
ಉದಯವಾಹಿನಿ,ಮಸ್ಕಿ: ಪಟ್ಟಣದ ಶಾಸಕರ ಕಚೇರಿ ಮುಂದೆ ಹಾದು ಹೋಗುವ ರಸ್ತೆಗೆ ಕಾಳಿಕಾದೇವಿ ರಸ್ತೆ ಎಂದು ಹೆಸರಿಡಬೇಕು ಹಾಗೂ ಪುರಸಭೆಯ ಹೊಸ ಮಳಿಗೆ ಹತ್ತಿರ ಭಗವಾನ್ ವಿಶ್ವಕರ್ಮ ಎಂದು ನಾಮಫಕಲ ಹಾಕುವುದಕ್ಕೆ ಪರವಾನಿಗೆ ನೀಡಬೇಕೆಂದು ಒತ್ತಾಯಿಸಿ ಇಲ್ಲಿನ ವಿಶ್ವಕರ್ಮ ಸಮಾಜದ ಮುಖಂಡರು ಪುರಸಭೆ ಮುಖ್ಯಾಧಿಕಾರಿ ನರಸರೆಡ್ಡಿ ಅವರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ಅನೇಕ ವೃತ್ತಗಳಿಗೆ ವಿವಿಧ ಸಮಾಜ ಸುಧಾರಕರ ಹೆಸರುಗಳಿದ್ದು, ಆದರೆ ವಿಶ್ವಕರ್ಮ ಸುಧಾರಕರ ಹೆಸರುಗಳಿಲ್ಲ,ವಿಶ್ವಕರ್ಮ ಸಮಾಜದ ಸೃಷ್ಟಿಕರ್ತ ಭಗವಾನ್ ವಿಶ್ವಕರ್ಮ ಅವರ ಹೆಸರಿನ ನಾಮಫಲಕ ಹಾಕಲು ಪರವನಿಗೆ ನೀಡಬೇಕು, ಈ ಹಿಂದಿನ ಪುರಸಭೆ ಅಧಿಕಾರಿಗಳಿಗೆ ಮನವಿ ಮಾಡಿದರು ಪ್ರಯೋಜನವಾಗಿರಲಿಲ್ಲ, ಇದೀಗ ಶಾಸಕರ ಗಮನಕ್ಕೆ ತಂದಾಗ ಪುರಸಭೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಎಂದಿದ್ದಾರೆ, ನಮ್ಮ ಮನವಿಗೆ ಸ್ಪಂದಿಸಬೇಕೆಂದು ಮನವಿ ಮಾಡಿದರು.ಈ ಸಂದರ್ಭದಲ್ಲಿ ಸಮಾಜದ ಮುಖಂಡ ವಿಜಯ ಬಡಿಗೇರ್,ಅಮರೇಶ ಪತ್ತಾರ, ಮೌನೇಶ ಬಡಿಗೇರ್,ಡಾ ಸಂತೋಷ ಪತ್ತಾರ, ಕಾಳಪ್ಪ ಕಣ್ಣೂರು, ದೇವರಾಜ ಕಂಬಾರ, ರಾಮಚಂದ್ರಪ್ಪ, ಮೌನೇಶ ಬಡಿಗೇರ್, ಮಂಜುನಾಥ ಹಸಮಕಲ್, ಪಿ.ಕಾಲೊಪ್ಪ, ವೀರೇಶ್ ಬಡಿಗೇರ್, ಕಾಳಪ್ಪ ಪತ್ತರ್,ಮಹೇಶ ಬುದ್ದಿನಿ ಅಮರೇಶ ಪತ್ತಾರ ಸೇರಿದಂತೆ ಇನ್ನಿತರಿದ್ದರು
