
ಉದಯವಾಹಿನಿ ಸಿರುಗುಪ್ಪ : ತಾಲ್ಲೂಕಿನ ತೆಕ್ಕಲಕೋಟೆ ಪಟ್ಟಣದ ಷಾ ಹುಸೇನ್ ನಗರದ ಶಾದಿ ಮಹಲ್ ನ ಆವರಣದಲ್ಲಿ ನಡೆದ ಸಿರುಗುಪ್ಪ ತಾಲ್ಲೂಕು ಘಟಕ ಕರ್ನಾಟಕ ರಾಜ್ಯಪಿಂಜಾರ / ನದಾಫ್ ಹಿತಾಭಿವೃದ್ಧಿ ಸಂಘ ಹಾಗೂ ಡಾ. ಎಪಿಜೆ ಅಬ್ದುಲ್ ಕಲಾಂ ಯುವಕ ಸಂಘಗಳ ಸಹಯೋಗದಲ್ಲಿ 16ನೇ ವರ್ಷದ ಉಚಿತ ಖತ್ನ (ಮುಂಜಿ) ಕಾರ್ಯಕ್ರಮವನ್ನು ಬೆಂಗಳೂರಿನ ಭಾರತೀಯ ಪಿಂಜಾರ, ನದಾಫ್, ಮನ್ಸೂರಿ ಭಾವೈಕ್ಯ ಗುರುಪೀಠಾಧಿಪತಿ ಸಂಗಮ್ ಪೀರ್ ಚಿಷ್ತೀ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ನಮ್ಮ ಸಮುದಾಯದ ಅಧ್ಯಾಯನವಾಗಬೇಕು.
ಶೈಕ್ಷಣಿಕ ಹಾಗೂ ಸಾಮಾಜಿಕ, ಆರ್ಥಿಕವಾಗಿ ಸರ್ಕಾರದಿಂದ ವಂಚಿತರಾಗಿದ್ದಾರೆ. ಪಿಂಜಾರರ ಬದುಕು ಮೂರಾಬಟ್ಟೆಯಾಗಿದೆ, ಪಿಂಜಾರರು ನೇಕಾರರು, ನೇಕಾರರಿಗೆ ಸಿಗುವ ಸೌಲಭ್ಯಗಳು ನಮ್ಮ ಸಮಾಜಕ್ಕೆ ಸಿಗಬೇಕು. ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಿದ್ದೇವೆ . ಪಿಂಜಾರ ಸಮುದಾಯ ಪ್ರವರ್ಗ ಒಂದರಲ್ಲಿ ಬಂದರೂ ನಿಗಮಗಳ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ ವಿವಿಧ ಸಮಾಜಗಳು ವಿವಿಧ ನಿಗಮಗಳಿಂದ ಸೌಲಭ್ಯಗಳು ಪಡೆಯುತ್ತಿದ್ದಾರೆ ಇದರ ಬಗ್ಗೆ ಈಗಾಗಲೇ ಸಂಭಂದಿಸಿದ ಸಚಿವರೊಂದಿಗೆ, ಅಧಿಕಾರಿಗಳೊಂದಿಗೆ ಮನವಿ ಮುಖಾಂತರ ನಮ್ಮ ಪೀಠ ಮಾತನಾಡಿಸಿದೆ. ಮುಂದಿನ ದಿನಗಳಲ್ಲಿ ನಿಗಮ ಜಾರಿಗಾಗಿ ರಾಜ್ಯ ಮಟ್ಟದಲ್ಲಿ ಅತೀ ಹಿಂದುಳಿದ ಸ್ವಾಮಿಗಳು ಎಲ್ಲರೂ ಸೇರಿ ಒಗ್ಗಟ್ಟಿನಿಂದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು. ನಿಗಮ ಜಾರಿಗೆಯಾದಾಗ ಮಾತ್ರ ನಮ್ಮ ಸಮಾಜ ಶೈಕ್ಷಣಿಕ ಮತ್ತು ಆರ್ಥಿಕ, ಸಾಮಾಜಿಕವಾಗಿ ಬೆಳೆಯಲು ಸಾಧ್ಯ ಎಂದು ಹೇಳಿದರು. ಈ ಸಂದರ್ಭದಲ್ಲಿ ಹಜರತ್ ಸಮೀರ್ ಸೇಠ್ (ಇರ್ಫಾನ್ ಅಲೀ ಷಾ ) ಕಲಂದರಿಯಾ,ಚಿಷ್ತೀಯಾ ಸಬಾರಿ, ಬಳ್ಳಾರಿ, ಡಿ.ಮೆಹಬೂಬ್ ಬಾಷಾ ನಿವೃತ್ತ ಡಿ.ಎಸ್.ಪಿ ಹಾಗೂ ಅಧ್ಯಕ್ಷರು ಕರ್ನೂಲ್ ಜಿಲ್ಲಾ ನೂರ್ ಬಾಷ, ದುದೇಕುಲಂ ಸಂಘ, ಹೆಚ್.ಪಿ.ಮೆಹಬೂಬ್ ಬಾಷಾ ವಿಭಾಗೀ ಅಧ್ಯಕ್ಷರು ನೂರ್ ಬಾಷ, ದುದೇಕುಲಂ ಸಂಘ, ಹೆಚ್.ಮಾಬುಸಾಬ್ ಅಧ್ಯಕ್ಷರು ಸಿರುಗುಪ್ಪ ತಾಲೂಕು ಪಿಂಜಾರ/ನದಾಫ್ ಹಿತಾಭಿವೃದ್ಧಿ ಸಂಘ,ಹೆಚ್.ಮಾಬುಸಾಬ್ ಅಧ್ಯಕ್ಷರು ಸಿರುಗುಪ್ಪ ತಾಲೂಕು ಪಿಂಜಾರ/ನದಾಫ್ ಹಿತಾಭಿವೃದ್ಧಿ ಸಂಘ, ಎಂ.ಮಾಬುಸಾಬ್ ಸಿರಿಗೇರಿ ಉಪಾಧ್ಯಕ್ಷರು ಸಿರುಗುಪ್ಪ ತಾಲೂಕು ಪಿಂಜಾರ/ನದಾಫ್ ಹಿತಾಭಿವೃದ್ಧಿ ಸಂಘ, ಎನ್.ಮಾಬುಸಾಬ್ ಖಜಾಂಚಿ ಸಿರುಗುಪ್ಪ ತಾಲೂಕು ಪಿಂಜಾರ/ನದಾಫ್ ಹಿತಾಭಿವೃದ್ಧಿ ಸಂಘ, ಎಮಿನೂರ್ ಶೇಕ್ಷವಲಿ ನಿವೃತ್ತ ಗಡಿ ಯೋಧ, ಜಿ ಖಾದರ್ ಸಾಬ್ ಹಾಗೂ ಪಿಂಜಾರ/ನದಾಫ್ ಸಮಾಜದ ಮುಖಂಡರು ಹಾಗೂ ಎ.ಪಿ.ಜೆ ಅಬ್ದುಲ್ ಕಲಾಂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
