ಉದಯವಾಹಿನಿ, ನವದೆಹಲಿ: ದೇಶಾದ್ಯಂತ ಬಫರ್ ಸ್ಟಾಕ್‌ಗಳಿಂದ ಈರುಳ್ಳಿ ಮಾರಾಟ ಮಾಡಲು ಕೇಂದ್ರ ಸರ್ಕಾರ, ಭಾರತೀಯ ರಾಷ್ಟ್ರೀಯ ಕೃಷಿ ಸಹಕಾರಿ ಮಾರುಕಟ್ಟೆ ಒಕ್ಕೂಟಕ್ಕೆ (ನಫೆಡ್) ಸೂಚನೆ ನೀಡಿದೆ.
ಮಂಡಿಗಳಿಗೆ ಟ್ರಕ್‌ಗಳ ಮೂಲಕ ಸಾಗಿಸುವ ಮತ್ತು ಹರಾಜು ಮಾಡುವ ಬದಲು ಕೇಂದ್ರದ ಆನ್‌ಲೈನ್ ಇ-ನ್ಯಾಮ್ ಪ್ಲಾಟ್‌ಫಾರ್ಮ್ ಮೂಲಕ ಅದರ ಬಫರ್ ಸ್ಟಾಕ್‌ಗಳಿಂದ ಈರುಳ್ಳಿ ಮಾರಾಟ ಮಾಡಲು ಕೇಂದ್ರ ಸರ್ಕಾರ ಕೃಷಿ ಸಹಕಾರಿ ಸಂಸ್ಥೆಗೆ ನಿರ್ದೇಶನ ನೀಡಿದೆ.
ಉತ್ತಮ ಬೆಲೆಯಲ್ಲಿ ಈರುಳ್ಳಿ ಮಾರಾಟ ಮಾಡಲು ಸಹಕರಿಸುವ ಜೊತೆಗೆ ಮಾರುಕಟ್ಟೆ ಮಧ್ಯಸ್ಥಿಕೆಗಾಗಿ ಕಡಿಮೆ ದರದಲ್ಲಿ ಈರುಳ್ಳಿ ಮಾರಾಟ ಮಾಡಲು ಸರ್ಕಾರ ಪಾವತಿಸುವ ವೆಚ್ಚ ಸಹ ಉಳಿಸುತ್ತದೆ. ಇ-ನ್ಯಾಮ್ ಪ್ಲಾಟ್‌ಫಾರ್ಮ್ ಮೂಲಕ ಈರುಳ್ಳಿ ಹರಾಜು ಮಾಡುವುದರಿಂದ ಯಾವುದೇ ಹಸ್ತಕ್ಷೇಪ ಮತ್ತು ಪಕ್ಷಪಾತದ ನಿರ್ಧಾರ ನಿವಾರಿಸುತ್ತದೆ ಎಂದು ಮೂಲಗಳು ತಿಳಿಸಿವೆ. ಈರುಳ್ಳಿ ಖರೀದಿಸಿ ಸಂಗ್ರಹಿಸಿದ ನಂತರ ಅಗ್ಗದ ದರದಲ್ಲಿ ಲಭ್ಯವಾಗುವಂತೆ ಮಾಡುವ ವೆಚ್ಚವನ್ನು ಸರಕಾರವೇ ಭರಿಸುತ್ತದೆ.
