ಉದಯವಾಹಿನಿ, ಸಿಂಧನೂರು: ಭಾರತದ ಕುರಿತು ತಿಳಿಯಿರಿ(ಭಾರತ ಕೋ ಜಾನೋ) ರಸಪ್ರಶ್ನೆ ಕಾರ್ಯಕ್ರಮದಲ್ಲಿ ದುದ್ದು ಪೂಡಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆ -ಸಿ.ಬಿ.ಎಸ್.ಇ ಯ ವಿದ್ಯಾಥಿಗಳಿಗೆ ಪ್ರಥಮ ಸ್ಥಾನ”ಸಿಂಧನೂರು ಸೆಪ್ಟೆಂಬರ್:25: ಸಿಂಧನೂರಿನಲ್ಲಿರುವ ಪ್ರತಿಷ್ಟಿತ ಶಾಲೆಗಳಲ್ಲೊಂದಾಗಿರುವ ದುದ್ದುಪೂಡಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆ-ಸಿ.ಬಿ.ಎಸ್.ಇ, ಪಿ.ಡಬ್ಲ್ಯೂಡಿ ಕ್ಯಾಂಪ್ ಶಾಲೆಯ ವಿದ್ಯಾರ್ಥಿಗಳು, ದಿನಾಂಕ: 25/09/2023ರ ಸೋಮವಾರದಂದು ಭಾರತ ವಿಕಾಸ ಪರಿಷತ್‌-ಸಿಂಧನೂರು ಇವರು ಹಮ್ಮಿಕೊಂಡಿದ್ದ “ವಿಷಯ ಭಾರತದ ಕುರಿತು ತಿಳಿಯಿರಿ(ಭಾರತ ಕೋ ಜಾನೋ) ರಸಪ್ರಶ್ನೆ, ಕಾರ್ಯಕ್ರಮದ ಹಿರಿಯ (Senior) & ಕಿರಿಯರ (Junior) ಎರಡು ವಿಭಾಗದ ಸ್ಪರ್ಧೆಯಲ್ಲಿ ಭಾಗವಹಿಸಿ ಹಿರಿಯರ ವಿಭಾಗದಲ್ಲಿ ತೃತಿಯ ಸ್ಥಾನ ಹಾಗು ಕಿರಿಯರ ವಿಭಾಗದಲ್ಲಿ ಪ್ರಥಮಸ್ಥಾನವನ್ನುಗಳಿಸುವ ಮೂಲಕ ಕಿರಿಯರ ವಿಭಾಗದಲ್ಲಿ ದಿನಾಂಕ 29/09/2023ರಂದು ಗಂಗಾವತಿಯಲ್ಲಿ ನಡೆಯುವ ಉತ್ತರ ಕರ್ನಾಟಕ ಪ್ರಾಂತಿಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.ಈ ಸ್ಪರ್ಧೆಯಲ್ಲಿ ವಿವಿಧ ಶಾಲೆಗಳಿಂದ ಸುಮಾರು 14 ತಂಡಗಳು ಭಾಗವಹಿಸಿಸಿದ್ದು, ಹಿರಿಯರ ವಿಭಾಗದಲ್ಲಿ ಭಾಗವಹಿಸಿ ಪ್ರಶಸ್ತಿಯನ್ನು ಪಡೆದ ವಿದ್ಯಾರ್ಥಿಗಳಾದ 10 ನೆಯ ತರಗತಿಯ ಕು. ಮಲ್ಲಿಕಾರ್ಜುನ್.
ವಿಜಯ ಲಕ್ಷ್ಮಿ ಕಿರಿಯರ ಭಾಗವಹಿಸಿ ಪ್ರಶಸ್ತಿಯನ್ನು ಪಡೆದು ಉತ್ತರ ಕರ್ನಾಟಕ ಪ್ರಾಂತಿಯ ಮಟ್ಟದ (North Karnataka Zonal Level Competition) ಸ್ಪರ್ಧೆಗೆ ಆಯ್ಕೆಯಾದ ಕು. ಪೃಥ್ವಿರಾಜ ಬಿ(8ನೆಯ ತರಗತಿ), ಕು. ಶಿವಪ್ರಸಾದ (7ನೆಯ ತರಗತಿ) ಇವರಿಗೆ ಈ ಸಂಸ್ಥೆಯ ಮುಖ್ಯಸ್ಥರಾದ ಶ್ರೀ ರಾಮಕೃಷ್ಣ ಮೂರ್ತಿಯವರು ಹಾಗು ಪ್ರಾಂಶುಪಾಲೆಯರಾದ ಶ್ರೀಮತಿ ಸಂಧ್ಯಾರಾಣಿಯವರು ಸಂಸ್ಥೆಯ ಪರವಾಗಿ ವಿದ್ಯಾರ್ಥಿಗಳ ಸಾಧನೆಯನ್ನು ಶ್ಲಾಘಿಸಿದರು.ಗಂಗಾವತಿಯಲ್ಲಿಯಲ್ಲಿ ನಡೆಯುವ ಉತ್ತರ ಕರ್ನಾಟಕ ಪ್ರಾಂತಿಯ ಮಟ್ಟದ ಸ್ಪರ್ಧೆ (North Karnataka Zonal Level Competition)ಗೆ ಸಿಂಧನೂರಿನ ಪ್ರತಿನಿಧಿಗಳಾಗಿ ಹೊರಹೊಮ್ಮಿರುವ ವಿದ್ಯಾರ್ಥಿಗಳಿಗೆ, ಮಾರ್ಗದರ್ಶನ ನೀಡಿದ ಶಿಕ್ಷಕರಿಗೆ ಹಾಗೂ ಪಾಲಕವೃಂದವರಿಗೆ ಈ ಸಂಸ್ಥೆಯ ಮುಖ್ಯಸ್ಥರು ಅಭಿನಂದನೆಗಳನ್ನು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!