
ಉದಯವಾಹಿನಿ ಮುದ್ದೇಬಿಹಾಳ ; ಉತ್ತರ ಕರ್ನಾಟಕದ ಬಗ್ಗೆ ರಾಜ್ಯದ ರಾಜಕಾರಣಿಗಳಿಗೆ ಆಡಳಿತ ಮಾಡುವ ಸರಕಾರಗಳಿಗೆ ನಿರ್ಲಕ್ಷ್ಯಭಾವ ಯಾರು ಇದರ ಬಗ್ಗೆ ತಲೆ ಕೆಡಿಸಿಕೂಳ್ಳುವುದಿಲ್ಲ ವೆಂದು ನಿವೃತ್ತ ಇಂಜಿನಿಯರ್, ಸಮಾಜ ಸೇವಕ ಬಿ.ಬಿ.ಪಾಟೀಲ್ ಹೇಳಿದರು ಅವರು ಶುಕ್ರವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು ಜಿಲ್ಲೆಯಲ್ಲಿ ಎರಡು ಆಣೆಕಟ್ಟು ನಿರ್ಮಾಣ ಕ್ಕೆ ನಮ್ಮ ವಿಜಯಪುರ ಜಿಲ್ಲೆಯ ಲಕ್ಷಾಂತರ ಹೆಕ್ಟೇರ ಫಲವತ್ತಯ ಭೂಮಿಯನ್ನು ಕಳೆದುಕೊಂಡು ಸರಿಯಾದ ಸಮಯಕ್ಕೆ ಭೂ ಪರಿಹಾರ ಸಿಗದೆ ನಿರ್ಗತಿಕರಾಗಿದ್ದಾರೆ ,ನಮ್ಮ ಉ.ಕ ರೈತರ ಗೋಳು ಯಾರು ಆಲಿಸುತ್ತಿಲ್ಲ ನಮ್ಮ ಭಾಗದ ರೈತರಿಗೆ ಸರಕಾರ ಯಾವ ಸೌಲಭ್ಯಗಳನ್ನು ನೀಡುವುದು ಬೇಕಿಲ್ಲ ನಮಗೆ ನಮ್ಮ ಹೋಲಕ್ಕೆ ನೀರು ಕೂಡಿ ಸಾಕು ನಾವು ದುಡಿದು ಸರಕಾರಕ್ಕೆ ನೀಡ್ತವೆ ನಮ್ಮ ವಿಜಯಪುರ ಜಿಲ್ಲೆ ಸಂಪೂರ್ಣ ನೀರಾವರಿ ಮಾಡಬೇಕು.ಕೃಷ್ಣಾ ಮೇಲ್ದಂಡೆ ಯೋಜನೆಗಳು ದಶಕ ಉರುಳಿದರೂ ಪೂರ್ಣಗೊಳ್ಳುತ್ತಿಲ್ಲ. ಮೇಲಾಗಿ ನೀರು ಹಂಚಿಕೆ ತೀರ್ಪಿನ ಬಗ್ಗೆ ಕೇಂದ್ರ ಸರಕಾರ ಅಧಿಸೂಚನೆ ಹೊರಡಿಸಿಲ್ಲ. ಅಲ್ಲದೇ ಆಲಮಟ್ಟಿ ಡ್ಯಾಂನ್ನು 524.256 ಮೀಟರ್‌ಗೆ ಎತ್ತರಿಸಿದರೆ ಕೃಷ್ಣಾ-3ನೇ ಹಂತದ ಯೋಜನೆಗಳಿಗೆ ನೀರು ಬಳಸಬೇಕು. ಅಧಿಸೂಚನೆ ಪ್ರಕಟಗೊಂಡು, ಡ್ಯಾಂ ಎತ್ತರಿಸಲು ಇನ್ನೆಷ್ಟು ವರ್ಷ ಬೇಕಾಗುತ್ತದೋ ಗೊತ್ತಿಲ್ಲ. ಏತನ್ಮಧ್ಯೆ ಪೂರ್ವ ತಯಾರಿ ಹಿನ್ನೆಲೆಯಲ್ಲಿಯೋಜನೆಗಳ ಮುಖ್ಯ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಕೆರೆಗಳನ್ನು ತುಂಬಿಸುತ್ತಿರುವುದರಿಂದ ಅಂತರ್ಜಲ ಮಟ್ಟ ಹೆಚ್ಚಾಗಿ ಪರೋಕ್ಷವಾಗಿ ರೈತರಿಗೆ ನೆರವಾಗುತ್ತದೆ. ಆದರೆ ರೈತರ ಹೊಲಕ್ಕೆ 3ನೇ ಹಂತದ ಯೋಜನೆಗಳಿಂದ ನೀರು ಹರಿದಾಗಲೇ ನೀರಾವರಿ ಕನಸು ನನಸಲಾಗಲಿದೆ ಎಂದರು. ಕಾವೇರಿ ನದಿ ನೀರು ಹಂಚಿಕೆಯ ಬಗ್ಗೆ ಸರಕಾರಕ್ಕೆ ಇರುವ ಕಾಳಜಿ ಕೃಷ್ಣ ನದಿ ನೀರು ಹಂಚಿಕೆಯಲ್ಲಿ ಇಲ್ಲಾ ,ಕೃಷ್ಣ ಜಲನಿಗಮದ ಅಧಿಕಾರಿಗಳು ರೈತರಿಗೆ ಸರಿಯಾದ ಮಾಹಿತಿಯನ್ನು ನೀಡುವುದಿಲ್ಲ ನಮ್ಮ ಮುದ್ದೇಬಿಹಾಳ ತಾಲೂಕು ಸಂಪೂರ್ಣ ನೀರಾವರಿ ಆಗಬೇಕು ನಮ್ಮ ರೈತರು ಆಲಮಟ್ಟಿ ಮತ್ತು ನಾರಾಯಣಪುರ ಆಣೆಕಟ್ಟಿಗಾಗಿ ತಮ್ಮ ಫಲವತ್ತಾದ ಭೂಮಿಯನ್ನು ಮಾತ್ರವಲ್ಲದೆ ಹುಟ್ಟಿದ ಊರುಗಳನ್ನು ಕಳೆದುಕೊಂಡಿದ್ದಾರೆ ಆಳುವ ಸರಕಾರಗಳು ಉತ್ತರ ಕರ್ನಾಟಕಕ್ಕೆ ಮಾನ್ಯತೆ ನೀಡುವುದಿಲ್ಲ ಕೀಳು ಭಾವನೆಯಿಂದ ಕಾಣುತ್ತಾರೆ.ಕೃಷ್ಣಾ ೩ ನೇ ಹಂತದ ಯೋಜನೆ ಅನುಷ್ಠಾನಕ್ಕೆ ವಿಜಯಪುರ ಜಿಲ್ಲೆಯ ಮತ್ತು ನಮ್ಮ ತಾಲ್ಲೂಕಿನ ರೈತರು ಒಂದಾಗಿ ಧ್ವನಿ ಎತ್ತಬೇಕಿದೆ ಎಂದು ಕರೆ ನೀಡಿದರು.ನ್ಯಾಯವಾದಿ ಜೆ.ಎ ಚಿನಿವಾರ ಮಾತನಾಡಿ ಕೃಷ್ಣಾ 3 ನೇಹಂತದ ಅನುಷ್ಠಾನ ಆಗಬೇಕು ಉ.ಕ ರೈತರ ಬಗ್ಗೆ ರೈತರ ಸಮಸ್ಯೆಗಳ ಬಗ್ಗೆ ಆಳುವ ಸರಕಾರಗಳು ಅರಿಯಬೇಕು ಮುದ್ದೇಬಿಹಾಳ ತಾಲ್ಲೂಕು ಸಂಪೂರ್ಣ ನೀರಾವರಿ ಕ್ಷೇತ್ರವಾಗಬೇಕು ಮತ್ತು ತಾಲೂಕಿನ ಎಲ್ಲಾ ಗ್ರಾಮಗಳಲ್ಲಿ ಎರಡು ಕರೆಗಳ ನಿರ್ಮಾಣ ಮಾಡಬೇಕು ಇದರಿಂದ ಅಂತರ್ಜಲ ಹೆಚ್ಚಾಗುತ್ತದೆ ಇದರಿಂದ ಕೃಷಿಗೆ ಸಹಕಾರಿಯಾಗುತ್ತದೆ ನದಿಯ ನೀರನ್ನು ಅವಲಂಬಿಸುವ ಅವಶ್ಯಕತೆ ಇಲ್ಲವೆಂದರು.
ಸರಕಾರಕ್ಕೆ 6 ಬೇಡಿಕೆಗಳು ;
1. ಕೃಷ್ಣಾ ನ್ಯಾಯಾಧಿಕರಣ – 2 ರ ಐತಿರ್ಪಿನ ಅನ್ವಯ ಯುಕೆಪಿ 3ನೇ ಹಂತದಡಿ ಆಲಮಟ್ಟಿ ಜಲಾಶಯದ ಎತ್ತರವನ್ನು 519.60 ಮೀ ದಿಂದ 524.256 ಮೀ ವರೆಗೆ ಹೆಚ್ಚಿಸಬೇಕು.
2. ಕೃಷ್ಣಾ ನ್ಯಾಯಾಧಿಕರಣ – 2 ರ ಐತಿರ್ಪಿನ ಅಧಿಸೂಚನೆಯನ್ನು ಕೆಂದ್ರ ಸರಕಾರ ಕೂಡಲೆ ಹೊರಡಿಸಿ ಹೆಚ್ಚುವರಿಯಾಗಿ ದೊರೆಯುವ 170 ಟಿ.ಎಮ್.ಸಿ ನೀರನ್ನು ಯುಕೆಪಿ 3 ನೇ ಹಂತಕ್ಕೆ ಬಳಸಿಕೊಳ್ಳಲು ಅಧಿಸೂಚಿಸಬೇಕು.
3. ಕೃಷ್ಣಾ ಮೆಲ್ದಂಡೆ ಯೋಜನೆಯನ್ನು “ರಾಷ್ಟ್ರೀಯ ಯೋಜನೆ” ಎಂದು ಘೋಷಣೆ ಮಾಡಿ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು.
4. 9 ಏತ ನೀರಾವರಿ ಯೋಜನೆಗಳನ್ನು ಕೂಡಲೆ ಪೂರ್ಣಗೊಳಿಸಬೇಕು.
5. ಕೃಷ್ಣಾ ಮೆಲ್ದಂಡೆ ಯೋಜನೆಯಲ್ಲಿ ಜಮಿನು ಕಳೆದುಕೊಂಡ ರೈತರಿಗೆ ಎಕರೆಗೆ 25 ಲಕ್ಷ ರೂಪಾಯಿಗಳಂತೆ ಪರಿಹಾರ ವದಗಿಸಬೇಕು ಹಾಗೂ ಸರಕಾರಿ ಹುದ್ದೆಗಳಲ್ಲಿ ಸಂತ್ರಸ್ತ ಕುಟುಂಭದವರನ್ನು ನೇರ ನೇಮಕಾತಿ ಮಾಡಿಕೊಳ್ಳಬೇಕು.
6. ಮುಖ್ಯ ಕಾಲುವೆಯ ವಿತರಣಾ ಕಾಲುವೆಗಳಲ್ಲಿ ನೀರು ನಿರ್ವಹಣೆ ಮಾಡಲು ಪ್ರತಿ 10 ಕೀ.ಮೀ ಗೆ ಒಬ್ಬರಂತೆ ನೀರುಗಂಟಿಗಳನ್ನು ನೇಮಿಸಬೇಕು.
