ಉದಯವಾಹಿನಿ,ಕೆ.ಆರ್.ಪೇಟೆ: ಕಾಲುಬಾಯಿ ಜ್ವರವು ಗೊರಸುಳ್ಳ ಸಾಕು ಪ್ರಾಣಿಗಳಲ್ಲಿ ಕಂಡು ಬರುವ ರೋಗವಾಗಿದ್ದು ರೈತಬಾಂಧವರು ತಮ್ಮ ತಮ್ಮ ರಾಸುಗಳಿಗೆ ತಪ್ಪದೇ ಲಸಿಕೆ ಹಾಕಿಸಬೇಕು ಎಂದು ಶಾಸಕ ಹೆಚ್.ಟಿ.ಮಂಜು ತಿಳಿಸಿದರು.ಅವರು ತಾಲ್ಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಆಲೇನಹಳ್ಳಿ ಗ್ರಾಮದಲ್ಲಿ ಪಶುಸಂಗೋಪನಾ ಇಲಾಖೆಯ ವತಿಯಿಂದ ಏರ್ಪಡಿಸಿದ್ದ ಕಾಲುಬಾಯಿ ಜ್ವರದ ಲಸಿಕೆಯನ್ನು ರಾಸುಗಳಿಗೆ ಹಾಕುವ ಮೂಲಕ ಚಾಲನೆ ನೀಡಿ ಮಾತನಾಡಿದರು.ರೈತರು ಸಾಕುವ ದನ, ಎಮ್ಮೆ, ಕುರಿ, ಮೇಕೆ, ಹಂದಿಗಳಲ್ಲಿ ವೈರಸ್‌ನಿಂದ ಉಂಟಾಗುವ ಸಾಂಕ್ರಾಮಿಕ ರೋಗವಿದು. ಸಕಾಲದಲ್ಲಿ ಲಸಿಕೆ ಹಾಕಿಸಿ ರೋಗವನ್ನು ನಿಯಂತ್ರಿಸದಿದ್ದರೆ, ಜಾನುವಾರುಗಳು ಮೃತಪಡಲಿದ್ದು, ರೈತರಿಗೆ ನಷ್ಟ ಉಂಟಾಗಲಿದೆ. ಆದ್ದರಿಂದ ಯಾವುದೇ ರೈತರು ಎಷ್ಟೇ ಕೆಲಸಗಳ ಒತ್ತಡವಿದ್ದರೂ ನಿಮ್ಮ ರಾಸುಗಳಿಗೆ ತಪ್ಪದೇ ಕಾಲುಬಾಯಿ ಜ್ವರದ ಲಸಿಕೆ ಹಾಕಿಸಬೇಕು. ಆ ಮೂಲಕ ಪ್ರಾಣಿಗಳಿಗೆ ಬರುವ ರೋಗಗಳನ್ನು ತಡೆಯಬೇಕು. ಮೂಕ ಪ್ರಾಣಿಗಳು ನಮ್ಮಂತೆಯೇ ಎಂಬ ಭಾವನೆ ನಮ್ಮಲ್ಲಿ ಇರಬೇಕು. ಪಶುಪಾಲನಾ ಇಲಾಖೆಯ ಅಧಿಕಾರಿಗಳು ನಿಮ್ಮ ಗ್ರಾಮಗಳಿಗೆ ತೆರಳಿ ಜಾನುವಾರುಗಳಿಗೆ ಲಸಿಕೆ ಹಾಕಲಿದ್ದಾರೆ. ಈ ಸಂಬAಧ ಗ್ರಾಮೀಣ ಭಾಗದಲ್ಲಿ ಇಲಾಖೆಯ ಸಿಬ್ಬಂದಿಗಳು, ಮೈತ್ರಿ ಕಾರ್ಯಕರ್ತರು, ಡೈರಿ ಕಾರ್ಯದರ್ಶಿಗಳು, ಕ್ಲಸ್ಟರ್ಸ್ಗಳು, ರೈತರಿಗೆ ಸಲಹೆ ನೀಡಿ, ಜಾಗೃತಿ ಮೂಡಿಸಬೇಕೆಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಟಿಎಪಿಸಿಎಂಎಸ್ ಮಾಜಿ ನಿರ್ದೇಶಕ ಮಹೇಶ್, ಮಂದಗೆರೆ ಗ್ರಾಮ ಪಂಚಾಯಿತಿಯ ಅಧ್ಯಕ್ಷೆ ವರಲಕ್ಷ್ಮಿ, ಉಪಾದ್ಯಕ್ಷೆ ಪಲ್ಲವಿ, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕುಮಾರ್ ಹಾಗೂ ಪಶುಸಂಗೋಪನ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಹೆಚ್.ಎಸ್.ದೇವರಾಜು, ಪಶು ವೈದ್ಯಾಧಿಕಾರಿ ಸಂಜು, ಮನ್ಮಲ್ ಪಶುವೈದ್ಯ ಡಾ.ನೂತನ್‌ಗೌಡ, ಪಶು ಪರೀಕ್ಷಕರಾದ ಮಂಜುನಾಥ್, ಅವಿನಾಶ್ ಕಾಂತರಾಜು, ಪುನೀತ್, ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಲೋಕೇಶ್ ಸೇರಿದಂತೆ ಹಲವರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!