ಉದಯವಾಹಿನಿ ತಾಳಿಕೋಟಿ: ಗ್ರಾಮೀಣ ಪ್ರದೇಶದ ಜನರಿಗೆ ಸರ್ಕಾರದಿಂದ ಸಿಗುವ ಸಕಲ ಸೌಲಭ್ಯಗಳು ಸರಳವಾಗಿ ತಿಳಿದುಕೊಂಡು ಅದರ ಸದುಪಯೋಗ ಪಡೆಯುವಂತಾಗಲು ಹಾಗೂ ಅವರು ಪಟ್ಟಣಕ್ಕೆ ಬಂದು ಸರ್ಕಾರಿ ಕಾರ್ಯಾಲಯಗಳಿಗೆ ಅಲಿಯುವುದನ್ನು ತಪ್ಪಿಸಲು ಸರಕಾರ ಗ್ರಾಮವನ್ ನಾಗರಿಕ ಸೇವಾಕೇಂದ್ರಗಳನ್ನು ಆರಂಭಿಸಿದೆ ಗ್ರಾಮೀಣ ಭಾ ಗದ ಜನರು ಇದರ ಸದುಪಯೋಗವನ್ನು ಮಾಡಿಕೊಳ್ಳಬೇಕು ಎಂದು ಉಪತಾಸಿಲ್ದಾರ್ ಜೆ.ಐ.ತುಬಾಕೆ  ಅವರು ಹೇಳಿದರು. ತಾಲೂಕಿನ ಮುಕೀಹಾಳ ಗ್ರಾಮದಲ್ಲಿ ಗ್ರಾಮ ಒನ್ ನಾಗರಿಕ ಸೇವಾ ಕೇಂದ್ರದ ನೂತನ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಈ ಗ್ರಾಮದಲ್ಲಿ ಸುಸಜ್ಜಿತವಾದ ಕಟ್ಟಡ ಇಲ್ಲದೆ ಇರುವುದರಿಂದ ಜನರಿಗೆ ಸಾಕಷ್ಟು ತೊಂದರೆ ಆಗುತ್ತಿತ್ತು ಈಗ  ಈ  ನೂತನ ಕಟ್ಟಡದಲ್ಲಿ ಎಲ್ಲ ಸೌಲಭ್ಯಗಳು ದೊರಕುವದರಿಂದ ಈ ಭಾಗದ ಜನರಿಗೆ ಇದರಿಂದ ತುಂಬಾ ಅನುಕೂಲವಾಗಲಿದೆ ಎಂದರು. ಈ ಸಮಯದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಆರ್ .ಎಚ್. ಮೇಟಿ. ಪಿಡಿಒ ಎಸ್.  ವಾಯ್. ತಳವಾರ. ಗ್ರಾಮ ಅಧಿಕಾರಿ ಶೈಲಶ್ರೀ ಕಾಂಚಾಯಣಿ. ಕೃಷಿ ಅಧಿಕಾರಿ ಮಹೇಶ್ ಜೋಶಿ. ಕಾರ್ಮಿಕ ಇಲಾಖೆ ಡಿ .ಬಿ. ಗುಳಬಾಳ. ಗ್ರಾಮ ಪಂಚಾಯತಿ ಸದಸ್ಯರಾದ ಜಾವೇದ್ ಪಟೇಲ್. ಚಂದು ಪವಾರ್. ಗ್ರಾಪಂ ಕಾರ್ಯದರ್ಶಿ ಶಿವಾನಂದ ದೊಡ್ಡಮನಿ .ಡಿ.ಎಸ್. ಹಿರೇಮಠ್. ಗ್ರಾಮ ಒನ್ ಸಿಬ್ಬಂದಿ ಆಸಿಫ್ ಪಟೇಲ್. ಬಸವರಾಜ ಕಟ್ಟಿಮನಿ. ತೋಟೆನ್ದ್ರ ಹೊರಕೇರಿ ಹಾಗೂ ಗ್ರಾಮಸ್ಥರು ಇದ್ದರು.

Leave a Reply

Your email address will not be published. Required fields are marked *

error: Content is protected !!