
ಉದಯವಾಹಿನಿ, ಔರಾದ್ : ಸಾಧಿಸುವ ಛಲ, ಗುರುಭಕ್ತಿ, ಆತ್ಮ ವಿಶ್ವಾಸ, ಸತತ ಪರಿಶ್ರಮ ಇದ್ದಲ್ಲಿ ಅಸಾಧ್ಯವಾದದ್ದು ಸಹ ಸಾಧಿಸಬಹುದಾಗಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿ ಜೀವನವನ್ನು ತಿದ್ದುವ ಗುರುವೃಂದಕ್ಕೆ ನೆನೆಯುವುದು ಎಲ್ಲರ ಕರ್ತವ್ಯ ಎಂದು ಉಪನ್ಯಾಸಕ ಪ್ರೊ. ಡಾ. ಅಶೋಕ ಕೋರೆ ಹೇಳಿದರು.ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇಚೇಗೆ ನಡೆದ ಹಳೆಯ ವಿದ್ಯಾರ್ಥಿಗಳ ಸಮಾವೇಶ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಪ್ರತಿಯೊಬ್ಬರು ತಮ್ಮ ವೃತ್ತಿಗೌರವನ್ನು ಎತ್ತಿ ಹಿಡಿಯಬೇಕು. ಆಧುನಿಕತೆಯ ಯುಗದಲ್ಲಿ ಗುರುಗಳಿಗೆ ನೀಡುವ ಗೌರವ ಎಲ್ಲದಕ್ಕೂ ಮಿಗಿಲು ಎಂದು ಹೇಳಿದರು.ಡಾ. ಸಂಜೀವಕುಮಾರ ತಾಂದಳೆ ಪ್ರಾಸ್ತಾವಿಕವಾಗಿ ಮಾತನಾಡಿ, ಕಾಲೇಜಿನಲ್ಲಿ ಹಳೆಯ ವಿದ್ಯಾರ್ಥಿಗಳ ಸಂಘ ರಚನೆಯಾಗಿದ್ದು ಸಂತೋಷದ ವಿಷಯ, ಸಂಘವು ಮುಂದಿನ ದಿನಗಳಲ್ಲಿ ಸಂಘದಿಂದ ಕಾಲೇಜಿನ ಅಭಿವೃದ್ಧಿಯ ಜೋತೆಗೆ ಸಾಮಾಜಿಕ ಕಾರ್ಯಗಳಲ್ಲಿ ತೂಡಗುವಂತಾಗಲಿ ಎಂದು ಹೇಳಿದರು.ಪ್ರೋ. ವೇದಪ್ರಕಾಶ್ ಆರ್ಯ ಮಾತನಾಡಿ, ಹಳೆಯ ವಿದ್ಯಾರ್ಥಿಗಳ ಸಂಘವು ಕಾಲೇಜಿನ ನ್ಯಾಕ ಸಮಿತಿ ಮಾಡುವಾಗ ಸಹಕಾರಿಯಾಗುತ್ತದೆ ಎಂದು ಹೇಳಿದರು .ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಅಂಬಾದಾಸ್ ನಳಗೆ ಮಾತನಾಡಿ, ಕಾಲೇಜಿನ ಅಭಿವೃದ್ಧಿಗೆ ಹಗಲಿರುಳು ಸಂಘ ಶ್ರಮಿಸಲಿದೆ ಅದಕ್ಕಾಗಿ ಎಲ್ಲರ ಸಹಕಾರ ಅಗತ್ಯ ಎಂದು ಹೇಳಿದರು.ಕಾಲೇಜಿನ ಪ್ರಾಂಶುಪಾಲ ಪ್ರೊ. ಸುರ್ಯಕಾಂತ ಚಿದ್ರೆ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕರಾದ ಪ್ರೂ. ವೇದಪ್ರಕಾಶ್ ಆರ್ಯ, ಕೆ. ವೆಂಕಟರಾವ, ಸಚ್ಚಿದಾನಂದ ರುಮ್ಮಾ, ಡಾ. ಜೈಶೀಲಾ. ಬಿ, ಅಂಜಲಿ ಲುಲ್ಲೆ, ಹಳೆಯ ವಿದ್ಯಾರ್ಥಿಗಳ ಸಂಘದ ಉಪಾಧ್ಯಕ್ಷ ಹಾವಪ್ಪ ದ್ಯಾಡೆ, ಕಾರ್ಯದರ್ಶಿ ರವಿ ಡೋಳೆ, ರಿಯಾಜಪಾಶಾ ಕೊಳ್ಳೂರ, ಪ್ರಶಾಂತ ಮಣಿಗೆಂಪುರೆ, ಉಮೇಶ್ ಧನೆ, ಮೂಗಲಪ್ಪ ಬೆಲ್ದಾಳ, ಯುವರಾಜ ಬಿರಾದಾರ, ತುಳಸಿರಾಮ ಮಾನೆ ಸೇರಿದಂತೆ ಕಾಲೇಜಿನ ವಿದ್ಯಾರ್ಥಿಗಳು ಇದ್ದರು.
