
ಉದಯವಾಹಿನಿ, ಮುದ್ದೇಬಿಹಾಳ : ಅಕ್ಟೋಬರ್ 2 ಗಾಂಧಿ ಜಯಂತಿಯಂದು ಬೆಂಗಳೂರಿನ ವಿಧಾನಸೌಧ ಬ್ಯಾಂಕ್ಟೆಟ್ ಹಾಲ್‌ನಲ್ಲಿ ಹಮ್ಮಿಕೊಂಡ 2023 ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರ ಪ್ರಶಸ್ತಿಯನ್ನು ಮುದ್ದೇಬಿಹಾಳ ತಾಲ್ಲೂಕಿನ ನಾಗರ ಬೆಟ್ಟ ಗ್ರಾಮ ಪಂಚಾಯತಿ ಯ ಅಧ್ಯಕ್ಷ ಸಿದ್ರಾಮಪ್ಪ ಪ್ಯಾಟಿ, ಪಿಡಿಓ ವಿರೇಶ ಹೂಗಾರ ಪಡೆದರು ಗಾಂಧಿ ಗ್ರಾಮ ಪುರಸ್ಕಾರವನ್ನು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ನೀಡಿದರು. ಗ್ರಾಮೀಣ ಹಾಗೂ ಪಂಚಾಯತ್ ರಾಜ್ ಇಲಾಖೆಯು ಗ್ರಾಪಂ ಮೂಲಭೂತ ಸೌಕರ್ಯ, ಉತ್ತಮ ಆಡಳಿತ ಆರ್ಥಿಕ ವ್ಯವಸ್ಥೆ ಸೇರಿದಂತೆ ವಿವಿಧ ಮಾನದಂಡಗಳ ಮೂಲಕ ಪ್ರಶಸ್ತಿ ಗೆ ಆಯ್ಕೆ ಮಾಡುತ್ತದೆ ,ನಾಗರಬೆಟ್ಟ ಗ್ರಾಪಂ ಸಿಬ್ಬಂದಿ ಪ್ರಸ್ತಕ ವರ್ಷದಲ್ಲಿ ನರೇಗಾದ ಕೂಲಿಕಾರ್ಮಿಕರಿಗೆ, ಕಿಶೋರಿಯರಿಗೆ ಆರೋಗ್ಯ ತಪಾಸಣೆ ಸೇರಿದಂತೆ ಆರೋಗ್ಯ ಜಾಗೃತಿ ಮೂಡಿಸುವುದರ ಜೊತೆಗೆ ಗ್ರಾಪಂ ಅಧ್ಯಕ್ಷ ,ಉಪಾಧ್ಯಕ್ಷ ಸದಸ್ಯರು ಉತ್ತಮ ಆಡಳಿತ ಕ್ಕೆ ಸಹಕಾರಿಯಾಗಿದ್ದಾರೆ. ಸೋಮುವಾರ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ವಿಧಾನ ಪರಿಷತ್ತು ಮುಖ್ಯ ಸಚೇತಕ ಸಲಿಂ ಅಹಮದ್, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ನಸಿರ್ ಅಹಮದ್ ಹಾಜರಿದ್ದರು. ಗ್ರಾಂಧಿ ಗ್ರಾಮ ಪ್ರಶಸ್ತಿ ಗೆ ಹರ್ಷ; ನಾಗರಬೆಟ್ಟ ಗ್ರಾಪಂ ಗಾಂಧಿ ಪ್ರಶಸ್ತಿ ಪಡೆದಿರುವುದಕ್ಕೆ ಎಲ್ಲಾ ಗ್ರಾಪಂ ಸದಸ್ಯರು, ಉಪಾಧ್ಯಕ್ಷರು ಹಾಗೂ ಅಧಿಕಾರಿಗಳು ಒಟ್ಟಾಗಿ ಕೆಲಸ ಮಾಡಿರುವುದಕ್ಕೆ ಪ್ರಶಸ್ತಿ ಗೆ ಬಂದಿದೆ ಎಂದು ಗ್ರಾಪಂ ಅಧ್ಯಕ್ಷ ಸಿದ್ರಾಮಪ್ಪ ಪ್ಯಾಟಿ ಸಂತಸ ವ್ಯಕ್ತಪಡಿಸಿದ್ದಾರೆ ಎಲ್ಲಾ ಗ್ರಾಪಂ ಸದಸ್ಯರು ಪಕ್ಷಭೇದ ಮರೆತು ಕೆಲಸ ಮಾಡುತ್ತಿದ್ದೇವೆ ಎಂದರು ಉಪಾಧ್ಯಕ್ಷೆ ಪ್ರೇಮಾ ಚಲವಾದಿ, ಸದಸ್ಯರಾದ ಭೀಮಣ್ಣ ಪೂಜಾರಿ, ದೇವಮ್ಮ ರಕ್ಕಸಗಿ,ಶರಣಗೌಡ ಸಿದರೆಡ್ಡಿ, ಗದ್ದೆಮ್ಮಾ ನಾಯ್ಕೋಡಿ, ರೇಣುಕಾ ಬಿರಾದಾರ, ಕಸ್ತೂರಿ ಮಣ್ಣೂರ,ಲಕ್ಷ್ಮೀ ಶಿವಯೋಗಿಮಠ, ಪರಮವ್ವ ಪಾಟೀಲ,ಖಾಶಪ್ಪ ಮಾದರ,ನೀಲಪ್ಪ ಮದರಿ ಹಾಗೂ ಗ್ರಾಪಂ ಸಿಬ್ಬಂದಿಗಳು ಗ್ರಾಪಂ ವ್ಯಾಪ್ತಿಯ ನಾಗರಬೆಟ್ಟ, ಮಲಗಲದಿನ್ನಿ,ಜೈನಾಪೂರ,ಬೂದಿಹಾಳ ಪಿಎನ್,ಮಾವಿನಭಾವಿ,ಕಿಲಾರಹಟ್ಟಿ ಗ್ರಾಮಸ್ಥರು ಅಭಿನಂಧಿಸಿ ಹರ್ಷ ವ್ಯಕ್ತಪಡಿಸಿದ್ದಾರೆ
