ಉದಯವಾಹಿನಿ,ಚಿಂತಾಮಣಿ: ಪ್ರತಿವರ್ಷದಂತೆ ಈ ವರ್ಷವೂ ಹಿಂದೂ ಮುಸ್ಲಿಂ ಬಾಂಧವರು ಒಟ್ಟುಗೂಡಿ ಸೆಪ್ಟೆಂಬರ್ 28 ಹಾಗೂ 29 ರ ಗುರುವಾರ, ಶುಕ್ರವಾರ ,ಎರಡು ದಿನಗಳ ಕಾಲ ಚಿಂತಾಮಣಿ ತಾಲ್ಲೂಕಿನ ಮುರುಗಮಲ್ಲ ಗ್ರಾಮದ ಹಜರತ ಅಮ್ಮಾಜಾನ್ ಬಾವಾಜಾನ್ ದರ್ಗಾ ಉರುಸ್(ಗಂಧೋತ್ಸವ ) ಕಾರ್ಯಕ್ರಮ ವಿಜೃಂಭಣೆಯಿಂದ ಆಚರಿಸಲಿದ್ದಾರೆ. ಇದರಲ್ಲಿ ಭಾಗವಹಿಸುವ ಸಾರ್ವಜನಿಕರು, ಭಕ್ತಾದಿಗಳು,ಶಾಂತಿಯುತವಾಗಿ ಹಾಗೂ ವಿಜೃಂಭಣೆಯಿಂದ ಉರುಸು ನಡೆಯಲು ಸಹಕರಿಸಬೇಕೆಂದು ದರ್ಗಾ ಅಧ್ಯಕ್ಷರು ಹನೀಫ್ ಸಾಹೇಬ್ ಕೋರಿದರು.ಇಂದು ತಾಲೂಕಿನ ಮುರುಗಮಲ್ಲ ಗ್ರಾಮದ ಹಜರತ ಅಮ್ಮಾಜಾನ್ ಬಾವಾಜಾನ್ ಉರುಸ್ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು ಉರುಸ್ ಕಾರ್ಯಕ್ರಮದಲ್ಲಿ ಭಾಗವಹಿಸುವ ಪ್ರತಿಯೊಬ್ಬರು ತಮ್ಮ ಜೊತೆಯಲ್ಲಿ ಆಧಾರ್ ಕಾರ್ಡ್ ಕಡ್ಡಾಯವಾಗಿ ತರತಕ್ಕದ್ದು.ಭಕ್ತಾದಿಗಳು ದರ್ಗಾ ಸಮೀಪ ಇರುವ ಕೆರೆ, ಕುಂಟೆಗಳು ,ಬೆಟ್ಟಗಳ ಕಡೆ ಹೋಗುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ ಭಕ್ತಾದಿಗಳು ಇದಕ್ಕೆ ಸಹಕರಿಸಬೇಕು ಎಂದು ಹೇಳಿದ ಅವರು ದರ್ಗಾ ಆವರಣದಲ್ಲಿ ಸ್ವಚ್ಚತೆಯನ್ನು ಕಾಪಾಡಬೇಕು,ತಮ್ಮ ಜೊತೆಯಲ್ಲಿ ತಂದಿರುವ ಮಕ್ಕಳನ್ನು ಎಲ್ಲಂದರಲ್ಲಿ ಬಿಡಬಾರದು.ಉರುಸ್ ಗೆ ಬರುವ ಯುವಕರು ದಾರಿಯಲ್ಲಿ ಬೈಕ್ ವ್ಹೀಲಿಂಗ್ ಮಾಡಿದ್ರೆ ಪೊಲೀಸ್ ಇಲಾಖೆ ಅವರ ಮೇಲೆ ಸೂಕ್ತ ಕ್ರಮ ಜರುಗಿಸುತ್ತದೆ ಕಾನೂನನ್ನು ಕೈಗೆ ತೆಗೆದುಕೊಳ್ಳಲು ಹೋಗಬಾರದು ಎಂದು ತಿಳಿಸಿದರು. ಸೆಪ್ಟೆಂಬರ್ 28 ರಂದು ಊರಿನ ಗಂಧೋತ್ಸವದ ಮೆರವಣಿಗೆ ರಾತ್ರಿ 08:00 ಗಂಟೆಗೆ ನಡೆಯಲಿದ್ದು ತದಾನಂತರ ಧರ್ಮಗುರುಗಳ ಭಾಷಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.ಸೆಪ್ಟೆಂಬರ್ 29 ರಂದು ರಾತ್ರಿ 10 ಗಂಟೆಗೆ ವಕ್ಫ್ ಬೋರ್ಡ್ ವತಿಯಿಂದ ಗಂಧದ ಮೆರವಣಿಗೆ ಮಾಡಿ ಗಂಧವನ್ನು ಅರ್ಪಿಸಲಾಗುವದು.ನಗರ ಠಾಣೆಯ ಆರಕ್ಷಕ ನಿರೀಕ್ಷಕರಾದ ರಂಗಶಾಮಯ್ಯನವರು ಮಾತನಾಡಿ ಉರುಸ್ ಕಾರ್ಯಕ್ರಮಕ್ಕೆ ಆಗಮಿಸುವ ಯುವಕರು ದಾರಿಯಲ್ಲಿ ಬೈಕ್ ವ್ಹೀಲಿಂಗ್ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.ಈ ಸಂದರ್ಭದಲ್ಲಿ ತಾಲ್ಲೂಕು ದಂಡಾಧಿಕಾರಿಗಳಾದ ಸುದರ್ಶನ್ ಯಾದವ್,ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಹಾಜಿ ಆನ್ಸರ್ ಖಾನ್,ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷರಾದ ಮುಜಾಮಿಲ್ ಪಾಷಾ,ದರ್ಗಾ ಸಮಿತಿ ಅಧ್ಯಕ್ಷರಾದ ಹನೀಫ್ ಸೆಟ್,ಕಾರ್ಯದರ್ಶಿ ಆರಿಫ್ ಖಾನ್, ಮುಖಂಡರಾದ ಲಕ್ಷ್ಮೀನಾರಾಯಣ ರೆಡ್ಡಿ,ಉರುಸ್ ವಿಶೇಷ ಅಧಿಕಾರಿ ಡಾ!ಸೈಯದ್ ಸೂಫಿಯನ್, ಸೇರಿದಂತೆ ಎಲ್ಲಾ ಇಲಾಖೆಗಳ ಅಧಿಕಾರಿಗಳು,ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಗ್ರಾಮಸ್ಥರು,ಊರಿನ ಮುಖಂಡರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!