜ್ಞಾನ ನಮ್ಮ ನಿತ್ಯ ಜೀವನದ ಅವಿಭಾಜ್ಯ ಅಂಗವಾಗಬೇಕು,ವಿಜ್ಞಾನವೆಂದರೆ ಸತ್ಯ ಅದನ್ನು ಮರೆಮಾಚಿ ಮೂಡನಂಬಿಕೆ ಕಂದಚಾರದ ಕಡೆ ಸಾಗುತ್ತಿದ್ದೇವೆ,ಗಂಡು,ಹೆಣ್ಣು ಹೇಗೆ ಜನನವಾಗುತ್ತೆ ಎಂಬುವುದು ಜೀವಶಾಸ್ತ್ರದಲ್ಲಿ ಓದುತ್ತೇವೆ ವಿದ್ಯಾರ್ಥಿಗಳು ಪಠ್ಯದಲ್ಲಿ ಓದಿದ್ದನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕಲಬುರಗಿ ಡಿಡಿಪಿಯು ಶಿವಶರಣಪ್ಪ ಮೂಳೆಗಾಂವ ಹೇಳಿದರು.ಪಟ್ಟಣದ ಚಂದಾಪೂರದ ಸರ್ಕಾರಿ ಪಿಯುಸಿ ಕಾಲೇಜಿನಲ್ಲಿ ಚಿಂಚೋಳಿ ಘಟಕದಿಂದ ಹಮ್ಮಿಕೊಂಡಿದ್ದ ಭಾರತ ಜ್ಞಾನ ವಿಜ್ಣಾನ ಸಮಿತಿಯು ಸರಕಾರಿ ವೈಜ್ಞಾನಿಕ ಮನೊವೃತಿಯೆಡೆಗೆ ಯುವಕರು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು,ಗಂಡು ಮಗು ಆಗಲಿಲ್ಲ ಎಂದು ಮಾಟ,ಮಂತ್ರ,ತಾಯಿತು,ಮಠ,ಮಂದಿರ ಕಡೆ ಮೊರೆ ಹೋಗುತ್ತಿದ್ದೇವೆ ಅದನ್ನು ಮೊಡನಂಬಿಕೆಗಳು ಬಿಟ್ಟು ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.ಅಪರ ಆಯುಕ್ತರ ಕಛೇರಿಯ ವಿಷಯ ಪರಿವೀಕ್ಷಕರಾದ ನಾಗಿಂದ್ರಪ್ಪ ಅವರಾದಿ ಮಾತನಾಡಿ ಜಗತ್ತು ವೈಜ್ಞಾನಿಕವಾಗಿ ಎಷ್ಟೇ ಮುಂದುವರೆದರೂ ಮೂಢನಂಬಿಕೆ ಇನ್ನೂ ಹೋಗಿಲ್ಲ,ಅಕ್ಷರಸ್ಥರು ಸಹ ಗೊತ್ತಿದ್ದು ವಾಮಚಾರ,ಕಂದಚಾರಗಳನ್ನು ನಂಬಿ ಮೋಸ ಹೋಗುತ್ತಿದ್ದಾರೆ.ಶಾಲೆಗಳಲ್ಲಿ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಮೂಡಿಸುವ ಜವಾಬ್ದಾರಿ ಶಿಕ್ಷಕರದಾಗಿದೆ ಎಂದು ಹೇಳಿದರು. ಪ್ರೇಮಾನಂದ ಆಳಂದ ತರಬೇತಿ ನೀಡಿದರು,ಕಾಲೇಜಿನ ಪ್ರಾಂಶುಪಾಲ ಮಲ್ಲಿಕಾರ್ಜುನ ಪಾಲಾಮೂರ್ ಅಧ್ಯಕ್ಷತೆ ವಹಿಸಿದ್ದರು,ಬರಮಲಿಂಗ ಸ್ವಾಗತಿಸಿದರು,ಬಸವರಾಜ ಯಾಧವ ನಿರೂಪಿಸಿದರು,ಶಿಕ್ಷಕ ಶರಣಬಸವ ವಂದಿಸಿದರು.ಅನೇಕ ವಿಧ್ಯಾರ್ಥಿಗಳು ಸಿಬ್ಬಂದಿಗಳು ಇದ್ದರು.

Leave a Reply

Your email address will not be published. Required fields are marked *

error: Content is protected !!