ಉದಯವಾಹಿನಿ ಅರಸೀಕೆರೆ : ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಧ್ವನಿ ಸಂಘಟನೆಯ ಮಾಧ್ಯಮ ಮಿತ್ರರು ತಮ್ಮ ಹಲವಾರು ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕೆಂದು ರಾಜ್ಯಾದ್ಯಂತ ತಾಲೂಕು ತಹಶೀಲ್ದಾರ್ ಮತ್ತು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರಕ್ಕೆ ರಕ್ತದ ಮೂಲಕ ಸಹಿ ಹಾಕಿ ತಮ್ಮ ಮನವಿಯನ್ನು ನೀಡುತ್ತಿದ್ದಾರೆ ಎನ್ನಲಾಗಿದೆ.ಕರ್ನಾಟಕ ಕಾರ್ಯನಿರತ ಪತ್ರಕರ್ತರ ದ್ವನಿ ಸಂಘಟನೆ ಯಲ್ಲಿ ಬಂಗ್ಲೆ ಮಲ್ಲಿಕಾರ್ಜುನ್ ರವರು ರಾಜ್ಯಾಧ್ಯಕ್ಷರಾಗಿದ್ದು ಸಂಘಟನೆಯು ಹೆಚ್ಚಿನ ರೀತಿಯಲ್ಲಿ ಪ್ರಬಲವಾಗಿದ್ದು ರಾಜ್ಯದ ಮೂಲೆ ಮೂಲೆಗಳಿಂದಲೂ ಸಹ ಪತ್ರಕರ್ತರ ಬೇಡಿಕೆಗೆ ಈಡೇರಿಸಲೇಬೇಕೆಂದು ಪಟ್ಟು ಹಿಡಿದಿದ್ದು ಪತ್ರಕರ್ತರು ರಕ್ತದ ಮೂಲಕ ಸಹಿ ಹಾಕಿ ಸರ್ಕಾರಕ್ಕೆ ಬಿಸಿ ಮುಟ್ಟಿಸುತ್ತಿದ್ದಾರೆ ಎನ್ನಲಾಗಿದೆ
ಈ ಮಧ್ಯೆ ಸಾಮಾಜಿಕ ಕಳಕಳಿಯುಳ್ಳ ಮುಖ್ಯಮಂತ್ರಿ ಹಿಂದುಳಿದ ವರ್ಗ ಶೋಷಿತರ ಪಾಲಿನ ಜನಪ್ರಿಯ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಷ್ಟ್ರದಲ್ಲಿಯೇ ಪ್ರಪ್ರಥಮವಾಗಿ ಕರ್ನಾಟಕದಲ್ಲಿ ಬಡವರು ದೀನದಲಿತರಿಗೆ ಐದು ಗ್ಯಾರೆಂಟಿಗಳನ್ನು ನೀಡಿ ಇತಿಹಾಸ ನಿರ್ಮಿಸಿದ ಸಿದ್ದರಾಮಯ್ಯನವರು ಪತ್ರಕರ್ತರ ಬೇಡಿಕೆಗಳನ್ನು ಈಡೇರಿಸಿ ನಮ್ಮ ಕಷ್ಟಗಳಿಗೆ ಸ್ಪಂದಿಸಲಿದ್ದಾರೆ ಎಂಬುವ ಭರವಸೆ ಇದೆ ಎಂದು ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಧ್ವನಿ ಸಂಘಟನೆಯ ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ ಪ್ರತಿಕ್ರಿಯಿಸಿದ್ದಾರೆ. ಈ ಮೂಲಕ ಸಿದ್ದರಾಮಯ್ಯನವರು ಮಾಧ್ಯಮ ರಾಮಯ್ಯನಾಗ ಬೇಕೆಂದು ನೊಂದ ಪತ್ರಕರ್ತರು ತಿಳಿಸಿದ್ದಾರೆ ಈ ಹಿಂದೆ ಹಲವಾರು ಬಾರಿ ಪತ್ರಕರ್ತರ ಸಮಸ್ಯೆಗಳ ಹಿಡಿದು ಬಂಗ್ಲೆ ಮಲ್ಲಿಕಾರ್ಜುನ್ ರವರು ಮನವಿಯನ್ನು ನೀಡುತ್ತಲೇ ಬಂದಿದ್ದು ತಮ್ಮ ಪ್ರಾಮಾಣಿಕ ಹೋರಾಟದ ಮೂಲಕ ಪತ್ರಕರ್ತರ ಸಮಸ್ಯೆಗೆ ಪ್ರಾಮಾಣಿಕ ವಾಗಿ ಸ್ಪಂದಿಸುವಲ್ಲಿ ತಮ್ಮದೇ ರೀತಿಯಲ್ಲಿ ವಿಶಿಷ್ಟ ಹೆಸರನ್ನು ಗಳಿಸಿದ್ದು ಈ ಬಾರಿ ಮುಖ್ಯಮಂತ್ರಿಗಳ ಗಮನ ಸೆಳೆಯಲು ವಿಶಿಷ್ಟ ಹೋರಾಟದ ದಾರಿ ಹಿಡಿದಿದ್ದು ಪತ್ರಕರ್ತರು. ಸ್ವತಃ ಮನವಿಗೆ ತಮ್ಮ ರಕ್ತದ ಮೂಲಕ ಸಹಿ ಹಾಕಿ ರಾಜ್ಯದ ಮೂಲೆ ಮೂಲೆಗಳೆಂದಲೂ ಸಹ ಕಳುಹಿಸುತ್ತಿರುವುದು ವಿಶಿಷ್ಟವೆನಿಸಿದೆ ಒಟ್ಟಾರೆ ಮುಖ್ಯಮಂತ್ರಿಗಳು ಪತ್ರಕರ್ತರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಪ್ರಾಮಾಣಿಕವಾಗಿ ಸ್ಪಂದಿಸಬೇಕಾಗಿದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ದ್ವನಿ ಸಂಘಟನೆಯ ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ್ ರವರ ಹೋರಾಟಕ್ಕೆ ಜಯ ಸಿಗಲಿ ಎಂದು ಉದಯವಾಹಿನಿ ಪತ್ರಿಕೆ ಹಾರೈಸುತ್ತದೆ

Leave a Reply

Your email address will not be published. Required fields are marked *

error: Content is protected !!