ಉದಯವಾಹಿನಿ, ರಾಯ್‌ಪುರ: ವರ್ಷಾಂತ್ಯದಲ್ಲಿ ನಡೆಯಲಿರುವ ಛತ್ತೀಸ್ ಗಡ ವಿಧಾನಸಭೆ ಚುನಾವಣೆ ಮೇಲೆ ಕಣ್ಣಿಟ್ಟಿರುವ ಪ್ರಧಾನಿ ನರೇಂದ್ರ ಮೋದಿ ಅವರು ಈ ಬಾರಿ ಅಧಿಕಾರ ಹಿಡಿಯಲು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ.
ರಾಜ್ಯದ ಬಿಲಾಸ್‌ಪುರ ಮಧ್ಯಾಹ್ನ ೨ ಗಂಟೆಯ ನಂತರ ’ಪರಿವರ್ತನ್ ಯಾತ್ರೆ’ಗಳ ಸಮಾರೋಪ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳಲಿದ್ದಾರೆ ಎಂದು ಪಕ್ಷದ ನಾಯಕರೊಬ್ಬರು ತಿಳಿಸಿದ್ದಾರೆ. ಎರಡು ಪರಿವರ್ತನ ಯಾತ್ರೆಗಳ ಸಮಾರೋಪ ಸಮಾರಂಭವಾದ ’ಪರಿವರ್ತನ್ ಮಹಾಸಂಕಲ್ಪ’ ರ್‍ಯಾಲಿ ಉದ್ದೇಶಿಸಿ ಪ್ರಧಾನಿ ಮಾತನಾಡಲಿದ್ದಾರೆ ಎಂದು ರಾಜ್ಯ ಬಿಜೆಪಿ ಮುಖ್ಯಸ್ಥ ಅರುಣ್ ಸಾವೊ ತಿಳಿಸಿದ್ದಾರೆ. ಮೊದಲ ಪರಿವರ್ತನ ಯಾತ್ರೆಯನ್ನು ಸೆಪ್ಟೆಂಬರ್ ೧೨ ರಂದು ದಂತೇವಾಡ ದಿಂದ ಹೊರಡಲಾಗಿತ್ತು ಎರಡನೆಯದನ್ನು ಸೆಪ್ಟೆಂಬರ್ ೧೫ ರಂದು ಜಶ್‌ಪುರದಿಂದ ಆರಂಭಿಸಲಾಗಿತ್ತು ಎಂದು ಅವರು ಹೇಳಿದ್ದಾರೆ. ಎರಡೂ ಯಾತ್ರೆಗಳು ೮೩ ’ಸ್ವಾಗತ ಸಭೆಗಳು’ನಾಲ್ಕು ರೋಡ್‌ಶೋಗಳು ಮತ್ತು ವಿವಿಧ ಸಾರ್ವಜನಿಕ ಸಭೆಗಳನ್ನು ಬಿಲಾಸ್‌ಪುರದಲ್ಲಿ ಸಮಾಪ್ತಿಗೊಳಿಸಿವೆ. ೮೭ ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು ೩,೦೦೦ ಕಿಮೀ ದೂರವನ್ನು ಕ್ರಮಿಸಿವೆ ಎಂದು ಅವರು ಹೇಳಿದ್ದಾರೆ.
