
ಉದಯವಾಹಿನಿ,ಕೆಂಭಾವಿ: ಕೆಂಭಾವಿಯ ಜನರ ಬಹುದಿನದ ಬೇಡಿಕೆಯಾದ ಕೆಂಭಾವಿ ಪಟ್ಟಣವನ್ನು ತಾಲೂಕಾ ಕೇಂದ್ರವನ್ನಾಗಿ ಘೋಷಣೆ ಮಾಡುವಂತೆ ಸೋಮವಾರದ ನಡೆದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಕೆಂಭಾವಿ ಪಟ್ಟಣದ ಹೀರೆಮಠ ಪೂಜ್ಯರ ನೇತೃತ್ವದಲ್ಲಿ ತಾಲೂಕಾ ಹೋರಾಟ ಸಮಿತಿ ಮತ್ತು ವಿವಿದ ಸಾಮೂಹಿಕ ಸಂಘಟನೆಗಳ ಒಕ್ಕೂಟದ ವತಿಯಿಂದ
ಜಿಲ್ಲಾ ಉಸ್ತುವಾರಿ ಸಚಿವರಾದ ಶರಣಬಸಪ್ಪಗೌಡ ದರ್ಶನಾಪೂರರಿಗೆ ಮನವಿ ಸಲ್ಲಿಸಲಾಯಿತು.
ಪಟ್ಟಣದ ವ್ಯಾಪ್ತಿಯಲ್ಲಿ ನೂರಾರು ಎಕರೆ ಸರಕಾರಿ ಜಮೀನು ಅಲ್ಲದೆ ಸುಸಜ್ಜಿತ ಕಟ್ಟಡಗಳನ್ನು ಸಹ ಹೊಂದಿದ್ದು ೨೦೧೫ರಲ್ಲಿ ಪಟ್ಟಣವು ಪುರಸಭೆಯಾಗಿ ಮೇಲ್ದರ್ಜೆಗೆ ಎರಿದೆ ಕೆಂಭಾವಿ ಹೋಬಳಿಯಲ್ಲಿ ಸುಮಾರು ೪೬ಹಳ್ಳಿಗಳು ೮ಗ್ರಾಮ ಪಂಚಾಯತಿಗಳು ಸೇರಿದಂತೆ ೧ಲಕ್ಷ ೩೦ಸಾವಿರ ಜನಸಂಖ್ಯೆ ಹೊಂದಿರುವ ಜಿಲ್ಲೆ ಅತಿ ದೊಡ್ಡ ಪಟ್ಟಣಗಳಲ್ಲಿ ಒಂದಾಗಿದೆ ,ನ್ಯಾಯಲಯವು ಕೂಡಾ ಕೆಂಭಾವಿ ತಾಲೂಕಾ ಕೇಂದ್ರವಾಗಲು ಅರ್ಹತೆ ಹೊಂದಿದೆ ಎಂದು ಪರಿಗಣಿಸಿದೆ ರಾಜ್ಯ ಸರ್ಕಾರವನ್ನು ಈ ಮನವಿಯನ್ನು ಗಂಭೀರವಾಗಿ ಪರಿಗಣಿಸಿ ಮುಂಬರುವ ಅಧಿವೇಶನದಲ್ಲಿ ತಾಲೂಕಾ ಕೇಂದ್ರವನ್ನಾಗಿ ಘೋಷಣೆ ಮಾಡಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವರ ಮೂಲಕ ಮನವಿ ಸಲ್ಲಿಸಿದರು,ಈ ಸಂದರ್ಭದಲ್ಲಿ ಹೀರೆಮಠದ ಪೂಜ್ಯರಾದ ಷ.ಬ್ರ ಚನ್ನ ಬಸವ ಶಿವಾಚಾರ್ಯರು,ಮಡಿವಾಳಪ್ಪ ಪಾಟೀಲ ಹೆಗ್ಗನದೊಡ್ಡಿ,ಬಂದೇನವಾಜ ನಾಲ್ತವಾಡ ಸೇರಿದಂತೆ ಇತರಿದ್ದರು
