
ಉದಯವಾಹಿನಿ ಸಿಂಧನೂರು: ಮಸ್ಕಿ ತಾಲ್ಲೂಕಿನಲ್ಲಿ ಮಣಿಕಂಠ ಪಿಎಸ್‌ಐ (ಕಾ&ಸು) ಮಸ್ಕಿ ಪೊಲೀಸ್ ಠಾಣೆ, ರಾಯಚೂರು ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಪೊಲೀಸ್ ಇಲಾಖೆಯ ಒಬ್ಬ ಜವಾಬ್ದಾರಿಯುತ ಅಧಿಕಾರಿಯಾಗಿದ್ದು, ಇಲಾಖೆಯ ನಿಯಮಗಳನುಸಾರವಾಗಿ ಮತ್ತು ಪ್ರಾಮಾಣಿಕವಾಗಿ ಹಾಗೂ ಶಿಸ್ತು ಬದ್ಧತೆಯಿಂದ ಕೆಲಸ ನಿರ್ವಹಿಸುವುದು ಅವರ ಅದ್ಯ ಕರ್ತವ್ಯವಾಗಿರುತ್ತದೆ. ಆದರೆ ಪಿಎಸ್ಐ ಮಣಿಕಂಠ ಎಂಬ ವ್ಯಕ್ತಿ ತಾನು ಉನ್ನತ ಸ್ಥಾನದಲ್ಲಿ ಇದ್ದಾನೆ ಎಂದು ಅಮ್ಮು ಮತ್ತು ಅಧಿಕಾರದ ದರ್ಪ ಅಹಂಕಾರದಿಂದ ನಿರುಪಾದಿ ಎನ್ನುವ ವ್ಯಕ್ತಿಯು ದಿ:20 ರಂದು ರಾತ್ರಿ 7:00 ಗಂಟೆಗೆ ಅಕ್ರಮ ಮರಳು ಸಾಗಾಣಿಕೆ ಮಾಡುತ್ತಿದ್ದಾನೆ ಎಂಬ ಮಾಹಿತಿ ಬಂದಿದ್ದು, ಮಾಹಿತಿ ಮೇರೆಗೆ ಮಣಿಕಂಠ ಪಿಎಸ್‌ಐ (ಕಾ&ಸು) ಮಸ್ಕಿ ಪೊಲೀಸ್ ಠಾಣೆ ರವರು ನಿರುಪಾದಿಗೆ ಜಾತಿ ನಿಂದನೆ ಮತ್ತು ಆತನಿಗೆ ಪುಷ್ಪ (ಕುಂಡಿ / Buttock) ಗಳ ಮೇಲೆ ಪ್ಲಾಸ್ಟಿಕ್ ಪೈಪ್‌ದಿಂದ ಹೊಡೆದಿದ್ದರಿಂದ ರಕ್ತ ಹೆಪ್ಪುಗಟ್ಟಿ ಬಾಸುಂಡ ಬಂದಿರುವುದಲ್ಲದೇ, ಜೀವ ಬೆದರಿಕೆ ಹಾಕಿದ್ದನ್ನು ಉದಯ ವಾಹಿನಿ ದಿನಪತ್ರಿಕೆ ವರದಿಗಾರ ವೀರೇಶ್ ಹೊಸಳ್ಳಿ ಅವರು ಇದರ ಬಗ್ಗೆ ವಿಷಯ ಕಲಿಯೋಕೆ ಎರಡು ಮೂರು ದಿನಗಳಿಂದ ಪೇಸ್ಟ್ ವರದಿ ಮಾಡಿತ್ತು. ಉದಯ ವಾಹಿನಿ ದಿನಪತ್ರಿಕೆ ಸುದ್ದಿ ನೋಡಿ ಎಚ್ಚೆತ್ತುಕೊಂಡ ವಾಲ್ಮೀಕಿ ಸಮುದಾಯದ ರಾಜಕಾರಣಿಗಳು ಮತ್ತು ಮುಖಂಡರು ಮಹಾ ಸಭಾದ ಅಧ್ಯಕ್ಷರು ಯುವಕರು ಸೇರಿ ಮಸ್ಕಿ ಪೋಲಿಸ್ ಠಾಣೆ ಮುಂದೆ ಒಂದು ದೊಡ್ಡ ಹೋರಾಟವನ್ನೇ ಹಮ್ಮಿಕೊಂಡು. ನಿರುಪಾದಿಯ ಪತ್ನಿಯಾದ ಶ್ರೀಮತಿ, ಲಕ್ಷ್ಮಿದೇವಿ ರವರು ದಿ:23 ರಂದು ದೂರು ಸಲ್ಲಿಸಿದ್ದು. ವಿಷಯ ತಿಳಿದ ಸಾಮಾಜಿಕ ಜಾಲ ತಾಣಗಳಲ್ಲಿ ಮತ್ತು ಮಾಧ್ಯಮ ಟಿ.ವಿ. ಚಾನಲ್ ಗಳಲ್ಲಿ ಸುದ್ದಿ ಹರಿದಾಡುವುದಕ್ಕೆ ಶುರುವಾಯಿತು. ಮೇಲಾಧಿಕಾರಿಗಳು ನಿರಪಾದಿ ಹೆಂಡತಿ ದೂರಿನ ಮೇರೆಗೆ ಇದರ ಬಗ್ಗೆ ಗಂಭೀರವಾಗಿ ಪರಿಗಣಿಸಿ ಕಾನೂನು ಎಲ್ಲರಿಗೂ ಒಂದೇ ಎಂದು ಮಣಿಕಂಠ ಪಿಎಸ್‌ಐ (ಕಾಸು) ರವರ ವಿರುದ್ಧ ಮಸ್ಕಿ ಠಾಣೆಯಲ್ಲಿ ಅಪರಾಧ ಸಂ.
124/2023 ಕಲಂ: 324, 504, 506 ಐಪಿಸಿ ಮತ್ತು 3(1) (ಆ) (ಎಸ್), 3(2)(ಎ) ಎಸ್‌ಸಿ / ಎಸ್‌ಟಿ ತಿದ್ದುಪಡಿ ಕಾಯ್ದೆ-2015 ರ ಪ್ರಕಾರ ಪ್ರಕರಣ ದಾಖಲಾಗಿರುತ್ತದೆ. ಮಣಿಕಂಠ ಪಿಎಸ್‌ಐ ಮಸ್ಕಿ ಪೊಲೀಸ್ ಠಾಣೆಯಲ್ಲಿ ಒಬ್ಬ ಜವಾಬ್ದಾರಿಯುತ ಹುದ್ದೆಯಲ್ಲಿದ್ದು ಕೊಂಡು ಅಪರಾಧ ಕೃತ್ಯದಲ್ಲಿ ಭಾಗಿಯಾಗಿರುವ ವ್ಯಕ್ತಿಯ ಬಗ್ಗೆ, ಯಾವ ರೀತಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ನಿಮಗೆ ಕಾನೂನು ಬಗ್ಗೆ ತಿಳುವಳಿಕೆ ಇದ್ದರೂ ಸಹ ದಿ:20/09/2023 ರಂದು ರಾತ್ರಿ 7:30 ಗಂಟೆಗೆ ನಿರುಪಾದಿ ಎನ್ನುವ ವ್ಯಕ್ತಿಯು, ತನ್ನ ಟ್ರ್ಯಾಕ್ಟರ್‌ನಲ್ಲಿ ಅಕ್ರಮ ಮರುಳು ಸಾಗಾಣಿಕೆಯನ್ನು ಸಾನಬಾಳ ಕ್ರಾಸ್ ಹತ್ತಿರ ಸಾಗಿಸುತ್ತಿದ್ದಾನೆಂಬ ಮಾಹಿತಿ ನಿಮಗೆ ತಿಳಿದಿದ್ದು, ಸದರಿ ಮಾಹಿತಿಯ ಮೇರೆಗೆ ನೀವು ಆ ಟ್ರ್ಯಾಕ್ಟರ್‌ನೊಂದಿಗೆ ನಿರುಪಾದಿಯನ್ನು ಠಾಣೆಗೆ ಕರೆದುಕೊಂಡು ಬಂದು, ಆತನ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವುದು ನಿಮ್ಮ ಅದ್ಯ ಕರ್ತವ್ಯವಾಗಿರುತ್ತದೆ. ನಿಮ್ಮ ದುರ್ವತ್ರನೆಯಿಂದ ಪೊಲೀಸ್ ಇಲಾಖೆಯ ಘನತೆಗೆ ಧಕ್ಕೆ ಉಂಟಾಗಿ ಸಾರ್ವಜನಿಕರಲ್ಲಿ ಪೊಲೀಸ್ ಇಲಾಖೆಯ ಬಗ್ಗೆ ಕೆಟ್ಟ ಪರಿಣಾಮ ಉಂಟಾಗಿರುತ್ತದೆ. ನೀವು ಕರ್ತವ್ಯದಲ್ಲಿ ದುರ್ನಡತೆ ತೋರಿರುವುದರಿಂದ ಕರ್ನಾಟಕ ರಾಜ್ಯ ಪೊಲೀಸ್ (ಶಿಸ್ತು ನಡವಳಿಗಳು) ನಿಯಮಗಳು 1965 (ತಿದ್ದುಪಡಿ 1989) ನಿಯಮ 5 ರ ಮೇರೆಗೆ ಇರುವ ಅಧಿಕಾರವನ್ನು ಚಲಾಯಿಸಿ ಈ ತಕ್ಷಣದಿಂದ ಜಾರಿಗೆ ಬರುವಂತ ಸೇವೆಯಿಂದ ಪಿಎಸ್ಐ ಮಣಿಕಂಠ ಅವರನ್ನು ಅಮಾನತ್ತು ಗೊಳಿಸಲಾಗಿದೆ.

