ಉದಯವಾಹಿನಿ, ಹೊಸಕೋಟೆ : ಜನತಾದರ್ಶನಕಾರಕ್ರಮದಲ್ಲಿಜನರುಅರ್ಜಿ ಮೂಲಕ ಹೇಳಕೊಳ್ಳುವ ಸಮಸ್ಯೆಗಳನ್ನು 30 ದಿನಗಳ ಕಾಲ ಮಿತಿಯಲ್ಲಿ ಬಗೆಹರಿಸಲು ಜಿಲ್ಲಾಡಳಿತ ಇಚ್ಚಾಶಕ್ತಿಯಿಂದ ಕೆಲಸ ಮಾಡಬೇಕುಎಂದುಜಿಲ್ಲಾಉಸ್ತುವಾರಿ ಸಚಿವ ಕೆ. ಎಚ್ ಮುನಿಯಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದರು. ಹೊಸಕೋಟೆ ಸೈಯದ್ ಪ್ಯಾಲೆಸ್‌ನಲ್ಲಿ ಹಮ್ಮಿಕೊಂಡಿದ್ದಜಿಲ್ಲಾ ಮಟ್ಟದಜನತಾದರ್ಶನಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದಅವರು, ಅಧಿಕಾರಕ್ಕೆ ಬರುವಮುನ್ನಜನರ ಸಮಸ್ಯೆಗಳನ್ನು ಆಲಿಸುವ ಭರವಸೆಯನ್ನುಕಾಂಗ್ರೆಸ್ ಪಕ್ಷ ನೀಡಿದ್ದು, ಜನತಾದರ್ಶನದ ಮೂಲಕ ಜನರ ಸಮಸ್ಯೆ ಆಲಿಸುವ ಕಾರ್ಯಕ್ಕೆ ಸರಕಾರ ಮುಂದಾಗಿದೆ.ಜನರು ತಮ್ಮ ಸಮಸ್ಯೆಗಳನ್ನು ಹೊತ್ತು ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಿ, ಜನರ ಬಳಿಗೆ ಅಧಿಕಾರಿಗಳು ಹೋಗಿ ಸಮಸ್ಯೆ ಆಲಿಸಿ, ಪರಿಹಾರಕೊಡುವ ಈ ಕರ‍್ಯಕ್ರಮದ ಯಶಸ್ಸಿಗೆ ಅಧಿಕಾರಿಗಳು ಪ್ರಾಮಾಣಿಕಪ್ರಾಮಾಣಿಕ ಪ್ರಯತ್ನ ಮಾಡಬೇಕು. ನ್ಯಾಯಾಲಯದ ಸಮಸ್ಯೆಗಳನ್ನು ಹೊರತುಪಡಿಸಿ ಇನ್ನುಳಿದ ಸಮಸ್ಯೆಗಳನ್ನು ೩೦ ದಿನದಲ್ಲಿ ಪರಿಹರಿಸಬೇಕುಎಂದರು. ಶಾಸಕ ಶರತ್ ಬಚ್ಚೇಗೌಡ ಮಾತನಾಡಿ, ಸರಕಾರ ನೀಡಿದ್ದಐದುಗ್ಯಾರಂಟಿ ಯೋಜನೆಗಳನ್ನು ಮನೆ ಬಾಗಿಲಿಗೆ ತಲುಪಿಸುವ ಕೆಲಸ ಮಾಡಿಕಾಂಗ್ರೆಸ್ ನುಡಿದಂತೆ ನಡೆದಿದೆ.ಜನರಅಪಾದನೆಯನ್ನುತೊಡೆದು ಹಾಕುವಂತಹರೀತಿಅಧಿಕಾರಿಗಳು ಕೆಲಸ ಮಾಡಬೇಕು. ಇಲ್ಲಿ ಸಲ್ಲಿಕೆಯಾಗುವ ಅರ್ಜಿಗಳ ಸಮಸ್ಯೆ ಪರಿಹರಿಸುವ ಬಗ್ಗೆ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಆದ್ಯತೆ ಮೇರೆಗೆ ವಿಲೇವಾರಿ ಮಾಡಿ ಅನುಕೂಲ ಮಾಡಬೇಕು.ಮುಂದಿನ ದಿನಗಳಲ್ಲಿ ರಸ್ತೆಅಭಿವೃದ್ಧಿಗೆಒತ್ತು ನೀಡಲಾಗುವುದುಎಂದರು.ಜಿಲ್ಲಾಧಿಕಾರಿ ಡಾ.ಶಿವಶಂಕರ್ ಮಾತನಾಡಿ, ಜನರು ಸಲ್ಲಿಸುವ ಅರ್ಜಿಗಳನ್ನುಆನ್‌ಲೈನ್‌ನಲ್ಲಿ ನೋಂದಣಿಯಾಗಲಿದ್ದು, ನೇರವಾಗಿ ಮುಖ್ಯಮಂತ್ರಿಗಳ ಕಚೇರಿಯಿಂದಲೇಇದರ ವಿಲೇವಾರಿ ಬಗ್ಗೆ ನಿಗಾವಹಿಸಲಿದ್ದಾರೆ.ಸಲ್ಲಿಕೆಯಾಗಿರುವ ಅರ್ಜಿಗಳನ್ನು ಕಾಲ ಮಿತಿಯೊಳಗೆ ಪರಿಹರಿಸಲಾಗುವುದು.ನ್ಯಾಯಾಲಯದಲ್ಲಿರುವ ಹಾಗೂ ಸರ್ವೇ ಸಮಸ್ಯೆಗಳು ತಡವಾಗಬಹುದು.ಜಿಲ್ಲಾಉಸ್ತುವಾರಿ ಕಾರ್ಯದರ್ಶಿ ಸಲ್ಮಾ ಕೆ. ಫಾಹೀಮಾ, ಸಿಇಒ ಡಾ.ಕೆ.ಎನ್. ಅನುರಾಧ, ಎಸ್ಪಿ ಮಲ್ಲಿಕಾರ್ಜುನ್‌ಬಾಲದಂಡಿ,ಉಪ ವಿಭಾಗಾಧಿಕಾರಿ ಶ್ರೀನಿವಾಸ್, ತಹಸೀಲ್ದಾರ್ ವಿಜಯಕುಮಾರ್, ಇಒ ಚಂದ್ರಶೇಖರ್, ಜಿಲ್ಲಾ, ತಾಲೂಕು ಮಟ್ಟದಎಲ್ಲ ಅಧಿಕಾರಿಗಳು ಭಾಗವಹಿಸಿದ್ದರು.
