
ಉದಯವಾಹಿನಿ ಕುಶಾಲನಗರ:- ಮೋಡ ಬಿತ್ತನೆಗೆ ಚಾಲನೆ ನೀಡಿದ ಬಳಿಕ ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆ.ರೈತರ ಹಿತಕ್ಕಾಗಿ ಸ್ವಂತ ಖರ್ಚಿನಲ್ಲಿ ಮೋಡ ಬಿತ್ತನೆ ಆರಂಭ ಮಾಡಿರುವ ಸತೀಶ್ ಜಾರಕಿಹೊಳಿ ಹೇಳಿದರು.ಈ ಹಿಂದೆ ಹಾವೇರಿ ಜಿಲ್ಲೆಯಲ್ಲಿ ಮೋಡ ಬಿತ್ತನೆ ಕೈಗೊಂಡಿದ್ದ ತಜ್ಞರ ತಂಡದಿಂದಲೇ ಮೋಡ ಬಿತ್ತನೆ ಮಾಡ್ತಿದ್ದೇವೆ. ಇಂದು ಖಾನಾಪುರ, ಗೋಕಾಕ್ ತಾಲೂಕಿನಲ್ಲಿ ಮೋಡಗಳಿವೆ.ಹೀಗಾಗಿ ಇವೆರಡೂ ತಾಲೂಕಿನಲ್ಲಿ ಮೋಡ ಬಿತ್ತನೆ ಆರಂಭವಾಗಿದೆ ಎಂದರು.ಮೂರು ಗಂಟೆಗಳ ಕಾಲ ನುರಿತ ತಂಡದಿಂದ ಮೋಡ ಬಿತ್ತನೆ ನಡೆಯಲಿದೆ ಎಂದರು.
ಬೆಳಗಾವಿಯಲ್ಲಿ ಮೋಡ ಬಿತ್ತನೆ ಸಕ್ಸಸ್ ಆದ್ರೆ ಕಾವೇರಿ ಜಲಾನಯನ ಪ್ರದೇಶದಲ್ಲಿ ಮೋಡ ಬಿತ್ತನೆ ಕಾರ್ಯ ನಡೆಯಲಿದೆ ಈ ಹಿನ್ನಲೆ ಕಾವೇರಿ ನದಿ ಪಾತ್ರದಲ್ಲಿ ಮೋಡ ಬಿತ್ತನೆಗೆ ಚಿಂತನೆಯಿದೆ* ಎಂದ ಅವರು. ನಾವೇ ಸರ್ಕಾರ ಕ್ಕೆ ಅನುಮತಿ ಕೊಡುವಂತೆ ಕೇಳುತ್ತೇವೆ ಎಂದರು. *ಸರ್ಕಾರ ಅನುಮತಿ ಕೊಟ್ರೇ ಕೊಡಗು, ಮಂಡ್ಯ ಸೇರಿ ನಾಲ್ಕು ಜಿಲ್ಲೆಯಲ್ಲಿ ಮೋಡ ಬಿತ್ತನೆ.* ಕಾರ್ಯವನ್ನು ಬೆಳಗಾಂ ಶುಗರ್ಸ್ ವತಿಯಿಂದಲೇ ಮೋಡ ಬಿತ್ತನೆ ಮಾಡ್ತೇವಿ. ನಿಸರ್ಗದತ್ತ ಮಳೆಗೂ ಕೃತಕ ಮಳೆಗೂ ವ್ಯತ್ಯಾಸವಿದೆ. ಆದ್ರೂ ರೈತರಿಗೆ ತಕ್ಕಮಟ್ಟಿಗೆ ಅನುಕೂಲ ಆಗಲಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
