ಉದಯವಾಹಿನಿ, ಚಿಕ್ಕಬಳ್ಳಾಪುರ : ಕಾವೇರಿ ನೀರು ತಮಿಳುನಾಡಿಗೆ ಹರಿಸುತ್ತಿರುವ ರಾಜ್ಯ ಸರ್ಕಾರದ ನಿರ್ಧಾರದ ವಿರುದ್ಧ ಕನ್ನಡಪರ ಸಂಘಟನೆಗಳು ನೀಡಿದ್ದ ಬಂದ್ ಚಿಕ್ಕಬಳ್ಳಾಪುರದಲ್ಲಿ ಭಾಗಶಃ ಯಶಸ್ವಿಯಾಗಿದೆ.
ಬಂದ್ ಕಾರಣ ಸದಾ ಜನಜಂಗುಳಿಯಿಂದ ತುಂಬಿತ ನಗರದ ಪ್ರಮುಖ ಸ್ಥಳಗಳಾದ ಕೆಎಸ್‌ಆರ್ಟಿಸಿ ಬಸ್ ನಿಲ್ದಾಣ ಮುನಿಸಿಪಲ್ ಬಸ್ ನಿಲ್ದಾಣ ಭುವನೇಶ್ವರಿ ವೃತ್ತ ಕಂದಾಯ ಇಲಾಖೆ ಸಂಕೀರ್ಣ ಕೋರ್ಟ್ ಕಾಂಪ್ಲೆಕ್ಸ್ ಮುಂತಾದ ಸ್ಥಳಗಳಲ್ಲಿ ಜನ ಸಂಚಾರ ಹೆಚ್ಚು ಇಲ್ಲದೆ ಬಿಕೋ ಎನಿಸುತ್ತಿದೆ.
ಕೆಎಸ್‌ಆರ್ಟಿಸಿ ಬಸ್ ಗಳು ರಸ್ತೆಗೆ ಇಳಿದಿದ್ದರು ಸಹ ನಿರೀಕ್ಷಿತ ಪ್ರಮಾಣದಲ್ಲಿ ಪ್ರಯಾಣಕ್ಕೆ ಬಂದಿಲ್ಲ. ಹೋಟೆಲ್ ಅಂಗಡಿ ಮುಂಗಾರುಗಳು ಎಂದಿನಂತೆ ಕಾರ್ಯ ನಿರ್ವಹಿಸುತ್ತಿದೆ.
ಶಾಲಾ ಕಾಲೇಜುಗಳು ಎಂದಿನಂತೆ ಕಾರ್ಯ ನಿರ್ವಹಿಸುತ್ತಿದೆ ಯಾವುದೇ ರೀತಿಯ ಅಹಿತಕರ ಘಟನೆಗಳು ಸಂಭವಿಸದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ್ ರವರ ನೇತೃತ್ವದಲ್ಲಿ ವ್ಯಾಪಕ ಪೊಲೀಸ್ ಬಂದೋಬಸ್ ಏರ್ಪಡಿಸಲಾಗಿದೆ.
