ಉದಯವಾಹಿನಿ,ಚಿಂಚೋಳಿ: ಪಟ್ಟಣದ ಸೇರಿದಂತೆ ಕ್ಷೇತ್ರದ ರೈತರ,ಉನ್ನತ ಶಿಕ್ಷಣದ,ಮೂಲಭೂತ ಸೌಕರ್ಯ ಕುರಿತಂತೆ ಅಭಿವೃದ್ಧಿಗಾಗಿ ವಿವಿಧ ಬೇಡಿಕೆಗಳು ಈಡೇರಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆಯವರಿಗೆ ಮನವಿಪತ್ರ ಸಲ್ಲಿಕೆ ಮಾಡಲಾಯಿತು ಎಂದು ಹಿರಿಯ ಸಮಾಜ ಸೇವಕ ರಮೇಶ ಯಾಕಾಪೂರ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟನೆ ಹೊರಡಿಸಿದ ಅವರು,ತಾಲ್ಲೂಕಿನಲ್ಲಿ ಸರ್ಕಾರ ಪೋಲಿಟೇಕನಿಕಲ್,ಬಿ.ಎಡ್ ಮತ್ತು ಸ್ನಾತಕೋತ್ತರ ಕೇಂದ್ರ ಪ್ರಾರಂಭಿಸಬೇಕು,ಚಂದ್ರಂಪಳ್ಳಿ ಜಲಾಶಯ ಹತ್ತಿರ ರೈತರ ತರಬೇತಿ ಕಟ್ಟಡ ಖಾಲಿಯಿದ್ದು ಅದರಲ್ಲಿ ರೈತ ತರಬೇತಿ ಕೇಂದ್ರ ಸರ್ಕಾರ ಪ್ರಾರಂಭಿಸಿ,ಕ್ಷೇತ್ರದ ಏತ್ತಿಪೋತ್ತ,ಮಾಣಿಕಪೂರ,ಚಂದ್ರಂಪಳ್ಳಿ,ನಾಗರಾಳ ನೀರಾವರಿ ಯೋಜನೆಗಳು ಕುಂಚಾವರಂ ವನ್ಯಧಾಮಗಳನ್ನು ಪ್ರವಾಸಿತಾಣವೆಂದು ಸರ್ಕಾರ ಘೋಷಿಸಲಿ,ರೈತರು ಪಡೆದ ಬೆಳೆಸಾಲ ಸರ್ಕಾರ ಮನ್ನಾ ಮಾಡಬೇಕು,ಮುಲ್ಲಾಮಾರಿ ನದಿಗೆ ಬಡಿದರ್ಗಾದ ಬುಗ್ಗಿಯಿಂದ ಹರಿಜನವಾಡವರೆಗೆ ತಡೆಗೋಡೆ ನಿರ್ಮಿಸಬೇಕು,ಪುರಸಭೆಯ 23ವಾರ್ಡಗಳಲ್ಲಿ ಮೂಲಭೂತ ಸೌಕರ್ಯ ಒದಗಿಸಲು ಸುಮಾರು 20ಕೋಟಿ ವಿಶೇಷ ಅನುದಾನ ನೀಡಬೇಕು,ಸರ್ಕಾರಿ ಜಮೀನು ಆಕ್ರಮವಾಗಿ ಸಾಗುವಳಿ ಮಾಡುವ ರೈತರಿಗೆ ಸಕ್ರಮಗೊಳಿಸಿ ಹಕ್ಕುಪತ್ರ ನೀಡಬೇಕು,ಸರ್ಕಾರಿ ಜಮೀನಿನಲ್ಲಿ ಸುಮಾರು 10ವರ್ಷ ವಾಸದ ಮನೆ ನಿರ್ಮಿಸಿಕೊಂಡ ನಿವಾಸಿಗಳಿಗೆ ಆಕ್ರಮ ಸಕ್ರಮ ಯೋಜನೆ ಅಡಿಯಲ್ಲಿ ಹಕ್ಕು ಪತ್ರ ವಿತರಿಸಬೇಕು ಎಂದು ಮನವಿ ಸಲ್ಲಿಸಲಾಯಿತು ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!