ಉದಯವಾಹಿನಿ, ನವದೆಹಲಿ: ಭಾರತದಲ್ಲಿ ವಯಸ್ಸಾದ ಜನಸಂಖ್ಯೆ ತ್ವರಿತವಾಗಿ ಹೆಚ್ಚಾಗುತ್ತಿದೆ. ೨೦೩೬ರ ವೇಳೆಗೆ ಈ ಸಂಖ್ಯೆ ಒಟ್ಟಾರೆ ಜನಸಂಖ್ಯೆಯ ಶೇಕಡಾ ೧೫ ರಷ್ಟು ಇರಲಿದೆ ಎಂದು ವಿಶ್ವಸಂಸ್ಥೆಯ ವರದಿ ತಿಳಿಸಿದೆ.
ಅದರಲ್ಲಿ ೬೦ ವರ್ಷ ಮತ್ತು ಅದಕ್ಕೂ ಹೆಚ್ಚಿನ ವಯಸ್ಸಿನವರ ಸಂಖ್ಯೆ ಹೆಚ್ಚಾಗುತ್ತಿದೆ. ಯುವಕರೇ ಹೆಚ್ಚಾಗಿರುವ ದೇಶದಲ್ಲಿ ಈಗ ಹಿರಿಯ ನಾಗರಿಕರ ಸಂಖ್ಯೆ ಹೆಚ್ಚುತ್ತಿದೆ ಎಂದು ತಿಳಿಸಿದೆ.
“ಭಾರತದಲ್ಲಿ ವೃದ್ಧಾಪ್ಯದ ವೇಗ” ವನ್ನು ಸೂಚಿಸುವ ವಿಶ್ವಸಂಸ್ಥೆಯ ವರದಿ ಬಿಡುಗಡೆಯಾಗಿದ್ದು ೨೦೧೦ ರಿಂದ ಹಿರಿಯ ಜನಸಂಖ್ಯೆಯ ತೀವ್ರ ಬೆಳವಣಿಗೆ ಹೆಚ್ಚಾಗುತ್ತಿದೆ. ಪ್ರಸ್ತುತ ಯುವಕರ ದೊಡ್ಡ ಸಮೂಹವನ್ನು ಹೊಂದಿರುವ ದೇಶದಲ್ಲಿ ೧೫ ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಇಳಿಮುಖವಾಗಿದೆ ಎಂದು ತಿಳಿಸಿದೆ.
ವರದಿ ಪ್ರಕಾರ, ೨೦೪೬ ರಲ್ಲಿ, ಭಾರತದದಲ್ಲಿ ವಯಸ್ಸಾದವರ ಜನಸಂಖ್ಯೆ ೦-೧೪ ವರ್ಷದೊಳಗಿನ ಮಕ್ಕಳ ಜನಸಂಖ್ಯೆಯ ಗಾತ್ರಕ್ಕಿಂತ ಹೆಚ್ಚಾಗಿರುತ್ತದೆ ಮತ್ತು ೧೫ ರಿಂದ ೫೯ ವರ್ಷಗಳ ನಡುವಿನ ಸಂಖ್ಯೆಯಲ್ಲಿ ಇಳಿಮುಖವಾಗಲಿದೆ ಎಂದು ತನ್ನ ವರದಿಯಲ್ಲಿ ಉಲ್ಲೇಖ ಇಳಿಸಿದೆ.
