ಉದಯವಾಹಿನಿ, ಯಾದಗಿರಿ: ಸ್ವಾತಂತ್ಯ ಸಂಗ್ರಾಮದ ಮಹಾನ್ ಕ್ರಾಂತಿಕಾರಿ ಭಗತ್ ಸಿಂಗ್ ರವರ 116ನೇ ಜನ್ಮ ವರ್ಷಾಚರಣೆಯ ಹಿನ್ನಲೆಯಲ್ಲಿ ಅವರ ಕನಸಿನ ಸಮಾಜವಾದಿ ಭಾರತ ನಿರ್ಮಿಸಲು ವಿದ್ಯಾರ್ಥಿಗಳ ಸಂಕಲ್ಪ ಧೀರ ಹುತಾತ್ಮ – ಮಹಾನ್ ಕ್ರಾಂತಿಕಾರಿಗಳಾದ ಭಗತ್ ಸಿಂಗ್ ರವರ 116ನೇ ಜನ್ಮ ವರ್ಷಾಚರಣೆಯ ಸಂದರ್ಭದಲ್ಲಿ ಜಿಲ್ಲೆಯ ಹಲವೆಡೆ ವಿದ್ಯಾರ್ಥಿಗಳ ನಡುವೆ ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸಲಾಯಿತು. ಸಮಾಜದ ಕನಸನ್ನು ಕಾಣುತ್ತಾ, ಜಾತಿ – ಧರ್ಮಗಳ ಗಡಿಯನ್ನು ಮೀರಿ ಎಲ್ಲರೂ ಭಾರತವೆಂಬ ಒಂದೇ ಸೂರಿಡಿಯಲ್ಲಿ ಎಲ್ಲರೂ ನೆಮ್ಮದಿಯಿಂದ ಬದುಕುವಂತಾಗಬೇಕು ಎಂದು, ಬ್ರಿಟೀಷ್ ಸಾಮ್ರಾಜ್ಯಶಾಹಗಳ ವಿರುದ್ಧ ರಾಜಿರಹಿತ ಹೋರಾಟ ನಡೆಸಿದ ನಗುನಗುತ್ತಾ ಗಲ್ಗಂಬವನ್ನೀರಿದ ಭಗತ್ ಸಿಂಗ್ ಇಂದಿನ ವಿದ್ಯಾರ್ಥಿಗಳ ಹಾಗೂ ಯುವಕರ ಆದರ್ಶವಾಗಬೇಕಿದೆ. ಇಂದಿನ ಜನರ ಜ್ವಲ್ಪಂತ ಸಮಸ್ಯೆಗಳಾದ ಶಿಕ್ಷಣ ವ್ಯಾಪಾರೀಕರಣ, ನಿರುದ್ಯೋಗ, ಜಾತಿ ಹಾಗೂ ಕೋಮು ಸಮಸ್ಯೆಗಳ ವಿರುದ್ಧ ದ್ವನಿ ಎತ್ತಲು ಭಗತ್ ಸಿಂಗ್ ರವರ ವಿಚಾರಗಳು ಸ್ಫೂರ್ತಿಯಾಗಬೇಕಿದೆ.
ಎಐಡಿಎಸ್‍ಓ ಕಚೇರಿ ಸೇರಿದಂತೆ ಜಿಲ್ಲೆಯಾದ್ಯಂತ ಇಂದು ಮನೆ ಮನೆಗಳಲ್ಲಿ, ವಿವಿಧ ಬಡಾವಣೆಗಳಲ್ಲಿ ಭಗತ್ ಸಿಂಗ್ ರವರ ಜನ್ಮ ದಿನವನ್ನು ಸೂಕ್ತ ರೀತಿಯಲ್ಲಿ ಗಮನಿಸಲಾಯಿತು. ಭಗತ್ ಸಿಂಗ್ ರ ಜೀವನ ಸಂಘರ್ಷ ಹಾಗೂ ವಿಚಾರಗಳನ್ನು ಸ್ಫೂರ್ತಿಯಾಗಿಸಿಕೊಂಡು ಅವರ ಕನಸಿನ ಸಮಾಜವಾದಿ ಭಾರತವನ್ನು ಕಟ್ಟುಲು ವಿದ್ಯಾರ್ಥಿಗಳು ಸಂಕಲ್ಪವನ್ನು ತೆಗೆದುಕೊಂಡರು.
