
ಉದಯವಾಹಿನಿ,ಚಿಂಚೋಳಿ: ಮಾಜಿ ಮುಖ್ಯಮಂತ್ರಿ ದಿ.ವೀರೇಂದ್ರ ಪಾಟೀಲ ಅವರ ಪತ್ನಿ ಶಾರದಾ ವಿ.ಪಾಟೀಲ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಕೇಂದ್ರ ಸಚಿವ ಭಗವಂತ ಖೂಬಾ,ಕಲಬುರ್ಗಿ ಸಂಸದ ಡಾ.ಉಮೇಶ ಜಾಧವ,ಆಳಂದ ಶಾಸಕ ಬಿ.ಆರ್.ಪಾಟೀಲ,ಅಫಜಲಪುರ ಶಾಸಕ ಎಂ.ವೈ.ಪಾಟೀಲ,ಮಾಜಿ ಸಂಸದ ಡಾ.ಬಿ.ಜಿ ಪಾಟೀಲ,ಮಾಜಿ ಸಚಿವ ಬಾಬುರಾವ ಚವ್ಹಾಣ,ಅಂತಿಮ ನಮನ ಸಲ್ಲಿಸಿದರು.ಪಟ್ಟಣದ ವೀರೇಂದ್ರ ಪಾಟೀಲ ಶಿಕ್ಷಣ ಸಂಸ್ಥೆಯ ಅವರಣದಲ್ಲಿ ಮಾಜಿ ಸಿಎಂ ದಿ.ವೀರೇಂದ್ರ ಪಾಟೀಲ ಪತ್ನಿ ಶಾರದಾ ವಿ.ಪಾಟೀಲ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕರ ಅಂತಿಮ ದರ್ಶನಕ್ಕಾಗಿ ಇರಿಸಿ 2-30ಗಂಟೆಗೆ ವೀರಶೈವ ಲಿಂಗಾಯತ ಸಮಾಜದ ವಿಧಿ ವಿಧಾನಗಳಂತೆ ಪಟ್ಟಣದ ದಿ.ವೀರೇಂದ್ರ ಪಾಟೀಲ ಸಮಾಧಿ ಪಕ್ಕ ಅಂತ್ಯಕ್ರಿಯೆ ಜರುಗಿತ್ತು. ಮೃತರ ಪುತ್ರ ಮಾಜಿ ಶಾಸಕ ಕೈಲಾಸನಾಥ ಪಾಟೀಲ ಪರಿವಾರ ಸೇರಿದಂತೆ ಅನೇಕ ಗಣ್ಯರು ಅಂತಿಮ ದರ್ಶನ ಪಡೆದು ಪುಷ್ಪ ನಮನಗಳು ಸಲ್ಲಿಸಿದರು.
ಗಣ್ಯರಾದ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಜಗದೇವ ಗುತ್ತೇದಾರ,ಬಾಬುರಾವ ಪಾಟೀಲ,ಸುಭಾಷ್ ರಾಠೋಡ್,ಜಿಪಂ.ಮಾಜಿ ಅಧ್ಯಕ್ಷ ದೀಪಕನಾಗ್ ಪುಣ್ಯಶೇಟ್ಟಿ,ಅನೀಲಕುಮಾರ ಜಮಾದಾರ,ಬಿಜೆಪಿ ಅಧ್ಯಕ್ಷ ಸಂತೋಷ ಗಡಂತಿ,ಶಾಮರಾವ ರಾಠೋಡ್,ರಾಮಶೇಟ್ಟಿ ಪವ್ಹಾರ,ಶಶಿಧರ ಸೂಗೂರ,ಚಿರಂಜೀವಿ ಕುಂಚಾವರಂ,ಆನಂದ ಟೈಗರ್, ಬಸವರಾಜ ಮಾಲಿ,ಕೆಎಂ ಬಾರಿ,ಅಬ್ದುಲ್ ಬಾಷೀದ್,ಮಸೂದ್ ಸೌದಾಗಾರ,ಶರಣುಪಾಟೀಲ ಮೋತಕಪಳ್ಳಿ, ಗೌತಮ್ ವೈಜೀನಾಥ ಪಾಟೀಲ,ಚಿತ್ರಶೇಖರ ಪಾಟೀಲ,ಭೀಮಶೇಟ್ಟಿ ಮುರುಡಾ,ಆರ್.ಗಣಪತರಾವ,ಅನೀಲಕುಮಾರ ಹುಡದಳ್ಳಿ,ಮಹೇಮೂದ ಪಟೇಲ,ಶ್ರೀನಿವಾಸ ಬಂಡಿ,ಸೇರಿದಂತೆ ಅನೇಕರು ಅಂತಿಮ ನಮನ ಸಲ್ಲಿಸಿದರು.
