ಉದಯವಾಹಿನಿ,ಕೆ.ಆರ್.ಪೇಟೆ.: ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ವತಿಯಿಂದ ಸಮುದಾಯಕ್ಕೆ ಆರೋಗ್ಯ ಸೇವೆಗಳನ್ನು ಸಂಪೂರ್ಣವಾಗಿ ತಲುಪಿಸುವ ಆಯುಷ್ಮಾನ್ ಭವ ಅಭಿಯಾನಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ.ಕೆ.ಮೋಹನ್ ಚಾಲನೆ ನೀಡಿದರು.
ತಾಲೂಕಿನ ವ್ಯಾಪ್ತಿಯಲ್ಲಿ ಪಟ್ಟಣ ಸೇರಿದಂತೆ, ಪ್ರತಿ ಆರೋಗ್ಯ ಮತ್ತು ಕ್ಷೇಮ ಕೇಂದ್ರದ ವ್ಯಾಪ್ತಿಗೆ ಒಳಪಡುವ ಗ್ರಾಮಗಳಲ್ಲಿ ಈ ದಿನ ಸಾರ್ವಜನಿಕರಿಗೆ ಆರೋಗ್ಯ ಇಲಾಖೆ ಸಿಬ್ಬಂದಿಗಳಿಂದ ಹಾಗೂ ಆಶಾ ಕಾರ್ಯಕರ್ತೆಯರಿಂದ ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ ಆರೋಗ್ಯ ಕರ್ನಾಟಕ ಕಾರ್ಡನ್ನು ಸಾರ್ವಜನಿಕರಿಗೆ ವಿತರಿಸುವ. ಅಭಿಯಾನ ಪ್ರಾರಂಭಗೊಂಡಿದ್ದು, ನಿರಂತರವಾಗಿ ನಡೆಯುತ್ತಿದೆ. ಆಯುಷ್ಮಾನ್‍ಭವ ಸೆಪ್ಟೆಂಬರ್ 17 ರಿಂದ 3 ಹಂತದಲ್ಲಿ ಪ್ರಾರಂಭಗೊಳ್ಳುತ್ತಿದ್ದು, ಮೊದಲನೇ ಹಂತ ಆಯುಷ್ಮಾನ್ ಆಪ್ಕೆದ್ವಾರ್ 3.0, ಎರಡನೇ ಹಂತ ಆಯುಷ್ಮಾನ್ ಮೇಳ, ಮೂರನೇ ಹಂತ ಆಯುಷ್ಮಾನ್ ಸಭಾ, ಮೊದಲು ಆಯುಷ್ಮಾನ್ ಆಪ್ಕೆದ್ವಾರ್3.0 ದಿನಾಂಕ 17. 9. 2023 ರಿಂದ ಸಾರ್ವಜನಿಕರಿಗೆ ಮನೆ ಬಾಗಿಲಿಗೆ ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನಾರೋಗ್ಯ ಯೋಜನೆ ಆರೋಗ್ಯ ಕರ್ನಾಟಕ ಕಾರ್ಡ್ ವಿತರಣೆ ಮಾಡುವ ಕಾರ್ಯ ಚಟುವಟಿಕೆ ನಡೆಯುತ್ತಿದೆ. ಸಾರ್ವಜನಿಕರು ಆಧಾರ ಕಾರ್ಡು ಹಾಗೂ ರೇಷನ್ ಕಾರ್ಡನ್ನು ಸಲ್ಲಿಸುವ ಮೂಲಕ ಕಾರ್ಡನ್ನು ಪಡೆಯಬೇಕು ಎಂದರು,
ಎರಡನೇದಾಗಿ ಆಯುಷ್ಮಾನ್ ಮೇಳ ಮೊದಲನೇ ವಾರ, ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಲ್ಲಿ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಆರೋಗ್ಯ ಮೇಳವನ್ನು ನಡೆಸಿ ಜನರಿಗೆ ಆರೋಗ್ಯ ತಪಾಸಣೆಯನ್ನು ಮಾಡಲಾಗುತ್ತದೆ. ಮುಖ್ಯವಾಗಿ, ಮೊದಲನೆ ವಾರ ಅಸಾಂಕ್ರಾಮಿಕ ಕಾಯಿಲೆಗಳ ತಪಾಸಣೆ, ಎರಡನೇ ವಾರ, ಸಾಂಕ್ರಾಮಿಕ ಕಾಯಿಲೆಗಳ ತಪಾಸಣೆ, ಮೂರನೇ ವಾರ ತಾಯಿ ಮತ್ತು ಮಕ್ಕಳ ಆರೋಗ್ಯ ತಪಾಸಣೆ ಹಾಗೂ ಪೌಷ್ಠಿಕತೆ, ನಾಲ್ಕನೇ ವಾರ ಜಿಲ್ಲೆಯ ಪ್ರಸ್ತುತ ಸ್ಪೆಸಿಫಿಕ್ ಆರೋಗ್ಯ ವಿಷಯ ಕುರಿತು ಪ್ರಕ್ರಿಯೆಗಳನ್ನು ಕೈಗೊಳ್ಳಲಾಗುತ್ತದೆ,
