ಉದಯವಾಹಿನಿ, ಆನೇಕಲ್: ಹೆಬ್ಬಗೋಡಿಯ ಓಣಮ್ಮ ದೇವಾಲಯದ ಆವರಣದಲ್ಲಿ ವಿಷ್ನೇಶ್ವರ ಗೆಳೆಯರ ಬಳಗದ ವತಿಯಿಂದ ೧೧ ನೇ ವರ್ಷದ ಗಣೇಶೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ಆಯೋಜಿಸಲಾಗಿತ್ತು.
ಇದೇ ಸಂಧರ್ಭದಲ್ಲಿ ಸಮಾಜ ಸೇವಕರಾದ ಹೆಬ್ಬಗೋಡಿ ಮಂಜುಳ ರವರು ಸುಮಾರು ೫೦೧ ಮಹಿಳೆಯರಿಗೆ ಮುತ್ತೈದೆ ಬಾಗಿನವನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ವಿಷ್ನೇಶ್ವರ ಗೆಳೆಯರ ಬಳಗದ ಹೇಮಂತ್, ಸಂತೋಷ್, ಶಾಂತ್ ಕುಮಾರ್, ಶಿವಕುಮಾರ್, ರಿಚೋರ್ಡ್, ಅಕ್ಷಿತ ಗೌಡ, ಸರ್ವಮಂಗಲ, ಪೂಜಾ ಮತ್ತಿರರು ಭಾಗವಹಿಸಿದ್ದರು.
