
ಉದಯವಾಹಿನಿ, ಔರಾದ್ : ತಾಲೂಕಿನ ಪಾಶಾಪೂರ ಗ್ರಾಮದ ಸರ್ವ ನಂ. 10 ರಲ್ಲಿ ವಿಸ್ತೀರ್ಣ (1-20 ಗುಂಟೆ ಭೂಮಿಯಲ್ಲಿ ಸುಮಾರು 60 ವರ್ಷಗಳಿಂದ ಶವ ಸಂಸ್ಕಾರ ಸವಾಡಿ ಕಟ್ಟಡ) ಮಾಡುತ್ತಾ ಬಂದಿದ್ದಾರೆ ಆದರೆ ಸದರಿ ಸರ್ವೆ ನಂಬರದಲ್ಲಿ ಸರ್ಕಾರ 50 ವರ್ಷಗಳ ಹಿಂದೆ ಕೆರೆ ನಿರ್ಮಾಣ ಮಾಡಿದೆ, ಆದರೆ ಮಳೆಗಾಲದಲ್ಲಿ ಕೆರೆ ನೀರು ತುಂಬಿದ್ದರೆ, ಸ್ಮಶಾನ ಮುಳುಗಡೆ ಆಗಿ ಕೆಲವು ಶವ ಸಂಸ್ಕಾರ ಮಾಡಿದ ಸಮಾದಿಗಳು ಕೊಚ್ಚಿಕೊಂಡು ಹೋಗಿರುತ್ತವೆ. ಹೀಗಾಗಿ ಪಾಶಾಪೂರ ಗ್ರಾಮದ ಮಾದಿಗ ಸಮುದಾಯದ ಜನರಿಗೆ ಅಂತಿಮ ಸಂಸ್ಕಾರ ಮಾಡಲು ತೊಂದರೆಯಾಗುತ್ತಿದೆ. ಅದರಲ್ಲಿ ಮಳೆಗಾಲದಲ್ಲಂತು ತುಂಬಾ ತೊಂದರೆಯಾಗುತ್ತಿದ್ದು ಬೇರೆ ಕಡೆ ಸ್ಧಳಾವಕಾಶ ಮಾಡಿ ಕೋಡಬೇಕು ಎಂದು ಮುಖಂಡ ಬಂಟಿ ದರ್ಬಾರೆ ಅವರ ನೇತೃತ್ವದಲ್ಲಿ ಗ್ರಾಮಸ್ಥರು ತಹಶೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. ಪಾಶಾಪೂರ ಗ್ರಾಮದ ಮಾದಿಗ ಸಮುದಾಯಕ್ಕೆ ಬೇರೆಕಡೆ ಸ್ಮಶಾನ ಭೂಮಿಯನ್ನು ವ್ಯವಸ್ಥೆ ಮಾಡಿಕೊಡಬೇಕಾಗಿ ಸಮಸ್ತ ಮಾದಿಗ ಸಮಾಜ ಯಿಂದ ಮನವಿ ಮಾಡಿದ್ದಾರೆ. ಒಂದು ವೇಳೆ ನಿರ್ಲಕ್ಷಿಸಿದ್ದಲ್ಲಿ ಬೀದಿಳಿದು ಹೋರಾಟ ಬಾಡಲಾಗುವುದೆಂದು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಸಂತೋಷ ಶರಣಪ್ಪಾ, ಪ್ರಕಾಶ ಪ್ರಭು, ರವಿ ಶಂಕರ, ಸಂಜೆವಕುಮಾರ ಶಿವರಾಮ ಇದ್ದರು.
