ಉದಯವಾಹಿನಿ, ವಿಜಯಪುರ: ಹಲವಾರು ವರ್ಷಗಳಿಂದ ಶಿಥಿಲಾವಸ್ತೆಯಲ್ಲಿರುವ ಗುರಪ್ಪನಮಠದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಹೊಸ ಕಟ್ಟಡ ಕಟ್ಟಬೇಕು ಎಂದು ಪೋಷಕರು ಹಾಗೂ ಸ್ಥಳೀಯರು ಮಾಡಿದ್ದ ಒತ್ತಾಯದ ಮೇರೆಗೆ ಈಗ ನೂತನ ಕಟ್ಟಡ ನಿರ್ಮಾಣದ ಭಾಗ್ಯ ಸಿಕ್ಕಿದೆ ಎಂದು ಕೆಪಿಸಿಸಿ ಸದಸ್ಯ ವಿ.ಮಂಜುನಾಥ್ ತಿಳಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತುಂಬಾ ಹಳೇಯದಾದ ಕಟ್ಟಡದಲ್ಲಿ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಮಳೆ ಬಂದರೆ ಶೀಟುಗಳಿಂದ ಕೂಡಿರುವ ಮೇಲ್ಛಾವಣಿಯೆಲ್ಲಾ ಸೋರುತ್ತಿದೆ. ಈ ಬಗ್ಗೆ ಹಲವು ಬಾರಿ ದಿನಪತ್ರಿಕೆಗಳಲ್ಲಿಯೂ ಸುದ್ದಿ ಪ್ರಕಟವಾಗಿತ್ತು.
