ಉದಯವಾಹಿನಿ,ಚಿಂಚೋಳಿ: 2021-22ನೇ ಸಾಲಿನಲ್ಲಿ ಸುಮಾರು 400ರೈತರಿಗೆ ತಲಾ 25ಸಾವಿರದಂತೆ 1.14ಕೋಟಿ ರೂ.ಕೆಸಿಸಿ ಸಾಲ ನೀಡಲಾಗಿದೆ ಎಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮೋಹನಸಿಂಗ್ ಠಾಕೂರ್ ಹೇಳಿದರು.ಪಟ್ಟಣದ ಚಂದಾಪೂರದ ಪೋಲಕಪಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತದಿಂದ ಸಂಘದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಆಡಳಿತ ಮಂಡಳಿಯ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು,2022ನೇ ಸಾಲಿನಲ್ಲಿ ಸಿದ್ದಸಿರಿ ಕಾರ್ಖಾನೆ ಸಹಯೋಗದಲ್ಲಿ  ಸಹಕಾರ ಸಂಘದಿಂದ 10ಜನ ಕಬ್ಬು ಬೆಳೆಗಾರ ರೈತರಿಗೆ 8.40ಲಕ್ಷ ರೂ.ಸಾಲ ನೀಡಲಾಗಿದೆ. ಜನಪ್ರತಿನಿಧಿಗಳ ಸಹಾಯದಿಂದ ಕಟ್ಟಡ ದೊರಕಿದ್ದು,2020ರ ಸಾಲಿನವರೆಗೆ ಎಡಿಟ್ ಪೂರ್ಣಗೊಂಡಿದೆ,200ರಿಂದ 300ಜನರ ಹೊಸ ಸದಸ್ಯತ್ವವನ್ನು ಮಾಡಲಾಗಿದೆ.
ಪೋಲಕಪಳ್ಳಿ ಸಹಕಾರ ಸಂಘದಿಂದ ಪರದಾರ ಮೋತಕಪಳ್ಳಿ ಗ್ರಾಮದ ಮಹಿಳಾ ಸಂಘಗಳಿಗೆ ತಲಾ 1ಲಕ್ಷದಂತೆ 5ಸಂಘಗಳಿಗೆ 5ಲಕ್ಷ ರೂ.ಸಾಲ ಮಂಜೂರಾತಿ ಮಾಡಲಾಗಿದೆ,2021-22ರಲ್ಲಿ 400ಜನ ರೈತರಿಗೆ ಕೊಟ್ಟ ಸಾಲವನ್ನು ವಸೂಲಿ ಮಾಡಿ  ರಿನಿವಲ್ ಮಾಡಲಾಗಿದೆ. 89,35,000ರೂಪಾಯಿ ವಸೂಲಿ ಮಾಡಿ 6,98,000ರೂ.ಹೆಚ್ಚುವರಿಯಾಗಿ 96,33000ರೂ.ಸಾಲ ಸಾಲ ಮಂಜೂರಿ ಮಾಡಲಾಗಿದೆ.
ಕಳೆದ ಸರ್ಕಾರದಲ್ಲಿ ರೈತರ ಸಾಲಮನ್ನಾ ಆಗದೆಯಿರುವವರ ಸಾಲ ರಿನಿವಲ್ ಮಾಡಿ ವಸೂಲಿ 8,63,000ಆಗಿದ್ದು,ಹೆಚ್ಚುವರಿಯಾಗಿ 4,82,000ರೂ.ಕೂಡಿ 13,45,000ರೂ.ಮಂಜೂರಿ ನೀಡಲಾಗಿದೆ.
ನವ್ಹಂಬರ್ 2022ರಿಂದ ಮಾರ್ಚ್ 2023ರವರೆಗೆ ಸಂಘದಿಂದ 82ಜನರಿಗೆ ಯಶಸ್ವಿನಿ ಹೇಲ್ತ್ ಕಾರ್ಡ್ ನೀಡಲಾಗಿದೆ,2022-23ರ ಅಡಿಟ್ ವರದಿ ಮುಂದಿನ ಸಭೆಯಲ್ಲಿ ಮಂಡಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಬಸವರಾಜ ಹಿತ್ತಲ,ಶ್ರೀಧರ ಪಾಟೀಲ,ಸುರೇಶ ಹುಡಗಿ,ಅಜೀತ ಪಾಟೀಲ,ಚಂದ್ರಪ್ಪಾ ಪೂಜಾರಿ,ರೂಪಕಲಾ ಕಟ್ಟಿಮನಿ,ಗುರಮ್ಮ ಶಿವಶರಣಯ್ಯ,ಪ್ರದೀಪ ಮೇತ್ರಿ,ಬಾಬುರಾವ ಪೂಜಾರಿ, ಎಂಡಿ ಸಾಯೀದ್,ಸಂಘದ ಸಿಇಓ ಸಂಜು ಮೂಲಗಿ,ಸಾಗರ,ಪ್ರಶಾಂತ ಅನೇಕರಿದ್ದರು.

Leave a Reply

Your email address will not be published. Required fields are marked *

error: Content is protected !!