
ಉದಯವಾಹಿನಿ ದೇವರಹಿಪ್ಪರಗಿ: ಪ್ರತಿಭೆ ಎಂಬುದು ಪರಿಶ್ರಮದಿಂದ ಬರುವಂತಹದ್ದು,ಸಾಧಿಸಬೇಕೆಂಬ ಸಂಕಲ್ಪವನ್ನು ಇಟ್ಟುಕೊಂಡು ವಿದ್ಯಾರ್ಥಿಗಳು ಮುಂದಡಿ ಇಡಬೇಕೆಂದು ಕೊಂಡಗೂಳಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ದಾವಲಬಿ.ಹು. ಸೋಲಾಪುರ ಅವರು ಹೇಳಿದರು.ತಾಲ್ಲೂಕಿನ ಕೊಂಡಗೂಳಿ ಗ್ರಾಮದ ಎಮ್.ಪಿ.ಎಸ್ ಶಾಲೆಯಲ್ಲಿ ಆಯೋಜಿಸಿದ್ದ ಕೊಂಡಗೂಳಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು.ಪ್ರತಿಭೆಗೆ ಯಾರೂ ಹಣ ಕೊಡಬೇಕಿಲ್ಲ.ಅದು ತನ್ನಿಂದ ತಾನೇ ಉದಯಿಸುವ ಪ್ರಕ್ರಿಯೆ, ಪ್ರತಿಭೆಯನ್ನು ಗುರ್ತಿಸಿ ಬೆಳೆಸಿ ಪ್ರೋತ್ಸಾಹಿಸುವ ಕೆಲಸವಾಗಬೇಕು ಎಂದು ಹೇಳಿದರು. ತಾಲ್ಲೂಕಿನ ಶಿಕ್ಷಣ ಸಂಯೋಜಕ ಐ.ಎಫ್.ಭಾಲ್ಕಿ,ಬಿ.ಆರ್.ಪಿ ಗಳಾದ ಜಗದೀಶ ಅಲ್ದಿಮಠ ಹಾಗೂ ಶ್ರೀದೇವಿ ರೆಬಿನಾಳ ಇವರುಗಳು ಸಸಿಗೆ ನೀರೆರೆಯುವದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಸ್ಥಳೀಯ ಸಿ.ಆರ್.ಪಿ ಎಮ್. ಎನ್. ಒಡೆಯರ ಪ್ರಾಸ್ಥಾವಿಕವಾಗಿ ಮಾತನಾಡಿ,ಮಕ್ಕಳಿಗೆ ಪ್ರತಿಜ್ಞೆ ವಿಧಿಯನ್ನು ಬೋಧಿಸುವದರ ಜೊತೆಗೆ ಕಾರ್ಯಕ್ರಮಕ್ಕೆ ದಾನ ನೀಡಿದ ದಾನಿಗಳನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಗ್ರಾ.ಪಂ ಉಪಾಧ್ಯಕ್ಷರಾದ ಶಿವಲೀಲಾ ಕುರುಮಲ್ಲಪ್ಪಗೋಳ,ತಾಲ್ಲೂಕಿನ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಎ.ಎಚ್. ವಾಲೀಕಾರ, ಸ್ಥಳೀಯ ಶಾಲಾ ಮುಖ್ಯ ಗುರುಮಾತೆ ಬಿ.ಬಿ. ಅಗ್ನಿ, ಸಂಘದ ಖಜಾಂಚಿ ಪಿ.ಸಿ. ತಳಕೇರಿ, ಜಿ.ಬಿ. ಹೊಕ್ಕುಂಡಿ, ಎಸ್.ಎಸ್. ಅಂಬಲಿ, ಮಡಿವಾಳಪ್ಪ ಬ್ಯಾಲಾಳ, ಮಹಾಂತೇಶ ಮಮದಾಪೂರ, ಜಿ.ಪಿ.ಬಿರಾದಾರ, ಎನ್.ಎಸ್. ನಾಗೂರ,ಎಸ್.ವಿ. ಕೋಟೀನ, ಗ್ರಾಮ ಪಂಚಾಯತಿಯ ಸರ್ವ ಸದಸ್ಯರು ಹಾಗೂ ಎಸ್.ಡಿ. ಎಮ್. ಸಿ ಪದಾಧಿಕಾರಿಗಳು, ಕೊಂಡಗೂಳಿ ಕ್ಲಸ್ಟರ್ ವ್ಯಾಪ್ತಿಯ ಮುಖ್ಯಗುರುಗಳು, ಸಹಶಿಕ್ಷಕರು, ಮಕ್ಕಳು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.
