
ಉದಯವಾಹಿನಿ ಸಿರುಗುಪ್ಪ : ಇಲ್ಲಿಯವರೆಗೂ ೪೫ ಅಪಘಾತ ಪ್ರಕರಣಗಳ ಬಗ್ಗೆ ನಮಗೆ ಮಾಹಿತಿ ಬಂದಿದ್ದು ಇನ್ನು ಮುಂದೇ ಏನೇ ಅಪಘಾತಗಳು ಜರುಗಿದಲ್ಲಿ ಸಂಬAದಿಸಿದ ಗುತ್ತಿಗೆದಾರರು ವiತ್ತು ಅಧಿಕಾರಿಗಳು ನೇರ ಹೊಣೆಯಾಗುತ್ತೀರಿ ಹಾಗೂ ಕಾಮಗಾರಿ ಅವಧಿ ಮುಗಿದರೂ ಮತ್ತೇಕೆ ಅವರನ್ನು ಮುಂದುವರಿಸುತ್ತಿದ್ದೀರಿ ಅವರನ್ನು ಕಪ್ಪು ಪಟ್ಟಿಗೆ ಸೇರಿಸಬೇಕೆಂದು ಜಿಲ್ಲಾ ಉಸ್ತುವಾರಿ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣ, ಯುವ ಸಬಲೀಕರಣಾ ಮತ್ತು ಕ್ರೀಡಾ ಸಚಿವರಾದ ಬಿ.ನಾಗೇಂದ್ರ ಅವರು ಪ್ರಗತಿ ಪರಿಶೀಲನಾ ಸಭೆಯಲ್ಲಿ ಹೆದ್ದಾರಿ ಕಾಮಗಾರಿ ವಿಳಂಬದ ಬಗ್ಗೆ ಕಿಡಿಕಾರಿದರು.ನಗರದ ಕಮ್ಮವಾರಿ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ನಡೆದ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಪ್ರಗತಿಯ ವಿವರ ಕೇಳಿದ ಅವರು ಮೂಲಭೂತ ಸೌಲಭ್ಯಗಳಿಗಾಗಿ ಸರ್ಕಾರದಿಂದ ಅನುದಾನವೇನಾದರೂ ಬೇಕಿದ್ದರೆ ನಮ್ಮ ಗಮನಕ್ಕೆ ತನ್ನಿ, ಸಾರ್ವಜನಿಕರಿಗೆ ಶಿಕ್ಷಣ, ಆರೋಗ್ಯ, ಕುಡಿಯುವ ನೀರು, ಸ್ವಚ್ಛತೆ, ಅತ್ಯಗತ್ಯವಾಗಿದ್ದು ಎಲ್ಲಾ ಇಲಾಖೆಗಳ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ವಾಸ್ತವವಾಗಿರಬೇಕೆಂದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಸಂಸದ ಸಂಗಣ್ಣ ಕರಡಿ ಅವರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಎಲ್ಲಾ ಸೌಲಭ್ಯಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗಳಿಗೂ ದೊರಕುವಂತೆ ಅಧಿಕಾರಿಗಳು ಕ್ರಮವಹಿಸಬೇಕೆಂದರು. ಶಾಸಕ ಬಿ.ಎಮ್.ನಾಗರಾಜ ಅವರು ತಾಲೂಕಿನಲ್ಲಿ ಜಲಜೀವನ್ ಮಿಷನ್ ಯೋಜನೆ ಅರೆಬರೆ ಕಾಮಗಾರಿ ನಡೆದಿದ್ದು ಸಂಪೂರ್ಣ ವಿಫಲವಾಗಿದೆ. ಆರ್.ಓ ಘಟಕಗಳು ಶಿಥಿಲಗೊಂಡಿವೆ. ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರು, ಸಿಬ್ಬಂದಿಗಳಿಲ್ಲದೇ ಲ್ಯಾಬ್ ಮಿಷನ್‌ಗಳು ಕೊಳೆಯುತ್ತಿವೆ. ಶಿಕ್ಷಣದಲ್ಲಿ ಫಲಿತಾಂಶ ಕುಗ್ಗಿದೆ. ಸಾರಿಗೆ ಬಸ್ ಸಂಪರ್ಕ ಸಮಸ್ಯೆ ಹಳ್ಳಿಗಳಲ್ಲಿ ಹೆಚ್ಚಾಗಿದೆ. ಆಯಾ ಇಲಾಖೆಗಳಲ್ಲಿನ ಸಮಸ್ಯೆ ಪರಿಹರಿಸುವಂತೆ ಸೂಚಿಸಿದರು. ನಿಟ್ಟೂರು ಮತ್ತು ಸಿಂಗಾಪುರದ ನಡುವಿನ ಸೇತುವೆ ವಿಳಂಬವಾಗಿದ್ದು ಸೇತುಬಂಧ ಅಥವಾ ಸಿ.ಆರ್.ಎಫ್.ಎಲ್‌ನಲ್ಲಿ ಕಾಮಗಾರಿ ಆರಂಭಿಸುವAತೆ ತಿಳಿಸಿದರು. ಇದೇ ವೇಳೆ ಸಹಾಯಕ ಆಯುಕ್ತ ಹೇಮಂತ್‌ಕುಮಾರ್, ಸಿ.ಇ.ಓ ರಾಹುಲ್.ಎಸ್. ಡಿವೈಎಸ್‌ಪಿ ಎಸ್.ಟಿ.ಒಡೆಯರ್, ತಹಶೀಲ್ದಾರ್ ಹೆಚ್.ವಿಶ್ವನಾಥ್ ಮತ್ತು ಅಧಿಕಾರಗಳು ಇದ್ದರು
