ಉದಯವಾಹಿನಿ, ನವದೆಹಲಿ: ದೇಶದಲ್ಲಿ ೧೨ ಲಕ್ಷ ಬಲಿಷ್ಠ ಸೇನಾ ಸಿಬ್ಬಂಧಿ ಹೊಂದಿರುವ ಭಾರತೀಯ ಸೇನೆ ಭವಿಷ್ಯದ ಕದನಗಳಿಗೆ ಸಿದ್ಧವಾಗಲು ತಂತ್ರಗಾರಿಕೆ, ರಾಜತಾಂತ್ರಿಕತೆ ಬುದ್ಧಿವಂತಿಕೆ ಬಳಸಲು “ಪ್ರಾಜೆಕ್ಟ್ ಉದ್ಭವ್” ಪ್ರಾರಂಭಿಸಿದೆ
ಈ ಹಿನ್ನೆಲೆಯಲ್ಲಿ ಇದು “ಪ್ರಾಚೀನ ಭಾರತೀಯ ಪಠ್ಯಗಳಿಂದ ಪಡೆದ ರಾಜ್ಯ ಮತ್ತು ಕಾರ್ಯತಂತ್ರದ ಆಲೋಚನೆಗಳ ಆಳವಾದ ಭಾರತೀಯ ಪರಂಪರೆ ಮರುಶೋಧಿಸುವ ಪ್ರವರ್ತಕ ಉಪಕ್ರಮವಾಗಿದೆ ಎಂದು ಸೇನಾ ವಕ್ತಾರರು ಹೇಳಿದ್ದಾರೆ.
ಸೇನಾ ತರಬೇತು ಕಮಾಂಡ್ ಸಹಯೋಗದೊಂದಿಗೆ ಯುನೈಟೆಡ್ ಸರ್ವೀಸ್ ಇನ್‌ಸ್ಟಿಟ್ಯೂಷನ್ ಆಫ್ ಇಂಡಿಯಾ ಯೋಜನೆಯಡಿಯಲ್ಲಿ ಮೊದಲ ಹೈಬ್ರಿಡ್ ವಿಚಾರ ಸಂಕಿರಣದಲ್ಲಿ ಈ ವಿಷಯ ಪ್ರಕಟಿಸಿದ್ದಾರೆ.
“ಭಾರತೀಯ ಮಿಲಿಟರಿ ವ್ಯವಸ್ಥೆಗಳ ವಿಕಸನ, ಯುದ್ಧ-ಹೋರಾಟ ಮತ್ತು ಕಾರ್ಯತಂತ್ರದ ಚಿಂತನೆ – ಕ್ಷೇತ್ರದಲ್ಲಿ ಪ್ರಸ್ತುತ ಸಂಶೋಧನೆ ಮತ್ತು ಮುಂದಿನ ದಾರಿಯ ಕುರಿತು ಕೂಡ ಸುದೀರ್ಘ ಸಮಾಲೋಚನೆ ನಡೆಸಲಾಗಿದೆ ಎಂದಿದ್ಧಾರೆ.
