ಉದಯವಾಹಿನಿ ಸಿಂಧನೂರು: ಅಕ್ಟೋಬರ್ 1 ರಂದು ನಗರದ ಎಪಿಎಂಸಿಯ ಶ್ರಮಿಕ ಭವನದಲ್ಲಿ ಸರ್.ಎಂ ವಿಶ್ವೇಶ್ವರಯ್ಯ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಸಂಘದ ತಾಲ್ಲೂಕು ವತಿಯಿಂದ ಕಟ್ಟಡ ಕಾರ್ಮಿಕರ ಮಾಸಿಕ ಸಭೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಮುಕ್ತರ್ ಅಹ್ಮದ್ ಮೇಸ್ತ್ರಿ ತಿಳಿಸಿದರು.ಈ ಸಭೆ ಕುರಿತು ಎಪಿಎಂಸಿ ಸಂಘದ ಕಛೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾತನಾಡಿದ ಅವರು ನಕಲಿ ಕಾರ್ಡ್ ಗಳ ಹಾವಳಿಗಳಿಂದ ನಿಜವಾದ ಕಟ್ಟಡ ಕಾರ್ಮಿಕರಿಗೆ ಸರ್ಕಾರದ ಸೌಲಭ್ಯಗಳು ಸಿಗುತ್ತಿಲ್ಲ. ಜೊತೆಗೆ ಈ ಕುರಿತು ಹಲವಾರು ಬಾರಿ ಕಾರ್ಮಿಕ ಅಧಿಕಾರಿಗಳಿಗೆ ಮಾಹಿತಿ ನೀಡಿದರು ಸಹ ಯಾವುದೇ ಪ್ರಯೋಜನವಾಗಲ್ಲ ಎಂದು ಬೇಜಾರ ವ್ಯಕ್ತಪಡಿಸಿದರು.ಅದಕ್ಕಾಗಿ ಸರ್.ಎಂ ವಿಶ್ವೇಶ್ವರಯ್ಯ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಸಂಘದ ವತಿಯಿಂದ ನಗರದಲ್ಲಿ ಸರ್ವೆ ಮಾಡುತ್ತಿದ್ದು.ಪ್ರತಿಯೊಂದು ವಾರ್ಡ್ ಗಳಿಗೆ ನಮ್ಮ ಸಂಘದ ಸದಸ್ಯರು ಹೋಗುತ್ತಾರೆ ಇದರಿಂದ ನಿಜವಾದ ಕಟ್ಟಡ ಕಾರ್ಮಿಕರನ್ನು ಗುರುತಿಸಲು ಸಹಾಯ ಆಗುತ್ತದೆ. ಜೊತೆಗೆ ಎಲ್ಲಾ ಜನರು ನಮ್ಮ ಸದಸ್ಯರು ಸರ್ವೆ ಗೆ ವಾರ್ಡ್ ಗಳಿಗೆ ಬಂದಾಗ ನೈಜವಾದ ಕಟ್ಟಡ ಕಾರ್ಮಿಕನಾಗಿದ್ದರೆ.ಮಾಹಿತಿ ನೀಡಬೇಕು.ಈ ಸರ್ವೆ ಕಾರ್ಯ ಸೇರಿದಂತೆ ಇತರೆ ವಿಚಾರಗಳನ್ನು ಚರ್ಚೆ ನಡೆಸಲು ಅಕ್ಟೋಬರ್ 1 ರಂದು ಕಟ್ಟಡ ಕಾರ್ಮಿಕರ ಮಾಸಿಕ ಸಭೆಯನ್ನು ಏರ್ಪಡಿಸಿದ್ದು‌ ಪ್ರತಿಯೊಬ್ಬ ಕಟ್ಟಡ ಕಾರ್ಮಿಕರು ಸಭೆಗೆ ಭಾಗವಹಿಸಿ ಯಶಸ್ಸು ಗೊಳಿಸಲು ಮನವಿ ಮಾಡಿದರು. ಈ ಸಂದರ್ಭದಲ್ಲಿ, ಸಂಘದ ಸದಸ್ಯರಾದ ರಾಜು ಮೇಸ್ತ್ರಿ ಮಾತನಾಡಿದರು. ಈ ಸಂದರ್ಭದಲ್ಲಿ ಸಂಘದ ಸೆಕ್ರೆಟರಿಯಾದ ಸಾಧಿಕ್ ಮೇಸ್ತ್ರಿ, ಖಜಾಂಚಿಗಳಾದ ಬಸವರಾಜ್ ಮೇಸ್ತ್ರಿ, ಖಾದರ್ ಮೇಸ್ತ್ರಿ ಹಾಗೂ ಸೇರಿದಂತೆ ಅನೇಕರು ಇದ್ದರು.

Leave a Reply

Your email address will not be published. Required fields are marked *

error: Content is protected !!