
ಉದಯವಾಹಿನಿ ಮಸ್ಕಿ: ಪಟ್ಟಣದ ಬಸವೇಶ್ವರ ವೃತ್ತದಿಂದ ಮುದಗಲ ಕ್ರಾಸ್ ವರೆಗೆ ನಡೆಯುತ್ತಿರುವ ಡಿವೈಡರ್ ರಸ್ತೆ ಕಾಮಗಾರಿ ಕಳಪೆ ಮಟ್ಟದಿಂದ ಕೂಡಿದ್ದು, ಗುಣಮಟ್ಟದ ಕಾಮಗಾರಿ ಕೈಗೊಳ್ಳುವಂತೆ ಪಟ್ಟಣದ ಸಾರ್ವಜನಿಕರು ಕಾಮಗಾರಿಯನ್ನು ತಡೆ ಹಿಡಿದರು. ರಾಷ್ಟ್ರೀಯ ಹೆದ್ದಾರಿ 150A ಡಿವೈಡರ್ ಕಾಮಗಾರಿ ಎಸ್ಟಿಮೆಂಟ್ ನಲ್ಲಿರುವಂತೆ ಮಾಡುತ್ತಿಲ್ಲ, ಕಳಪೆ ಮಟ್ಟದ ಸಾಮಾಗ್ರಿಗಳನ್ನು ಬಳಿಸುತ್ತಿದ್ದಾರೆ, ಅರ್ಥ ವರ್ಕ ಮಾಡಿದ ಬಳಿಕ ಮರಂ ಹಾಕಬೇಕು, ಮರಂ ಹಾಕಿದ ಬಳಿಕ ಗುಣಮಟ್ಟದ ಕಬ್ಬಿಣದ ರಾಡ್ ಬಳಕೆ ಮಾಡಬೇಕು, ಇವು ಯಾವುದನ್ನು ಕಾಮಗಾರಿಯಲ್ಲಿ ಬಳಕೆ ಮಾಡುತ್ತಿಲ್ಲ, ಗುಣಮಟ್ಟದ ಕಾಮಗಾರಿ ಕೈಗೊಳ್ಳಬೇಕೆಂದು ಪಟ್ಟಣದ ಸಾರ್ವಜನಿಕರು ಆಗಮಿಸಿ ಕಾಮಗಾರಿಯನ್ನು ತಡೆ ಹಿಡಿದ ಘಟನೆ ನಡೆಯಿತು. ಕಾಮಗಾರಿಯನ್ನು ವೀಕ್ಷಿಸಲು ಬಂದಿರುವ ಇಂಜಿನಿಯರ್ ಅವರಿಗೆ ಸಾರ್ವಜನಿಕರು ತರಾಟೆಗೆ ತಗೆದುಕೊಂಡಿರುವ ಪ್ರಸಂಗ ನಡೆಯಿತು, ಕಾಮಗಾರಿ ನಿಲ್ಲಿಸುವಂತೆ ಇಂಜಿನಿಯರ್ ಅವರು ಗುತ್ತಿಗೆದಾರರಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ಮಲ್ಲಯ್ಯ ಮುರಾರಿ. ನಾಗಭೂಷಣ,ರವಿಕುಮಾರ ಮಡಿವಾಳ. ಬಸವರಾಜ ನಯಕವಾಡಿ. ಮಲ್ಲಿಕ್ ಮುರಾರಿ. ಜೆಡಿಎಸ್ ಮುಖಂಡ ರಾಘವೇಂದ್ರ ಬಳಗಾನೂರ ಸೇರಿದಂತೆ ಇನ್ನಿತರರು ಗುಣಮಟ್ಟದ ಕಾಮಗಾರಿ ಕೈಗೊಳ್ಳುವಂತೆ ಅಧಿಕಾರಿಗಳಿಗೆ ದೂರಿದರು.
