
ಉದಯವಾಹಿನಿ ಚಿಂತಾಮಣಿ: ರಾಜ್ಯದ ಹಿಂದೂ ಮುಸ್ಲಿಮರ ಭಾವೈಕ್ಯತೆಯ ಕೇಂದ್ರ ಹಾಗೂ ಪುಣ್ಯ ತಾಣವಾಗಿರುವ ಚಿಂತಾಮಣಿ ತಾಲೂಕಿನ ಮುರುಗಮಲ್ಲ ಗ್ರಾಮದ ಹಜರತ ಅಮ್ಮಾಜಾನ್ ಬಾವಾಜಾನ್ ದರ್ಗಾ ಉರುಸ್ ಎರಡು ದಿನಗಳ ಕಾಲ ಅತ್ಯಂತ ಅದ್ದೂರಿಯಾಗಿ ನಡೆಯುತ್ತಾ ಬರುತ್ತಿದೆ. ಕಳೆದ ಹಲವು ವರ್ಷಗಳಿಂದ ರಾಜ್ಯ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ವೈದ್ಯ ವೃತ್ತಿ ಸಲ್ಲಿಸುತ್ತಾ ಬಂದಿರುವ ಖ್ಯಾತ ವೈದ್ಯರಾದ ಡಾ! ಸೈಯದ್ ಸೂಫಿಯಾನ್ ಹಬೀಬಿ ಅವರನ್ನು ಕರ್ನಾಟಕ ರಾಜ್ಯ ವಕ್ಫ್ ಬೋರ್ಡ್ ಮುರುಗಮಲ್ಲ ದರ್ಗಾ ಉರುಸ್ ನ, ವಿಶೇಷ ಅಧಿಕಾರಿಯಾಗಿ ನೇಮಕ ಮಾಡಿ ಕಳುಹಿಸುತ್ತಿದೆ.ಈ ಬಾರಿ ಎಂದರೆ ಸೆಪ್ಟೆಂಬರ್ 28-29 ರ. ಎರಡು ದಿನಗಳ ಕಾಲ ನಡೆಯಲಿರುವ ಉರುಸ್ ಗೆ ವಿಶೇಷ ಅಧಿಕಾರಿಯಾಗಿ ನೇಮಕ ಮಾಡಿದೆ. ಅವರ ಹಾಗೂ ಸ್ಥಳೀಯ ಆರೋಗ್ಯ ಅಧಿಕಾರಿಗಳ ಸಮ್ಮುಖದಲ್ಲಿ ಉರುಸ್ ಪ್ರಯುಕ್ತ ಎರಡು ದಿನಗಳ ಕಾಲ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬರವನ್ನು ಏರ್ಪಡಿಸಲಾಗಿದೆ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಡಾ! ಸೈಯದ್ ಸೂಫಿಯಾನ್ ರವರು ಪತ್ರಿಕಾಗೋಷ್ಠಿಯಲ್ಲಿ ಮನವಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ವಕ್ಫ್ ಅಧಿಕಾರಿ ರಬ್, ವಕೀಲರಾದ ಅನ್ವರ್ ಖಾನ್,ವಕ್ಫ್ ಸಿಬ್ಬಂದಿ ನವಾಜ್, ಇದ್ದರು.
