ಉದಯವಾಹಿನಿ,ಮುದ್ದೇಬಿಹಾಳ ; ಮುದ್ದೇಬಿಹಾಳ ಪಟ್ಟಣದ ಎಪಿಎಂಸಿಯಲ್ಲಿಯ ದಿ ಕರ್ನಾಟಕ ಕೋ ಆಪರೇಟಿವ್ ಬ್ಯಾಂಕ್ ನ ಸಭಾ ಭವನದಲ್ಲಿ ಅಕ್ಟೋಬರ್ 1 ರಿಂದ ಅಕ್ಟೋಬರ್ 8. ವರಗೆ ಮಧ್ಯವರ್ಜನ ಶಿಬಿರವನ್ನು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ, ಕರ್ನಾಟಕ ರಾಜ್ಯ ಮಧ್ಯಪಾನ ಸಂಯಮ ಮಂಡಳಿ, ವಿಜಯಪುರ ಜಿಲ್ಲಾ ಜನಜಾಗೃತಿ, ಮಧ್ಯವರ್ಜನಾ ವ್ಯವಸ್ಥಾಪನಾ ಸಮಿತಿ ಮುದ್ದೇಬಿಹಾಳ, ಸಾರ್ವಜನಿಕ ಆಸ್ಪತ್ರೆ, ಆರಕ್ಷಕ ಠಾಣೆ ಹಾಗೂ ಸ್ಥಳೀಯ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಸಂಶೋಧನಾ ಕೇಂದ್ರ ಇದರ ವಿಸ್ತಾರಣಾ ಕಾರ್ಯಕ್ರಮದ ಅಂಗವಾಗಿ 1735 ನೇ ಮಧ್ಯವರ್ಜನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜನಜಾಗೃತಿ ವೇದಿಕೆಯ ಅಧ್ಯಕ್ಷ ಡಾ.ವಿರೇಶ ಪಾಟೀಲ್ ಹೇಳಿದರು ಅವರು ಸೋಮುವಾರ ಪಟ್ಟಣದ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು ಶಿಬಿರದಲ್ಲಿ ಒಟ್ಟು 100 ಜನ ಶಿಬಿರಾರ್ಥಿಗಳು ಭಾಗವಹಿಸಲಿದ್ದು 8 ದಿನವೂ 100 ಜನರು ಶಿಬಿರದಲ್ಲಿ ಉಳಿದುಕೊಳ್ಳಿದ್ದು ಶಿಬಿರಾರ್ಥಿಗಳಿಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗುತ್ತದೆ.ಅ 1 ರಂದು ಶಿಬಿರದ ಉದ್ಘಾಟನೆಯನ್ನು ಶಾಸಕ ಸಿ.ಎಸ್ ನಾಡಗೌಡ ಮಾಡಲಿದ್ದು ಕಾರ್ಯಕ್ರಮದ ಗೌರವಧ್ಯಕ್ಷರಾಗಿ ಮಾಜಿ ಜಿಪಂ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ,ಕರ್ನಾಟಕ ಕೋ ಆಪ್ ಬ್ಯಾಂಕ್ ಅಧ್ಯಕ್ಷ ಸತೀಶ್ ಓಸ್ವಾಲ್, ಮುಖಂಡರಾದ ಸಿ.ಬಿ ಅಸ್ಕಿ,ಸುರೇಶಗೌಡ ಪಾಟೀಲ್, ಜನಜಾಗೃತಿ ವೇದಿಕೆಯ ಉಪಾಧ್ಯಕ್ಷ ಶ್ರೀಶೈಲ್ ದೂಡಮನಿ ವೇದಿಕೆಯ ಸದಸ್ಯರಾದ ಸಂಗಿತಾ ನಾಡಗೌಡ, ಪ್ರತಿಭಾ ಅಂಗಡಗೇರಿ,ಗಿರಿಶಗೌಡ ಪಾಟೀಲ್ ಸೇರಿದಂತೆ ಅನೇಕ ಗಣ್ಯಮಾನ್ಯರು ಭಾಗವಹಿಸಲಿದ್ದು ಅ 8 ರಂದು ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾಜಿ ಶಾಸಕ ಎ.ಎಸ್ ಪಾಟೀಲ್ ನಡಹಳ್ಳಿ ಭಾಗವಹಿಸಲಿದ್ದಾರೆ ಎಂದು ಮಾಹಿತಿಯನ್ನು ನೀಡಿದರುಯೋಜನಾಧಿಕಾರಿ ನಾಗೇಶ ಎನ್ ಪಿ ಮಾತನಾಡಿ ಸಾರ್ವಜನಿಕ ವಲಯಕ್ಕೆ ಸಮಾಜಕ್ಕೆ ಪಿಡುಗು ಆದ ಕುಡಿತವನ್ನು ಸಂಪೂರ್ಣ ಪಾನಮುಕ್ತ ಗ್ರಾಮ ನಗರ ಮಾಡುವ ಉದ್ದೇಶದಿಂದ ಈ ಮಧ್ಯವರ್ಜನ ಶಿಬಿರವನ್ನು ಮಾಡಲಾಗುತ್ತಿದೆ ಮತ್ತು ಚಿಕ್ಕ ಮಕ್ಕಳು ಸಹ ಯಾವುದೇ ದುಷ್ಟಚಟಗಳಿಗೆ ಬಲಿಯಾಗದಿರಲೆಂದು ಗ್ರಾಮ ಸುಭಿಕ್ಷ ಕಾರ್ಯಕ್ರಮ ಮಾಡಲಾಗುತ್ತಿದೆ ಮಧ್ಯಪಾನ ಕೇವಲ ಒಂದು ವ್ಯಕ್ತಿಯನ್ನು ಕೊಲ್ಲುವುದಿಲ್ಲ ಸಂಪೂರ್ಣ ಕುಟುಂಬದ ಸ್ವಾಸ್ಥ್ಯ ಹಾಳು ಮಾಡುತ್ತದೆ ಇದನ್ನು ಅರಿತು ಡಾ.ವಿರೇಂದ್ರ ಹೆಗ್ಗಡೆ ಯವರು 1991 ರಲ್ಲಿ ಜನಜಾಗೃತಿ ವೇದಿಕೆಯ ಮೂಲಕ ಮಧ್ಯವರ್ಜನ ಶಿಬಿರವನ್ನು ಆರಂಭಿಸಿದರು ಅಕ್ರಮ ಮಧ್ಯ ಮಾರಾಟ ,ಕುಡಿತದ ವಿರುದ್ಧ ಸಕಾರಾತ್ಮಕವಾಗಿ ತಿಳಿಹೇಳಿ ಕುಡಿತಕ್ಕೆ ದಾಸರಾದವರನ್ನು ಮನ ಪರಿವರ್ತನೆ ಮಾಡಲಾಗುತ್ತದೆ ಅವರಿಗೆ ಯಾವುದೇ ಟ್ಯಾಬ್ಲೆಟ್ ನೀಡುವುದಾಗಲಿ ಹೊಡೆಯುವುದಾಗಿ ಮಾಡುವುದಿಲ್ಲ 8 ದಿನವೂ ಪ್ರತಿನಿತ್ಯ ಯೋಗ, ವ್ಯಾಯಾಮ,ಶ್ರಮದಾನ,ಮಾಡಿಸಲಾಗುತ್ತದೆ ಮತ್ತು ಶಿಬಿರದಲ್ಲಿ ಪಾಲ್ಗೊಂಡು ಕುಡಿತ ಬಿಟ್ಟ ನವಜೀವನ ಸಮಿತಿ ಸದಸ್ಯರ ಅನಿಸಿಕೆ,ಸಂಪನ್ಮೂಲ ವ್ಯಕ್ತಿ ಗಳಿಂದ ಮಾಹಿತಿ, ಮಹಿಳೆಯರಿಗೆ ಕೌಟುಂಬಿಕ ಸಲಹೆ ನೀಡಲಾಗುತ್ತದೆ ಇಲ್ಲಿಯವರೆಗೆ ಮಾಡಿದ ಶಿಬಿರದಲ್ಲಿ ಒಟ್ಟು 1 ಲಕ್ಷ 34 ಸಾವಿರ ಜನರು ಕುಡಿತ ಬಿಟ್ಟು ನೆಮ್ಮದಿ ಜೀವನ ಮಾಡುತ್ತಿದ್ದಾರೆಂದರು ಪತ್ರಿಕಾಗೋಷ್ಠಿಯಲ್ಲಿ ಪುರಸಭೆ ಸದಸ್ಯೆ ಸಹನಾ ಬಡಿಗೇರ, ಸಂಗಮ್ಮ ದೇವರಳ್ಳಿ, ಶಿಬಿರದ ಜನಜಾಗೃತಿ ವೇದಿಕೆಯ ಸಂಗೀತ ನಾಡಗೌಡ, ಶ್ರೀಶೈಲ್ ದೂಡಮನಿ, ರವೀಂದ್ರ ಬಿರಾದಾರ, ಎಸ್ ಬಿ ಚಲವಾದಿ, ಅಕ್ಷತಾ ಚಲವಾದಿ, ಗುರಬಾಯಿ ಹೂಸ್ಮನಿ,ವಿರೇಶ ಢವಳಗಿ, ಮಧು ಭೋವಿ, ಒಕ್ಕೂಟದ ಅಧ್ಯಕ್ಷೆ ಮಂಜುಳಾ, ರೇಣುಕಾ ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!