
ಉದಯವಾಹಿನಿ ಕೋಲಾರ :- ಕೋಲಾರ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೊತ್ತೂರು ಜಿ ಮಂಜುನಾಥ್ ರವರು ಇಂದು ಕೇಂದ್ರ ಸರ್ಕಾರದ ಪ್ರತಿಷ್ಠಿತ ಯೋಜನೆಯಲ್ಲಿ ಒಂದಾದ ಜಲಜೀವನ್ ಮಿಷನ್ ಮನೆ ಮನೆಗೆ ನೀರು ನಳ ಯೋಜನೆಗೆ ಬುಧವಾರ ವೇಮಗಲ್ ಹೋಬಳಿಯ ಕಟಗಟ್ಟೂರು, ಬೆಳ್ಳಳ್ಳಿ, ರಾಮಪುರ, ಕರೆನಹಳ್ಳಿ, ಎಂ ಮಲ್ಲಂಡಳ್ಳಿ, ವೀರಪುರ ಗ್ರಾಮಗಳಲ್ಲಿ ಗುದ್ದಲಿ ಪೂಜೆ ಸಲ್ಲಿಸಿದರು.
*ನಂತರ ಮಾತನಾಡಿದ ಕೋಲಾರ ಶಾಸಕರಾದ ಕೊತ್ತೂರು ಜಿ ಮಂಜುನಾಥ್ ರವರು ಇಂದು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಗ್ರಾಮಗಳಲ್ಲಿರುವ ಬಡ ಜನತೆಯ ಆರೋಗ್ಯದ ಹಿತ ದೃಷ್ಟಿಯಿಂದ ಶುದ್ಧ ಕುಡಿಯುವ ನೀರು ಮನೆಮನೆಗೆ ತಲುಪಿಸುವ ಯೋಜನೆ ಇದು ಆಗಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ ಮುಂದಿನ ದಿನಗಳಲ್ಲಿ ಇನ್ನೂ ಅನೇಕ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದು ಅಭಿವೃದ್ಧಿಪಡಿಸುತ್ತೇವೆ ಎಂದು ತಿಳಿಸಿದರು.*
ಕ್ಯಾಲನೂರು ಜಿಲ್ಲಾ ಪಂಚಾಯತ್ ಮುಖಂಡ ಉರಟ ಅಗ್ರಹಾರ ವೆಂಕಟರೆಡ್ಡಿ ಮಾತನಾಡಿ ಕೋಲಾರ ವಿಧಾನಸಭಾ ಕ್ಷೇತ್ರ ಹಲವು ವರ್ಷಗಳಿಂದ ಅಭಿವೃದ್ಧಿ ಕಾಣದೆ ಕುಂಠಿತಗೊಂಡಿತ್ತು ಆದರೆ ಕೋಲಾರದಲ್ಲಿ ಕೊತ್ತೂರು ಜಿ ಮಂಜುನಾಥ್ ರವರು ಶಾಸಕರಾದ ಮೇಲೆ ಅಭಿವೃದ್ಧಿ ಕಾಣುತ್ತಿದೆ. ಈಗ ಕೆಲವು ಗ್ರಾಮಗಳನ್ನು ಆಯ್ಕೆ ಮಾಡಿಕೊಂಡಿದ್ದು ಮುಂದಿನ ದಿನಗಳಲ್ಲಿ ಎಲ್ಲಾ ಗ್ರಾಮಗಳಿಗೂ ಜಲಜೀವನ್ ಮಿಷನ್ ಯೋಜನೆಯಡಿಯಲ್ಲಿ ಕುಡಿಯುವ ನೀರು ಒದಗಿಸುತ್ತಾರೆ ಹಾಗೂ ಕ್ಯಾಲನೂರು ಜಿಲ್ಲಾ ಪಂಚಾಯಿತಿ ಕ್ಷೇತ್ರವನ್ನು ಮಾದರಿ ಜಿಲ್ಲಾ ಪಂಚಾಯಿತಿ ಕ್ಷೇತ್ರವನ್ನಾಗಿ ಮಾರ್ಪಡು ಮಾಡಲು ನಾವು ಅವರಿಗೆ ಮನವಿ ನೀಡಿದ್ದೇವೆ ಅದೇ ರೀತಿ ಸ್ಪಂದಿಸುತ್ತಿದ್ದಾರೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಎಂ ಎಲ್ ಸಿ ಅನಿಲ್ ಕುಮಾರ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ನಾಗನಾಳ್ ಸೋಮಣ್ಣ, ಪಿ ಎಲ್ ಡಿ ಬ್ಯಾಂಕ್ ಮಾಜಿ ಅಧ್ಯಕ್ಷರಾದ ಚಂಜಿಮಲೆ ಬಿ ರಮೇಶ್, ತಿಪ್ಪೇನಹಳ್ಳಿ ನಾಗೇಶ್, ಗ್ರಾಮ ಪಂಚಾಯಿತಿ ಸದಸ್ಯರಾದ ಸೊಣ್ಣೆಗೌಡ, ಕಟಗಟ್ಟೂರು ಹರೀಶ್, ಬೈರಂಡಳ್ಳಿ ರಾಮಾಂಜಿ, ದಲಿತ ಮುಖಂಡ ನಾಗೇಶ್, ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
