??????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????
ಉದಯವಾಹಿನಿ ಹೊಸಕೋಟೆ :ಪಶುಪಾಲನೆ ಮಾಡುವ ಹಾಗೂ ಹೈನುಗಾರಿಕೆ ಅವಲಂಭಿತ ರೈತಾಪಿ ವರ್ಗ ಯಾವುದೇ ಮೂಢನ೦ಬಿಕೆಗೆ ಒಳಗಾಗದೆ ಕಡ್ಡಾಯವಾಗಿ ಕಾಲುಬಾಯಿ ಜ್ವರ ಲಸಿಕೆ ಹಾಕಿಸಿ ಎಂದು ಶಾಸಕಶರತ್ ಬಚ್ಚೇಗೌಡ ಕರೆ ನೀಡಿದರು. ಹೊಸಕೋಟೆ ತಾಲೂಕಿನ ದೊಡ್ಡಹರಳಗೆರೆ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ನ್ಯಾಷನಲ್ ಅನಿಮಲ್ ಡಿಸಿಸ್ ಕಂಟ್ರೋಲ್ ಪ್ರೋಗ್ರಾಮ್ ಅಡಿಯಲ್ಲಿ 4ನೇ ಸುತ್ತಿನ ಕಾಲುಬಾಯಿ ಜ್ವರರೋಗದ ವಿರುದ್ಧ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಹೊಸಕೋಟೆ ತಾಲೂಕಿನ ಪಶುಪಾಲನ ಇಲಾಖೆ ಹಾಗೂ ಬೆಂಗಳೂರು ಹಾಲು ಒಕ್ಕೂಟದ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಸೆ.26ರಿಂದ ಅ. 1೦ರವರೆಗೆ ಈ ಕಾರ್ಯಕ್ರಮ ಜಾರಿಯಲ್ಲಿರುತ್ತದೆ. ಕಡ್ಡಾಯವಾಗಿ ರೈತ ಬಾಂಧವರು ಲಸಿಕೆ ಹಾಕಿಸುವ ಮೂಲಕ ಪ್ರಯೋಜನ ಪಡೆಯಬೇಕಾಗಿದೆ ಎಂದರು. ಪಶುಪಾಲನ ಇಲಾಖೆ ಸಹಾಯಕ ನಿರ್ದೇಶಕ ನಾರಾಯಣಸ್ವಾಮಿ ಮಾತನಾಡಿ, 4ನೇ ಸುತ್ತಿನಕಾರ್ಯಕ್ರಮರಾಜ್ಯಾದ್ಯಂತ ಏಕಕಾಲದಲ್ಲಿ ಚಾಲನೆಗೊಂಡಿದ್ದು, ಪಶುಸಾಕಾಣಿಕೆದಾರರು ಯಾವುದೇ ಸಂಶಯವಿಲ್ಲದೇ ದನಕರುಗಳಿಗೆ ಲಸಿಕೆ ಹಾಕಿಸಿ ರೋಗ ಮುಕ್ತ ಹೊಸಕೋಟೆ ಮಾಡಬೇಕಾಗಿಕೋರಿದರು.…
ಬಮೂಲ್‌ನ ಉಪವ್ಯವಸ್ಥಾಪಕಡಾ. ಶಿವಾಜಿ ನಾಯಕ್ ಮಾತನಾಡಿ, ಹೊಸಕೋಟೆ ತಾಲೂಕಿನಲ್ಲಿ 33348 ರಾಸುಗಳಿದ್ದು, 271 ಗ್ರಾಮಗಳಲ್ಲಿ 4 ತಂಡಗಳ ಮೂಲಕ 125 ಮೇಲ್ವಿಚಾರಕರು 6೦ ಮಂದಿ ವೈದ್ಯರತಂಡ ಕಾರ್ಯಕ್ರಮ ಯಶಸ್ವಿಗೊಳಿಸಲು ಸನ್ನದ್ಧರಾಗಿರುತ್ತಾರೆ ಎಂದರು. ಕಾರ್ಯಕ್ರಮದಲ್ಲಿ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ವಿ. ಸತೀಶ್‌ಗೌಡ,ದೊಡ್ಡ ಅರಳಗೆರೆ ಗ್ರಾಪಂನ ಅಧ್ಯಕ್ಷೆ ನರಸಮ್ಮ ನರಸಿಂಹಮೂರ್ತಿ, ತಾಪಂನ ಮಾಜಿ ಸದಸ್ಯರಾದ ನಾರಾಯಣಪ್ಪ, ಡಾ.ಡಿ.ಟಿ.ವೆಂಕಟೇಶ್, ಡೇರಿ ಅಧ್ಯಕ್ಷ ರಾಮಕೃಷ್ಣಪ್ಪ, ಗ್ರಾಪಂ ಸದಸ್ಯ ಲಕ್ಷ್ಮಣ್, ಮುಖಂಡರಾದ ಆನ0ದಪ್ಪ, ಗುಳ್ಳಹಳ್ಳಿ ಮುನಿಯಪ್ಪ ಹಾಗೂ ವೈದ್ಯಾಧಿಕಾರಿಗಳು ಹಾಜರಿದ್ದರು.
