ಉದಯವಾಹಿನಿ, ಮುಂಬೈ: ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಗಣೇಶ ವಿಸರ್ಜನೆಯ ಹಿನ್ನೆಲೆಯಲ್ಲಿ ಅಹಿತಕರ ಘಟನೆಗೆ ಅವಕಾಶ ಮಾಡಿಕೊಡದಿರಲು ಬರೋಬ್ಬರಿ ೧೯ ಸಾವಿರ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ. ಗಣೇಶ ಚತುರ್ಥಿ ೧೦-ದಿನಗಳ ಹಬ್ಬವಾಗಿದ್ದು, ಹಿಂದೂ ಚಂದ್ರನ ಕ್ಯಾಲೆಂಡರ್ ತಿಂಗಳ ’ಭಾದ್ರಪದ’ ನಾಲ್ಕನೇ ದಿನದಂದು ಪ್ರಾರಂಭವಾಗಿದ್ದು ಇಂದು ಗಣೇಶ ಮೂರ್ತಿ ವಿಸರ್ಜನೆ ನಡೆಯಲಿದ್ದು ಈ ಹಿನ್ನೆಲೆಯಲ್ಲಿ ಬಿಗಿ ಭದ್ರತೆ ಒದಗಿಸಲಾಗಿದೆ.
ಇಂದು ಈದ್-ಇ-ಮಿಲಾದ್ ಇರುವ ಹಿನ್ನೆಲೆಯಲ್ಲಿ ಬಾರಿ ಸಂಖ್ಯೆಯಲ್ಲಿ ಭದ್ರತೆ ಒದಗಿಸಲಾಗಿದೆ. ಪೊಲೀಸರ ಮನವಿ ಮೇರೆಗೆ ಅನಂತ ಚತುರ್ದಶಿ ಪ್ರಯುಕ್ತ ಗುರುವಾರದ ಬದಲು ಈದ್-ಎ-ಮಿಲಾದ್ ಮೆರವಣಿಗೆ ನಡೆಸಲು ವಿವಿಧ ಮುಸ್ಲಿಂ ಸಂಘಟನೆಗಳು ಮತ್ತು ಧಾರ್ಮಿಕ ಮುಖಂಡರು ನಿರ್ಧರಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!