ಉದಯವಾಹಿನಿ ಬಾಣಾವರ: ಇಲ್ಲಿನ ನಿವೃತ್ತ ಅಗ್ನಿಶಾಮಕ ಇಲಾಖೆ ಅಧಿಕಾರಿ ಬಸವರಾಜ್ ರವರಿಗೆ ಒಲಿದ ಮುಖ್ಯಮಂತ್ರಿಗಳ ಚಿನ್ನದ ಪದಕ ಬಾಣಾವರ ಸಮೀಪದ ಕೆಂಗುರುಬರಹಟ್ಟಿಯ ಹೊನ್ನೂರಪ್ಪ ಹಾಗೂ ಎಲ್ಲಮ್ಮ ದಂಪತಿಯ ಮಗನಾಗಿ 1/6/1963 ಜನಿಸಿದ ಬಸವರಾಜ್ ರವರು ತಮ್ಮ ಪ್ರಾರ್ಥಮಿಕ ವಿದ್ಯಾಭ್ಯಾಸವನ್ನು ಕೆಂಗೇರಿ ಹಾಗೂ ಶಾನೆಗೆರೆ ಗ್ರಾಮಗಳಲ್ಲಿ ಮುಗಿಸಿ ಉನ್ನತ ವ್ಯಾಸಂಗವನ್ನು ಚಿಕ್ಕಮಂಗಳೂರಿನಲ್ಲಿ ಪಡೆದರು ತಾವು ವಿದ್ಯಾರ್ಥಿಯಾಗಿದ್ದಾಗಲೇ ಸೇವಾ ವಲಯಕ್ಕೆ ಸೇರಿಕೊಂಡಂತಹ ಬಸವರಾಜ್ ರವರು ಕರ್ನಾಟಕ ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಗಣನೀಯವಾಗಿ ಸಲ್ಲಿಸಿದ ಸೇವೆ ಹಾಗೂ ಅವರ ಕಾರ್ಯದಕ್ಷತೆ ಮತ್ತು ಕ್ಷಮತೆಯನ್ನು ಪರಿಗಣಿಸಿದಂತಹ ಕರ್ನಾಟಕ ರಾಜ್ಯ ಸರ್ಕಾರ ಮುಖ್ಯಮಂತ್ರಿಗಳ ಸ್ವರ್ಣ ಪದಕವನ್ನು ನೀಡಿ ಗೌರವಿಸಿದೆ ಬಸವರಾಜ್ ರವರಿಗೆ ಅರಸೀಕೆರೆ ಕ್ಷೇತ್ರದ ಶಾಸಕರಾದ ಕೆಎಂ ಶಿವಲಿಂಗೇಗೌಡರು ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಬಿಳಿ ಚೌಡಯ್ಯ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಬಿ ಎಸ್ ಅಶೋಕ್ ಮಾಜಿ ತಾಲೂಕು ಪಂಚಾಯತ್ ಸದಸ್ಯ ಬಿ ರವಿಶಂಕರ್ ಬಾಣಾವರ ಗ್ರಾಮ ಪಂಚಾಯತ್ ಅಧ್ಯಕ್ಷ ವೀಣಾ ಸುರೇಶ್ ಸೇರಿದಂತೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ ಸಿ ಶ್ರೀನಿವಾಸ ಹಾಗೂ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಬಿಎಂ ಜಯಣ್ಣ ಸೇರಿದಂತೆ ಇತರರು ಅಭಿನಂದಿಸಿದರು ಈ ಸಂದರ್ಭದಲ್ಲಿ ಪ್ರಶಸ್ತಿಯನ್ನು ಪಡೆದಂತಹ ಬಸವರಾಜ್ ರವರು ಪತ್ರಕರ್ತರೊಂದಿಗೆ ಮಾತನಾಡಿ ತನ್ನ ಸೇವಾ ದಕ್ಷತೆ ಹಾಗು ಕ್ಷಮತೆಯನ್ನು ಪರಿಗಣಿಸಿ ಪ್ರಶಸ್ತಿ ನೀಡಿದ ಸರ್ಕಾರ ಹಾಗೂ ಇಲಾಖೆಗೆ ಆಭಾರಿಯಾಗಿರುವುದಾಗಿ ಮತ್ತು ಪ್ರಶಸ್ತಿ ಲಭಿಸಿರುವುದಕ್ಕೆ ಹೆಚ್ಚಿನ ಸಂತೋಷವಾಗಿದ್ದು ಈ ಒಂದು ಕ್ಷಣವನ್ನು ತನ್ನ ಜೀವಿತಾವಧಿಯಲ್ಲಿ ಎಂದಿಗೂ ಮರೆಯುವುದಿಲ್ಲ ಎಂದು ತಿಳಿಸಿದರು

Leave a Reply

Your email address will not be published. Required fields are marked *

error: Content is protected !!