
ಉದಯವಾಹಿನಿ ಸಿರುಗುಪ್ಪ: ತಾಲ್ಲೂಕಿನ ತೆಕ್ಕಲಕೋಟೆ ಪಟ್ಟಣದ ಷಾ ಹುಸೇನ್ ನಗರದ ಶಾದಿ ಮಹಲ್ ನ ಆವರಣದಲ್ಲಿ ನಡೆದ ಸಿರುಗುಪ್ಪ ತಾಲ್ಲೂಕು ಕರ್ನಾಟಕ ರಾಜ್ಯ ಪಿಂಜಾರ/ನದಾಫ್ ಸಂಘದ ವತಿಯಿಂದ ಪಿಂಜಾರ ಜನಾಂಗದವರಿಗೆ ಅಜೀವ ಸದಸ್ಯತ್ವದ ಸ್ಮಾರ್ಟ್ ಕಾರ್ಡ್ ಅನ್ನು ಸಂಘದ ಸಂಸ್ಥಾಪಕರಾದ ದಿವಂಗತ ಡಾಕ್ಟರ್ ಹಿರೇಹಾಳ ಇಬ್ರಾಹಿಂ ಸಾಹೇಬ್ ಅವರ ಪುತ್ರರಾದ ದಾದಾ ಕಲಂದರ್ ಮತ್ತು ಜಿಲ್ಲಾ ಪದಾಧಿಕಾರಿಗಳ ಸಮ್ಮುಖದಲ್ಲಿ ಸಂಘದ ಅಜೀವ ಸದಸ್ಯತ್ವದ ಸ್ಮಾರ್ಟ್ ನನ್ನು ಸದಸ್ಯರಿಗೆ ವಿತರಿಸಲಾಯಿತು.ಈ ಸಂದರ್ಭದಲ್ಲಿ ರಾಜ್ಯ ಘಟಕದ ರಾಜ್ಯ ಖಜಾಂಚಿ ಟಿ.ಚಂದಸಾಬು, ಬಳ್ಳಾರಿ ಜಿಲ್ಲಾ ಘಟಕ ಪ್ರಧಾನ ಕಾರ್ಯದರ್ಶಿ ಟಿ.ಅಲ್ಲಾಬಕಾಷ , ಬಳ್ಳಾರಿ ಜಿಲ್ಲಾ ಘಟಕದ ಖಜಾಂಚಿ ಪಿ.ಮೌಲಾಸಾಬು, ಪಿ.ಶೇಕ್ಷವಲಿ, ವಿಭಾಗಯ ಕಾರ್ಯದರ್ಶಿ ಪಿ.ಮಾಬುಬಾಷ, ಸಿರುಗುಪ್ಪ ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ನಬೀಸಾಬು, ಸಿರುಗುಪ್ಪ ತಾಲ್ಲೂಕು ಘಟಕ ಕಾರ್ಯದರ್ಶಿ ದಾದಾ ಕಲಂದರ್ ಹಾಗೂ ಸಮಾಜದ ಮುಖಂಡರುಗಳಾದ ಎನ್.ಖಾದರ್ ಬಾಷಾ ಮುತುವಲ್ಲಿ ಮನ್ಸೂರ್ ಮಸೀದಿ, ಎಂ. ಮಾಬುಸಾಬು ಮುತುವಲ್ಲಿ ಸಮ್ದಾನಿ ಮಸೀದಿ,ಎಂ.ಎಸ್.ಬಂದೇನವಾಜ್ ಹಾಗೂ ಪಿಂಜಾರ/ ನದಾಫ್ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.
