ಉದಯವಾಹಿನಿ, ನವದೆಹಲಿ: ನವದೆಹಲಿಯ, ಎನ್‌ಸಿಆರ್‌ ಪ್ರದೇಶದಲ್ಲಿ ಹಲವು ಪ್ರದೇಶಗಳಲ್ಲಿ ಭೂಮಿ ಕಂಪಿಸಿದೆ. ಮಂಗಳವಾರ ಮಧ್ಯಾಹ್ನ 2.53 ನಿಮಿಷಗಳ ಸುಮಾರಿಗೆ ಈ ಪ್ರಬಲ ಭೂಕಂಪನ ಸಂಭವಿಸಿದೆ. 4.6 ತೀವ್ರತೆ ಪ್ರಬಲ ಭೂಕಂಪ ಸಂಭವಿಸಿದ್ದು, ಹಲವು ಕಡೆ ಜನರು ಆತಂಕಕಗೊಂಡಿದ್ದಾರೆ.
2 ಬಾರೀ ಪ್ರಭಲ ಭೂಕಂಪ ಸಂಭವಿಸಿದೆ. ದೆಹಲಿ ಹಾಗೂ ಎನ್‌ಸಿಆರ್‌ ಪ್ರದೇಶದಲ್ಲಿ ರಿಕ್ಟರ್‌ ಮಾಪಕದಲ್ಲಿ 4.6 ತೀವ್ರತೆಯ ಭುಕಂಪ ಸಂಭವಿಸಿದೆ.
ಭೂಮಿ ಕಂಪಿಸಿದ ಹಿನ್ನೆಲೆ ಕಚೇರಿ, ಮನೆಗಳಲ್ಲಿದ್ದ ಜನರು ಆಚೆಗೆ ಓಡಿ ಬಂದಿದ್ದಾರೆ. ದೆಹಲಿ, ಪಂಜಾಬ್‌, ಹರಿಯಾಣ, ಛತ್ತಿಸ್‌ಗಡದ ಭಕಂಪವಾಗಿದೆ. ಉತ್ತರಪ್ರದೇಶದ ನೋಯ್ಡಾದಲ್ಲೂ ಭೂಕಂಪವಾಗಿದೆ. ಉತ್ತರ ಪ್ರದೇಶದ ನೋಯ್ಡಾ ಸೆಕ್ಟರ್ 75 ರಿಂದ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿವೆ. ಉತ್ತರ ಪ್ರದೇಶದ ಲಕ್ನೋ, ಹಾಪುರ್ ಮತ್ತು ಅಮ್ರೋಹಾದಲ್ಲಿಯೂ ಕಂಪನದ ವರದಿಯಾಗಿದೆ.

ನೇಪಾಳದಲ್ಲಿ 6.2 ರ ತೀವ್ರತೆಯ ಭೂಕಂಪ: ಕೇಂದ್ರ ಆರೋಗ್ಯ ಸಚಿವರು ಮನ್ಸುಖ್ ಮಾಂಡವಿಯಾ ಮತ್ತು ಅವರ ಕಚೇರಿ ಸಿಬ್ಬಂದಿ ಹೊರಗೆ ಬಂದು ನಿಂತಿದ್ದರು.ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರದ ಪ್ರಕಾರ, ಅಕ್ಟೋಬರ್ 3 ರಂದು ಮಧ್ಯಾಹ್ನ 2.25 ಕ್ಕೆ ನೇಪಾಳದಲ್ಲಿ 6.2 ರ ತೀವ್ರತೆಯ ಭೂಕಂಪ ಸಂಭವಿಸಿದೆ. ಕಂಪನವು ಸುಮಾರು 45 ಸೆಕೆಂಡುಗಳ ಕಾಲ ಇತ್ತು. 25 ಸೆಕೆಂಡ್‌ಗಳ ಅಂತರದಲ್ಲಿ ಎರಡು ಭೂಕಂಪಗಳು ಒಂದರ ಹಿಂದೊಂದರಂತೆ ಅನುಭವವಾಯಿತು ಎಂದು ಪ್ರಾಥಮಿಕ ವರದಿಗಳು ಹೇಳುತ್ತವೆ. ಮೊದಲ ಭೂಕಂಪದ ಪ್ರಮಾಣ 4.6 ಆಗಿದ್ದರೆ ಎರಡನೇ ಕಂಪನವು ರಿಕ್ಟರ್ ಮಾಪಕದಲ್ಲಿ 6.4 ದಾಖಲಾಗಿದೆ.ಕನಿಷ್ಠ ನಾಲ್ಕು ಕಂಪನಗಳ ಅನುಭವವಾಗಿದೆ ಎಂದು ವರದಿಗಳು ಸೂಚಿಸಿವೆ.ಮೊದಲ ಕಂಪನವು 11.19 ಕ್ಕೆ, ಎರಡನೆಯದು ಮಧ್ಯಾಹ್ನ 1.15 ಕ್ಕೆ ಮತ್ತು ನಂತರದ ಎರಡು ಕಂಪನಗಳು ಕ್ರಮವಾಗಿ 2.50 ಮತ್ತು 3.30 ಕ್ಕೆ ಅನುಭವವಾಯಿತು. ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ (USGS) ಪ್ರಕಾರ ಭೂಕಂಪಗಳು ದೋಷದ ರೇಖೆಯ ಉದ್ದಕ್ಕೂ ಹಠಾತ್ ಬದಲಾವಣೆಯಿಂದ ಉಂಟಾಗುತ್ತದೆ. ಟೆಕ್ಟೋನಿಕ್ ಫಲಕಗಳು ನಿರಂತರವಾಗಿ ಚಲಿಸುತ್ತವೆ. ಆದರೆ ಘರ್ಷಣೆಯಿಂದಾಗಿ ಅವುಗಳ ತುದಿಗಳು ಲಾಕ್ ಆಗುತ್ತವೆ.ಈ ತುದಿಗಳಲ್ಲಿ ಒತ್ತಡವು ಘರ್ಷಣೆಯ ಬಲವನ್ನು ಮೀರಿದಾಗ ಅದು ಭೂಕಂಪಕ್ಕೆ ಕಾರಣವಾಗುತ್ತದೆ. ಈ ಭೂಕಂಪದ ಘಟನೆಯು ಭೂಮಿಯ ಹೊರಪದರದ ಮೂಲಕ ಹರಡುವ ಅಲೆಗಳ ರೂಪದಲ್ಲಿ ಶಕ್ತಿಯನ್ನು ಬಿಡುಗಡೆ ಮಾಡುತ್ತದೆ, ಇದು ನಾವು ಅನುಭವಿಸುವ ಕಂಪನಗಳಿಗೆ ಕಾರಣವಾಗುತ್ತದೆ.
ನಾವು ಭೂಕಂಪದ ಕೇಂದ್ರಬಿಂದುದಿಂದ ಹೆಚ್ಚು ದೂರ ಹೋದಂತೆ ಭೂಕಂಪದಿಂದ ಉಂಟಾಗುವ ಕಂಪನದ ತೀವ್ರತೆಯು ಕಡಿಮೆಯಾಗುತ್ತದೆ. ಆದ್ದರಿಂದ, 500 ಕಿಲೋಮೀಟರ್ ಆಳದಲ್ಲಿ ಸಂಭವಿಸುವ ಭೂಕಂಪದಿಂದ ಉಂಟಾಗುವ ಮೇಲ್ಮೈ ಮಟ್ಟದ ಅಲುಗಾಡುವಿಕೆಯು 20 ಕಿಲೋಮೀಟರ್‌ಗಳಷ್ಟು ಆಳದಲ್ಲಿ ಸಂಭವಿಸಿದಲ್ಲಿ ಅದೇ ಭೂಕಂಪದಿಂದ ಉಂಟಾಗುವ ಅಲುಗಾಡುವಿಕೆಗೆ ಹೋಲಿಸಿದರೆ ಗಮನಾರ್ಹವಾಗಿ ಕಡಿಮೆಯಾಗಿದೆ.

.

Leave a Reply

Your email address will not be published. Required fields are marked *

error: Content is protected !!