
ಉದಯವಾಹಿನಿ, ಸಿಂಧನೂರು: ನಗರಭೆಯಿಂದ ಮಹಾತ್ಮಗಾಂಧಿಜೀಯವರ ಜಯಂತಿಯ ಪ್ರಯುಕ್ತ ಏಕ್ ದಿವಸ್, ಏಕ್ ಗಂಟಾ, ಏಕ್ ತಾರಿಕ್ ಸಂಕಲ್ಪದಡಿಯಲ್ಲಿ ಸ್ವಚ್ಚತಾ ಹೀ ಸೇವಾ ವಿಶೇಷ ಶ್ರಮದಾನದ ಕಾರ್ಯಕ್ರಮನ್ನುಹಮ್ಮಿಕೊಳ್ಳಲಾಗಿತ್ತು.ಒಂದೇ ಸಮಯದಲ್ಲಿ ನಗರದ ವಿವಿಧ ಸ್ಥಳಗಳಲ್ಲಿ ಶ್ರಮದಾನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು,ಬಾಬಾ ರಾಮದೇವ್ ದೇವಸ್ಥಾನದ ಪಕ್ಕದಲ್ಲಿರುವ ಉದ್ಯಾನವನದಲ್ಲಿ ಸುಮಾರು 200 ಕ್ಕೂ ಅಧಿಕ ಸ್ವಯಂ ಸೇವಕರಿಂದ ಶ್ರಮದಾನದ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಶ್ರೀಮತಿ ದೀಪಾ ಮನೇನ್ಕರ್ ಶ್ರಮದಾನ ಕಾರ್ಯಕ್ರಮ ಕುರಿತು ಮಾತನಾಡಿದ ಅವರು ಸಿಂಧನೂರನ್ನು ಪ್ಲಾಸ್ಟಿಕ್ ಮುಕ್ತವಾಗಿಸಬೇಕು, ಹಾಗಾಗಿ ಎಲ್ಲಾ ವರ್ತಕರು ಪ್ಲಾಸ್ಟಿಕ್ ನ್ನು ವರ್ಜಿಸಬೇಕೆಂದರು, ಕೋಟೆಪ್ಪ ಕಾಂಬ್ಳೆ ರವರು ಮಾತನಾಡಿ ಸ್ವಚ್ಛ ಹಾಗೂ ಹಸಿರು ಸಿಂಧನೂರಿಗಾಗಿ ಸರ್ವರೂ ಮನೆಗೊಂದು ಸಸಿ ನೆಡಬೇಕು ಎಂದು ತಿಳಿಸಿದರು.
ನಗರದ ಸಭೆ ಪೌರಾಯುಕ್ತರು ಮಂಜುನಾಥ್ ಗುಂಡೂರು ಅವರು ಮಾತನಾಡಿ ಧೂಳು, ಕಸಮುಕ್ತ ಸಿಂಧನೂರಿಗಾಗಿ ಸಾರ್ವಜನಿಕರು ಹಸಿ, ಒಣ ತ್ಯಾಜ್ಯ ವಿಂಗಡಿಸಿ ನಗರಸಭೆ ವಾಹನಗಳಿಗೆ ಹಾಕಬೇಕು, ಉದ್ಯಾನವನಗಳನ್ನು ಕಾಪಾಡಬೇಕು, ಸಿಂಧನೂರು ವ್ಯಾಪ್ತಿಯ ವಿವಿಧ ಸಂಘಟನೆಗಳು ನಗರಸಭೆಯೊಂದಿಗೆ ವಾರಕ್ಕೊಮೆಯಾದರೂ ಕೈ ಜೋಡಿಸಿ ಸ್ವಚ್ಚಸಿಂಧನೂರಿಗೆ ಪಣ ತೊಡಬೇಕೆಂದರು.
ಸಿದ್ದ ಸಮಾಧಿ ಯೋಗ ಸದಸ್ಯರೊಂದಿಗೆ ಯಲ್ಲಮ್ಮ ದೇವಸ್ಥಾನದಲ್ಲಿ,ಮಹೇಶ ಹಿರಿಯ ಆರೋಗ್ಯ ನಿರೀಕ್ಷಕರ ನೇತೃತ್ವದಲ್ಲಿ ಅಂಬೇಡ್ಕರ್ ವೃತ್ತ ಹಾಗೂ PWD ಕ್ಯಾಂಪ್ ನ ಉದ್ಯಾನವನದಲ್ಲಿ, ಲಕ್ಷ್ಮೀ ಪತಿ ಕಿರಿಯ ಆರೋಗ್ಯ ನಿರೀಕ್ಷಕರ ನೇತೃತ್ವದಲ್ಲಿ ಬಡಿಬೇಸ್ ಸರಕಾರಿ ಶಾಲೆ, ಫಾತಿಮಾ ಪಂಕ್ಷನ್ ಹಾಲ್,ಜಾಮೀಯಾ ಮಸ್ಜಿದ್, ಕಿಶನ್ ಹಿರಿಯ ಆರೋಗ್ಯ ನಿರೀಕ್ಷಕರ ನೇತೃತ್ವದಲ್ಲಿ ಸರಕಾರಿ ಸಾರ್ವಜನಿಕರ ಆಸ್ಪತ್ರೆ, ಪೊಲೀಸ್ ಸ್ಟೇಷನ್, ಗಾಂಧಿ ವೃತ್ತ ಹಾಗೂ ಕಾಲ್ಯಾಣ ಸಿಂಧೂ ಸಂಸ್ಥೆಯ ನೇತೃತ್ವದಲ್ಲಿ ತಹಶಿಲ್ದಾರರ ಕಛೇರಿ, ಸಬ್ ರಿಜಿಸ್ಟರ್ ಕಚೇರಿ, ಹಾಗೂ ಬಾಬಾ ರಾಮ್ ದೇವ್ ದೇವಸ್ಥಾನದ ಹತ್ತಿರ ಇರುವ ಉದ್ಯಾನವನದಲ್ಲಿ ದಾಸರಿ ಸತ್ಯನಾರಾಯಣ ರವರ ನೇತೃತ್ವದಲ್ಲಿ ಶ್ರಮದಾನವನ್ನು ಕೈಗೊಳ್ಳಲಾಯಿತು,ಸ್ವಚ್ಚತಾ ಹೀ ಸೇವಾ ಕಾರ್ಯಕ್ರಮಕ್ಕೆ ಪಾಟೀಲ್ ಮಹಿಳಾ ಕಾಲೇಜು ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜಿನಿಂದ 100 NSS ವಿದ್ಯಾರ್ಥಿಗಳು ಭಾಗವಹಿಸಿದ್ದರು,ಈ ಸಂದರ್ಭದಲ್ಲಿ ಪೌರಾಯುಕ್ತ ಮಂಜುನಾಥ ಗುಂಡೂರ್,ಮಹೇಶ, ಆರ್ ಸಿ ಪಾಟೀಲ್, ಶಿವರಾಜ ಹಟ್ಟಿ, ಅಬ್ದುಲ್, ದುರ್ಗಪ್ಪ, ಸದಸ್ಯರಾದ ಶ್ರೀ ದಾಸರಿ ಸತ್ಯ ನಾರಾಯಣ ಹಾಗೂ ಚಂದು ಮೈಲಾರ್, ಪಟ್ಟಣ ವ್ಯಾಪಾರ ಸಮಿತಿಯ ಪದಾಧಿಕಾರಿಗಳು, ಸ್ವಯಂ ಸೇವಕರು, ನಗರಸಭೆಯ ಸಿಬ್ಬಂದಿ ಹಾಗೂ ಪೌರಕಾರ್ಮಿಕರ ತಂಡ ಹಾಜರಿದ್ದರು.
