ಉದಯವಾಹಿನಿ ಮಸ್ಕಿ: ಮುಸ್ಲಿಂ ಧರ್ಮಗುರು ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಜನ್ಮ ದಿನದ ನಿಮಿತ್ಯ ಇಲ್ಲಿನ ಮುಸ್ಲಿಂ ಬಾಂಧವರು ಸಡಗರ ಸಂಭ್ರಮದಿAದ ಈದ್ ಮಿಲಾದ್ ಹಬ್ಬವನ್ನು ಆಚರಣೆ ಮಾಡಿದರು. ಪಟ್ಟಣದ ಖಲೀಲ್ ವೃತ್ತದ ಬಳಿ ಮೆಕ್ಕಾ ಮದೀನಾ ಮೆರವಣಿಗೆಯನ್ನು ಗಚ್ಚಿನಮಠದ ವರರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಅವರು ಚಾಲನೆ ನೀಡಿದರು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿ ಹಳೆ ಬಸ್ ನಿಲ್ದಾಣ, ಕನಕವೃತ್ತ, ತೇರಿನಮನೆ, ದೈವದಕಟ್ಟೆ ಮೂಲಕ ಮಸೀದಿಗೆ ತಲುಪಿತು. ಮೆರವಣಿಗೆಯಲ್ಲಿ ಪುಟಾಣಿಗಳು ಕೈಯಲ್ಲಿ ರಾಷ್ಟçದ್ವಜ ಹಾಗೂ ಹಸಿರು ಬಾವೂಟ ಹಿಡಿದು ಘೋಷಣೆಗಳನ್ನು ಮೊಳಗಿಸಿದರು.ಮೆಕ್ಕಾ ಮತ್ತು ಮದೀನಾ ಗುಂಬಜ್ ಮಾದರಿಗಳು ನೋಡುಗರ ಗಮನ ಸೆಳೆದವು, ಯಾವುದೇ ಅಹಿತಕರ ಘಟನೆ ನಡೆಯದಂತೆ ಸಿಪಿಐ ಬಾಲಚಂದ್ರ ಲಕ್ಕಂ, ಪಿಎಸ್‌ಐ ಸಣ್ಣ ವೀರೇಶ ಹಾಗೂ ಪೊಲೀಸ್ ಸಿಬ್ಬಂದಿ ಬಿಗಿ ಬಂದೋಬಸ್ತ್ ನೀಡಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ, ಮುಸ್ಲಿಂ ಧರ್ಮ ಗುರು ಜಿಲಾನಿ ಖಾಜಿ, ಅಬ್ದುಲ್ ಅಜೀಜ್, ಅಬ್ದುಲ್ ಗನಿಸಾಬ, ಬಸನಗೌಡ ಪೊಲೀಸ್ ಪಾಟೀಲ, ಮಸೂದ್‌ಪಾಷಾ, ಚಾಂದಪಾಷ ಶೇಡ್ಮಿ, ನೂರ ಅಹ್ಮದ್, ಸದ್ದಾಂ ಮಸ್ಕಿ ಸೇರಿದಂತೆ ಇನ್ನಿತರ ಮುಖಂಡರು ಭಾಗಿಯಾಗಿದ್ದರು,
