ಉದಯವಾಹಿನಿ ಮುದ್ದೇಬಿಹಾಳ ; ಮುದ್ದೇಬಿಹಾಳ ಪಟ್ಟಣದಲ್ಲಿ ಪುಂಡ ಪೋಕರಿ ಪಡ್ಡೆ ಹುಡುಗರು ಶಾಲೆ, ಕಾಲೇಜು ಮುಗಿಸಿ ಬರುವ ವಿದ್ಯಾರ್ಥಿನಿಯರನ್ನು ಹಿಂಬಾಲಿಸಿಕೊಂಡು ಬಂದು ಕೀಟಲೆ ಮಾಡುವುದು ವಿದ್ಯಾರ್ಥಿನಿಯರು ಬಸ್​ನಿಂದ‌ ಇಳಿದು ಶಾಲೆ, ಕಾಲೇಜಿಗೆ ಬರುವಾಗ ಮತ್ತು ಶಾಲೆ ಕಾಲೇಜು ಮುಗಿಸಿ ಮರಳಿ ಊರಿಗೆ ಹೋಗೋವಾಗ ಬೈಕ್ ಮೇಲೆ ಹುಡುಗಿಯರನ್ನು ಹಿಂಬಾಲಿಸಿ ಬರುವ ಪಡ್ಡೆ ಹುಡುಗರ ಕಾಟಕ್ಕೆ ವಿದ್ಯಾರ್ಥಿನಿಯರು ಮಾತ್ರವಲ್ಲ ಅವರ ಪೋಷಕರಿಗೆ ಮತ್ತು ಶಿಕ್ಷಕರಿಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ. ಪಡ್ಡೆ ಹುಡುಗರ ಈ ಕಾಟ ಪಟ್ಟಣದ ಬಸ್ ನಿಲ್ದಾಣದಲ್ಲಿ ಹೆಚ್ಚಾಗಿದೆ. ಪಟ್ಟಣದಲ್ಲಿ ಹಲವಾರು ಶಾಲೆ ಮತ್ತು ಕಾಲೇಜುಗಳಿವೆ. ಇಲ್ಲಿಗೆ ವಿದ್ಯಾರ್ಜನೆಗೆಂದು ಬರುವ ಬಹುತೇಕ ವಿದ್ಯಾರ್ಥಿನಿಯರು ಸಾರಿಗೆ ಬಸ್​ಗಳಲ್ಲೇ ಬರುತ್ತಾರೆ.ಮತ್ತು ಶಾಲಾ ಬಸ್​ಗಳಲ್ಲಿ ಬರುವ ವಿದ್ಯಾರ್ಥಿನಿಯರಿಗೆ ಪಡ್ಡೆ ಹುಡುಗರ ಕಾಟ ಶುರುವಾಗಿದೆ.ಇದಕ್ಕೆ ಕಡಿವಾಣಹಾಕಬೇಕು ಈ ಪುಂಡರ ಮೇಲೆ ಕಾನೂನು ಕ್ರಮಕ್ಕೆ ಆಗ್ರಹಿಸಿ ತಾಲೂಕ ದಲಿತ ವಿದ್ಯಾರ್ಥಿ ಪರಿಷತ್ ಬುಧುವಾರ ಮುದ್ದೇಬಿಹಾಳ ಠಾಣೆಯ ಪಿಎಸೈ ಸಂಜಯ ತಿಪ್ಪರೆಡ್ಡಿ ಹಾಗೂ ಕ್ರೈಂ ಪಿಎಸೈ ಆರ್ ಎಲ್ ಮನ್ನಾಬಾಯಿ ಅವರಿಗೆ ಪ್ರತ್ಯೇಕ ಮನವಿಯನ್ನು ಸಲ್ಲಿಸಿತು.ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ತಾಲೂಕ ದಲಿತ ಪರಿಷತ್ತು ಅಧ್ಯಕ್ಷ ಮುತ್ತು ಚಲವಾದಿ ವಿದ್ಯಾರ್ಥಿನಿಯರು ಶಾಲೆ, ಕಾಲೇಜಿಗೆ ಬರುವಾಗ ಮತ್ತು ಶಾಲೆ, ಕಾಲೇಜು ಮುಗಿಸಿ ಮನೆಗೆ ವಾಪಸ್ ಹೋಗಲು ಬಸ್ ನಿಲ್ದಾಣಕ್ಕೆ ಬರುವಾಗ ಅವರನ್ನು ಹಿಂಬಾಲಿಸಿಕೊಂಡು ಬಂದು ಕೀಟಲೆ ಮಾಡುತ್ತಿದ್ದಾರೆ. ವಿದ್ಯಾರ್ಥಿನಿಯರಿಗೆ ಅಸಭ್ಯವಾಗಿ ಮಾತನಾಡೋದು, ಅನುಚಿತವಾಗಿ ವರ್ತಿಸೋದು ಮಾಡಲಾಗುತ್ತಿದೆ. ಹೀಗಾಗಿ ಶಾಲೆ, ಕಾಲೇಜಿಗೆ ಬರುವಾಗ ಮತ್ತು ಶಾಲೆ, ಕಾಲೇಜು ಮುಗಿಸಿ ಊರಿಗೆ ವಾಪಸ್ ಬಸ್ ಹತ್ತುವವರೆಗೆ ಆಯಾ ಶಾಲೆ, ಕಾಲೇಜಿನ ಶಿಕ್ಷಕರು ಬಸ್ ನಿಲ್ದಾಣಕ್ಕೆ ಬಂದು ವಿದ್ಯಾರ್ಥಿನಿಯರನ್ನು ಬಸ್​ನಲ್ಲಿ ಕೂರಿಸಿ, ಬಸ್ಸು ನಿಲ್ದಾಣದಿಂದ ಬಿಟ್ಟ ಮೇಲೆ ವಾಪಸ್ ಹೋಗುವಂಥಾ ಪರಿಸ್ಥಿತಿ ನಿರ್ಮಾಣ ಆಗಿದೆ ಮುದ್ದೇಬಿಹಾಳ ಪಟ್ಟಣದ ಬಸ್ ನಿಲ್ದಾಣ ಸೇರಿದಂತೆ ಅನೇಕ ಸ್ಥಳಗಳಲ್ಲಿ ಈ ಪೋಕರಿಗಳ ಹಾವಳಿ ಹೆಚ್ಚಾಗಿದ್ದು ಇದಕ್ಕೆ ಪೋಲಿಸರು ಕಡಿವಾಣ ಹಾಕಬೇಕು ಎಂದು ಆಗ್ರಹ ಪಡಿಸಿದರು.ಭೀಮಸೇನೆ ಯುವ ಘಟಕ ಅಧ್ಯಕ್ಷ ಪರಶುರಾಮ ಚಲವಾದಿ ಶಾಲಾ ಕಾಲೇಜು ವಿದ್ಯಾರ್ಥಿನಿಯರನ್ನು ಚುಡಾಯಿಸುವರಿಗೆ ಕಾನೂನು ರೀತಿಯಲ್ಲಿ ಕ್ರಮವಾಗಬೇಕು ಅವರನ್ನು ಬಂಧಿಸಿ ಜೈಲಿಗೆ ಹಾಕಿದಾಗ ಮಾತ್ರ ಯಾರು ಹೆಣ್ಣು ಮಕ್ಕಳನ್ನು ಚುಡಾಯಿಸುವುದಿಲ್ಲ ತಪಿಸತ್ಥರು ಯಾರೇ ಆಗಿದ್ದರು ಮೊದಲು ಅಂತಹವರನ್ನು ಜೈಲಿಗೆ ಹಾಕಬೇಕು ಎಂದರು.ಈ ವೇಳೆ ದಲಿತ ವಿದ್ಯಾರ್ಥಿ ಪರಿಷತ್ತನ ಲಾಲಸಾಬ ಚಲವಾದಿ ,ಮಲ್ಲಪ್ಪ ಹುಡೇದ ,ಗಂಗಾಧರ ಚಲವಾದಿ, ಪ್ರಜ್ವಲ್ ಮುರಾಳ, ಖೈಮು ಚೌದರಿ, ಸಮೀರ ದ್ರಾಕ್ಷಿ, ರಾಜಹ್ಮದ ನಾಯ್ಕೋಡಿ, ಅಬ್ದುಲ್ ಸಲಾಂ‌‌ ಮುಲ್ಲಾ, ರಾಯಪ್ಪ ಚಲವಾದಿ, ಚಂದ್ರಶೇಖರ ಚಲವಾದಿ, ಶ್ರೀಧರ ಚಲವಾದಿ ಮುಂತಾದವರು ಉಪಸ್ಥಿತರಿದ್ದರು

ಶಾಲಾ, ಕಾಲೇಜುಗಳ ಶಿಕ್ಷಕರು ವಿದ್ಯಾರ್ಥಿನಿಯರ ಹಿತದೃಷ್ಟಿಯಿಂದ ಬಸ್ ನಿಲ್ದಾಣದಲ್ಲಿ ಸಿಸಿ ಕ್ಯಾಮರಾ ಅಳವಡಿಸಬೇಕು ಪಟ್ಟಣದ ಬಹುತೇಕ ಸಿಸಿ ಕ್ಯಾಮರಾಗಳು ಕೆಲಸ ಮಾಡುವುದಿಲ್ಲ ಮತ್ತು ಕೆಲವು ಕಡೆಗೆ ಸಿಸಿ ಕ್ಯಾಮರಾಗಳೇ ಇಲ್ಲಾ ಬಸ್ ನಿಲ್ದಾಣದಲ್ಲಿ ಪೊಲೀಸ್ ಭದ್ರತೆ ಒದಗಿಸಬೇಕು. 

ಹೆಣ್ಣು ಮಕ್ಕಳನ್ನು ಚುಡಾಯಿಸುವ ರೋಡ್‌ರೋಮಿಯೊಗಳ, ಮಹಿಳೆ-ಮಕ್ಕಳ ಮೇಲೆ ದೌರ್ಜನ್ಯ ಎಸಗುವ ಕಾಮುಕರ, ಶಾಲಾ-ಕಾಲೇಜುಗಳ ಬಳಿ ವಿದ್ಯಾರ್ಥಿನಿಯರ ಬೆನ್ನು ಬೀಳುವ ಪುಂಡು-ಪೋಕರಿಗಳ ಕೃತ್ಯಗಳಿಗೆ ಕಡಿವಾಣ ಹಾಕಲು ಪೊಲೀಸ್ ಇಲಾಖೆ ನಗರ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ‘ದೂರು ಪೆಟ್ಟಿಗೆ’ ಸ್ಥಾಪನೆ ಮಾಡಬೇಕು.

Leave a Reply

Your email address will not be published. Required fields are marked *

error: Content is protected !!