ಉದಯವಾಹಿನಿ ದೇವರಹಿಪ್ಪರಗಿ: ಪ್ರತಿ ವರ್ಷದ ಸಂಪ್ರದಾಯದಂತೆ ಈ ವರ್ಷವೂ ಶ್ರೀ ವೀರಭದ್ರೇಶ್ವರ ಜಯಂತೋತ್ಸವ ಹಾಗೂ 11ನೇ ವರ್ಷದ ಕಾರ್ತಿಕ್ಕೊತ್ಸವದ ಪ್ರಯುಕ್ತ ಸಕಲ ಸಿದ್ಧತೆಗೆ ಸರ್ವರ ಸಹಕಾರ ಅಗತ್ಯ ಎಂದು ಪಟ್ಟಣದ ಹಿರಿಯ ಮುಖಂಡರು ಹಾಗೂ ನಿವೃತ್ತ ನೌಕರರ ಸಂಘದ ಅಧ್ಯಕ್ಷರಾದ ಚನ್ನವೀರ ಕುದುರಿ ಹೇಳಿದರು.ಪಟ್ಟಣದ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಜಯಂತೋತ್ಸವ ಹಾಗೂ 11ನೇ ವರ್ಷದ ಕಾರ್ತಿಕೋತ್ಸವದ ರೂಪುರೇಷೆಗಳ ಬಗ್ಗೆ ಮಾತನಾಡಿ,ದಿ.28-11-23 ರಂದು ಮಹಾಪುರಾಣ ಪ್ರಾರಂಭವಾಗುವುದು, ದಿ.18-12-23 ರಂದು ಶ್ರೀಮದ್ ರಂಭಾಪುರಿ ಮಹಾಸನ್ನಿಧಿಯವರ ಅಡ್ಡ ಪಲ್ಲಕ್ಕಿ ಉತ್ಸವ ಹಾಗೂ ಧರ್ಮಸಭೆ,ದಿ.19-12-23ರಂದು ಶ್ರೀ ವೀರಭದ್ರೇಶ್ವರ ಪಲ್ಲಕ್ಕಿ ಉತ್ಸವ ಜರಗುವುದು ಎಂದು ತಿಳಿಸಿದರು.ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪಟ್ಟಣದ ಜಡಿಮಠದ ಷ.ಬ್ರ ಜಡೆ ಸಿದ್ದೇಶ್ವರ ಶ್ರೀಗಳು ಮಾತನಾಡಿ, ದುಷ್ಟರನ್ನು ಸಂಹರಿಸಿ ಶಿಷ್ಟರನ್ನು  ರಕ್ಷಿಸಿದ ಪರಶಿವನ ಜಡೆಯಿಂದ ಅವತರಿಸಿ ದಕ್ಷಬ್ರಹ್ಮನ ಸಂಹಾರ ಮಾಡಿದಾತ ಶ್ರೀ ವೀರಭದ್ರ ಅಂಗುಷ್ಟದಲ್ಲಿ ಗೋವಿಂದ ನಿದ್ದಾನೆಂದು ಅಕ್ಕಮಹಾದೇವಿಯವರ ವಚನದಲ್ಲಿ ಉಲ್ಲೇಖವಿದೆ, ಧರ್ಮವು ಉಸಿರಾಗಲಿ, ಹಸಿರಾಗಲಿ, ಹೆಸರಾಗಿ ಬೆಳಗಲೆಂದು ಎಂದು ಆಶೀರ್ವದಿಸಿದರು.ಕಾರ್ಯಕ್ರಮದ ಸಾನಿಧ್ಯವನ್ನು ಶ್ರೀ ಷ.ಬ್ರ ವೀರಗಂಗಾಧರ ಶಿವಾಚಾರ್ಯರು, ಶ್ರೀ ಪ.ಪೂ ಶಿವಯೋಗಿ ದೇವರು ಆಶೀರ್ವಚನ ನೀಡಿದರು.
ಇದೇ ಸಂದರ್ಭದಲ್ಲಿ ಮಡಿವಾಳಪ್ಪ ಮಣೂರ, ನಾನಾ ಗೌಡ ಯಾಳಗಿ, ಬಾಬುಗೌಡ ಪಾಟೀಲ, ಬಂಡೆಪ್ಪ ಬಿರಾದಾರ, ಪಂಚಾಕ್ಷರಿ ಮಿಂಚನಾಳ, ಯಲಗೂರೇಶ ದೇವೂರ, ತೇಜಣ್ಣ ಕಕ್ಕಳಮೇಲಿ, ಸೋಮು ಹಿರೇಮಠ, ವಿನೋದಗೌಡ ಪಾಟೀಲ, ಶಾಂತಯ್ಯ ಜಡಿಮಠ, ಆನಂದ ಜಡಿಮಠ, ರಮೇಶ ಮಶಾನವರ, ಮುದಕು ದುತ್ತರಗಾಂವಿ, ರವಿ ಯಾಳಗಿ, ಈರಣ್ಣ ಹೊಸಮನಿ, ಪ್ರಶಾಂತ ಬಡಿಗೇರ, ಸಂಗಮೇಶ ಹಳಿಮನಿ, ನಿಂಗು ಬಿರಾದಾರ ಶ್ರೀಶೈಲ್ ಯಾಳಗಿ, ಸಂಗನಗೌಡ ಪಾಟೀಲ, ವಿನೋದ ನಾಶೀಮಠ, ರಮೇಶ ಮಾಳನೂರ, ಉಮಾಕಾಂತ ಸೊನ್ನದ,ಅಪ್ಪೋಜಿ ದೇಸಾಯಿ, ಮಲ್ಲು ಸೌದಿ, ಚನ್ನಪ್ಪ ದೇಸಾಯಿ, ಬಸಯ್ಯ ಮಲ್ಲಿಕಾರ್ಜುನಮಠ ಸೇರಿದಂತೆ ಪಟ್ಟಣದ ಪ್ರಮುಖರು ಹಾಗೂ ಗಣ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!