ಉದಯವಾಹಿನಿ ತಾಳಿಕೋಟಿ: ಸಹಕಾರ ಸಂಘಗಳ ಸ್ಥಾಪನೆಯ ಉದ್ದೇಶ ರೈತರನ್ನು ಆರ್ಥಿಕವಾಗಿ ಸದೃಢರನ್ನಾಗಿ ಮಾಡುವುದಾಗಿದೆ ಸಂಘಗಳು ರೈತರ ಜೀವನಾಡಿಗಳಾಗಿವೆ ಅಲ್ಲಿ ಯಾವ ಕಾರಣಕ್ಕೂ ರಾಜಕೀಯ ಹಸ್ತಕ್ಷೇಪ ಆಗದಂತೆ ನೋಡಿಕೊಂಡು ಎಲ್ಲರೂ ಒಂದಾಗಿ ಕೆಲಸ ಮಾಡಿ ಎಂದು ಮುದ್ದೇಬಿಹಾಳ ಮತಕ್ಷೇತ್ರದ ಶಾಸಕ ಸಿ. ಎಸ್. ನಾಡಗೌಡ ಅಪ್ಪಾಜಿ ಹೇಳಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಸಹಕಾರ ಸಂಘದ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ನೂತನವಾಗಿ ಆಯ್ಕೆಯಾದ ನಿರ್ದೇಶಕರಿಗೆ ಸನ್ಮಾನಿಸಿ ಅವರು ಮಾತನಾಡಿದರು. ರೈತಾಪಿ ಜನರು ನಿಮ್ಮ ಮೇಲೆ ವಿಶ್ವಾಸವಿರಿಸಿ ಮತ ಹಾಕಿ ಆಯ್ಕೆ ಮಾಡಿದ್ದಾರೆ ಅವರ ವಿಶ್ವಾಸವನ್ನು ಉಳಿಸಿಕೊಂಡು ಕೆಲಸ ಮಾಡುವುದರೊಂದಿಗೆ ಸಂಘದ ಅಭಿವೃದ್ಧಿಗೆ ಶ್ರಮಿಸಿ, ಯಾವ ಕಾರಣಕ್ಕೂ ಗುಂಪುಗಾರಿಕೆ ಆಗದಂತೆ ನೋಡಿಕೊಳ್ಳಿ ಎಷ್ಟೋ ಸಹಕಾರ ಸಂಘಗಳು ಗುಂಪುಗಾರಿಕೆಯಿಂದಲೇ ಹಾಳಾಗಿ ಹೋಗಿವೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆ ರೈತರಿಗೆ ದೊರಕಿಸಿಕೊಡಲು ನಿಮ್ಮೊಂದಿಗೆ ನಾನು ಸಹ ಪ್ರಯತ್ನಿಸುತ್ತೇನೆ ಎಂದ ಅವರು ಈ ಸಂದರ್ಭದಲ್ಲಿ ನಿಮಗೆಲ್ಲರಿಗೂ ಅಭಿನಂದಿಸುತ್ತೇನೆ ಎಂದರು. ಈ ಸಮಯದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ. ಕೆ. ಜೋರಗಸ್ತಿ. ಪುರಸಭೆ ಮಾಜಿ ಸದಸ್ಯರಾದ ವಿಜಯಸಿಂಗ ಹಜೇರಿ. ಪ್ರಭುಗೌಡ ಮದರ್ಕಲ್. ಮುಸ್ಲಿಂ ಬ್ಯಾಂಕ್ ನಿರ್ದೇಶಕ ಮಹಿಬೂಬ್ ಕೆಂಭಾವಿ. ನೂತನ ನಿರ್ದೇಶಕರುಗಳಾದ ಶರಣಪ್ಪ ಇಲ್ಕಲ್.ಡಿ.ವಿ.ಪಾಟೀಲ. ಬಸವರಾಜ ಕುಂಬಾರ. ಗೋವಿಂದ್ ಸಿಂಗ್ ಮೂಲಿಮನಿ. ಬಸನಗೌಡ ಮಾಲಿ ಪಾಟೀಲ್. ದಸ್ತಗೀರಸಾಬ ಕೆಂಭಾವಿ. ಗುರು ಸಂಗಪ್ಪ ಕಶೆಟ್ಟಿ. ನಾಗಪ್ಪ ಗೊಟಗುಣಕಿ .ಮಡಿವಾಳಪ್ಪ ಕಟ್ಟಿಮನಿ. ಯಮನಪ್ಪ ಬರದೇನಾಳ. ಸರೋಜಾ ದೇಸಾಯಿ. ಜ್ಯೋತಿ ಹಜೇರಿ ಮತ್ತಿತರರು ಇದ್ದರು
