????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????

ಉದಯವಾಹಿನಿ,ಶಿಡ್ಲಘಟ್ಟ: ಗ್ರಾಮೀಣ ಪ್ರದೇಶಗಳಿಗೆ ಸರ್ಕಾರಿ ಬಸ್ ವ್ಯವಸ್ಥೆ ಕಲ್ಪಿಸಿ ಕೊಡುವುದಾಗಿ ಕೊಟ್ಟ ಮಾತಿನಂತೆ, ನುಡಿದಂತೆ ನಡೆದುಕೊಂಡಿದ್ದಾರೆ ಶಾಸಕ ಬಿ ಎನ್ ರವಿಕುಮಾರ್.
ಶಿಡ್ಲಘಟ್ಟ ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಸರ್ಕಾರಿ ಬಸ್ ಸೇವೆ ಕಲ್ಪಿಸುವ ಕಾರ್ಯಕ್ರಮವನ್ನು ವೈ.ಹುಣಸೇನಹಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಶಾಸಕ ಬಿಎನ್ ರವಿಕುಮಾರ್ ಹಸಿರು ನಿಶಾನೆ ತೋರಿಸಿ ಉದ್ಘಾಟಿಸಿದರು. ಕಳೆದ ಒಂದು ತಿಂಗಳ ಹಿಂದೆ ಕಸಬಾ ಹೋಬಳಿಯ ವೈ ಹುಣಸೇನಹಳ್ಳಿ ಸೇರಿದಂತೆ ಇನ್ನಿತರ ಗ್ರಾಮಗಳ ಮುಖಂಡರು ಶಾಸಕ ಬಿಎನ್ ರವಿಕುಮಾರ್ ಬಳಿ, ನಮ್ಮ ಗ್ರಾಮಕ್ಕೆ ಅನೇಕ ವರ್ಷಗಳಿಂದ ಬಸ್ ವ್ಯವಸ್ಥೆ ಇಲ್ಲ. ದಯವಿಟ್ಟು ಸರ್ಕಾರದಿಂದ ಬಸ್ ವ್ಯವಸ್ಥೆ ಕಲ್ಪಿಸಿಕೊಡಿ ಎಂದು ಹೇಳಿಕೊಂಡಿದ್ದರು.ಅದರಂತೆ ಬುಧವಾರ ಗ್ರಾಮೀಣ ಭಾಗದಲ್ಲಿ ಸರ್ಕಾರಿ ಬಸ್ ವ್ಯವಸ್ಥೆ ಮಾಡಿಕೊಟ್ಟ ಶಾಸಕ ಜನರ ಮೆಚ್ಚುಗೆಗೆ ಪಾತ್ರರಾದರು.ಶಿಡ್ಲಘಟ್ಟ ಮಾರ್ಗವಾಗಿ ಹಲಸೂರು ದಿನ್ನೆ,ಕೈವಾರ,ವಯಾ ಚಿಂತಾಮಣಿ,ಶಿಡ್ಲಘಟ್ಟ ಬುಡಗವಾರಹಳ್ಳಿ,ಅಲಗುರ್ಕಿ ಮಾರ್ಗವಾಗಿ ಚಿಂತಾಮಣಿ,ಶಿಡ್ಲಘಟ್ಟ,ದೊಗರನಾ ಯಕನಹಳ್ಳಿ ಮಾರ್ಗವಾಗಿ ಚಿಂತಾಮಣಿ,ಶಿಡ್ಲಘಟ್ಟ ಮಳಮಾಚನಹಳ್ಳಿ ಯಿಂದ ಜಂಗಮಕೋಟೆ,ಇನ್ನೂ ಅನೇಕ ಮಾರ್ಗಗಳಿಗೆ ಬಸ್ ವ್ಯವಸ್ಥೆ ಮಾಡಲಾಯಿತು.
ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ಬಸ್ ವ್ಯವಸ್ಥೆ ಇಲ್ಲದೆ ಅನಾನುಕೂಲ ಆಗುತ್ತಿದೆ ಎಂದು ಮುಖಂಡರ ಒತ್ತಾಯದಿಂದ ಶಿಡ್ಲಘಟ್ಟ ಕ್ಷೇತ್ರದ 8 ಭಾಗಗಳಿಗೆ ಬುಧವಾರ ಸರ್ಕಾರಿ ಬಸ್ ವ್ಯವಸ್ಥೆಯನ್ನು ಕಲ್ಪಿಸಿದ್ದೇವೆ. ಈ ಕ್ಷೇತ್ರದ ಜನಸಾಮಾನ್ಯರು ನನಗೆ ಸೂಕ್ತ ಬೆಂಬಲ ನೀಡಿದರೆ, ಈ ಕ್ಷೇತ್ರದ ಅಭಿವೃದ್ಧಿ ಮಾಡಲು ತುಂಬಾ ಅನುಕೂಲವಾಗುತ್ತದೆ. ಈ ಕ್ಷೇತ್ರದಲ್ಲಿ ಜನಸಾಮಾನ್ಯರು ನೆಮ್ಮದಿಯಿಂದ ಜೀವನ ಸಾಗಿಸಬೇಕು ಎಂಬುದೇ ನಮ್ಮ ಪ್ರಮುಖ ಗುರಿ ಹಾಗಾಗಿ ಈ ಕ್ಷೇತ್ರದ ಸಾವಿರಾರು ಜನರ ಆಶೀರ್ವಾದ ಹಾಗೂ ಹಿರಿಯರ ಶ್ರಮ ಇವತ್ತು ನನಗೆ ಸಿಕ್ಕಿರುವ ಪ್ರತಿಫಲ ಈ ಕ್ಷೇತ್ರದ ವಿದ್ಯಾಭ್ಯಾಸಕ್ಕಾಗಿ, ಆರೋಗ್ಯಕ್ಕಾಗಿ, ಹಾಗೂ ಮೂಲಭೂತ ಸೌಕರ್ಯ ಕಲ್ಪಿಸುವುದು ನನ್ನ ಮುಖ್ಯ ಗುರಿ ಎಂದು ಶಾಸಕ ಬಿಎನ್ ರವಿಕುಮಾರ್ ತಿಳಿಸಿದರು.ಈ ಸಂದರ್ಭದಲ್ಲಿ ಬಂಕ್ ಮುನಿಯಪ್ಪ, ಹುಜಗೂರು ರಾಮಣ್ಣ, ಡಿಪೋ ವ್ಯವಸ್ಥಾಪಕ ಶ್ರೀನಾಥ್, ತಾದೂರು ರಘು,ಸಾರಿಗೆ ಸಂಚಾಲಕ ಮಂಜುನಾಥ್, ಗ್ರಾ ಪಂ ಅಧ್ಯಕ್ಷ ನಾರಾಯಣಸ್ವಾಮಿ, ಸದಾಶಿವ,ಲಕ್ಷ್ಮೀಪತಿ,ಶೀಗೆಹಳ್ಳಿ ನಾರಾಯಣಸ್ವಾಮಿ, ಕುಂದಲಗುರ್ಕಿ ಚಂದ್ರಶೇಖರ್, ಕುಮಾರ್,ರಾಮಾಂಜಿನಪ್ಪ, ಚನ್ನರಾಯಪ್ಪ, ರವಿಕುಮಾರ್, ಪಿಡಿಒ ರೇಣುಕಾ ಹಾಗೂ ಗ್ರಾ ಸದಸ್ಯರು ಹಾಗೂ ಸಿಬ್ಬಂದಿ ಹಾಜರಿದ್ದರು.
