ಉದಯವಾಹಿನಿ, ಜೊಹಾನಸ್‌ಬರ್ಗ್: ಜಿಂಬಾಬ್ವೆಯ ನೈರುತ್ಯ ಭಾಗದಲ್ಲಿ ವಜ್ರದ ಗಣಿ ಹೊಂದಿರುವ ಹರ್ಪಾಲ್ ರಾಂಧವಾ ಹಾಗೂ ಅವರ ಪುತ್ರ ಸೇರಿ ಆರು ಜನ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಘಟನೆ ಸೆ. 29ರಂದು ನಡೆದಿದ್ದು, ಸೋಮವಾರ ವರದಿಯಾಗಿದೆ. ರಿಯಾನ್‌ಝಿಮ್ ಎಂಬ ಗಣಿಯ ಮಾಲೀಕರಾದ ರಾಂಧವಾ, ಚಿನ್ನ, ಕಲ್ಲಿದ್ದಲ್ಲು, ನಿಕ್ಕಲ್, ತಾಮ್ರದ ಗಣಿಗಾರಿಕೆಯನ್ನೂ ನಡೆಸುತ್ತಿದ್ದರು. ಇವರ ತಮ್ಮ ಖಾಸಗಿ ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗ ಹರಾರೆ ಬಳಿಯ ಮಾಷವಾ ಎಂಬಲ್ಲಿ ವಿಮಾನ ಪತನಗೊಂಡಿದೆ.
ಹಾರಾಟ ಸಂದರ್ಭದಲ್ಲಿ ಎಂಜಿನ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತು. ಇದರಿಂದ ವಿಮಾನ ಪತನಗೊಂಡಿತು. ವಿಮಾನ ಸಿಬ್ಬಂದಿ ಸೇರಿದಂತೆ ಆರೂ ಜನ ಮೃತಪಟ್ಟಿದ್ದಾರೆ ಎಂದು ಪೊಲೀಸರು ಖಚಿತಪಡಿಸಿರುವುದಾಗಿ ದಿ ಹೆರಾಲ್ಡ್ ಪತ್ರಿಕೆ ವರದಿ ಮಾಡಿದೆ.
