ಉದಯವಾಹಿನಿ ಮಸ್ಕಿ: ಮದ್ಯದ ಅಂಗಡಿಗಳಿಗೆ ಪರವಾನಗಿ ನೀಡುವುದನ್ನು  ವಾಪಾಸ್ ಪಡೆಯುವಂತೆ ಆಗ್ರಹಿ ಸಿಪಿಐಎಂಎಲ್ ರೆಡ್ ಸ್ಟಾರ್ ಪಕ್ಷದ ಮುಖಂಡರು ಪತ್ರ‌ ಚಳುವಳಿ ಮೂಲಕ ಸರಕಾರಕ್ಕೆ‌ ಒತ್ತಾಯಿಸಿದರು.ಪಟ್ಟಣದ ಅಂಚೆ ಕಚೇರಿ ಮುಂಭಾಗದಲ್ಲಿ ಅಂಚೆ‌ ಪೆಟ್ಟಿಗೆಯಲ್ಲಿ ಪತ್ರ ಹಾಕುವುದರ ಮೂಲಕ  ಮುಖ್ಯಮಂತ್ರಿಗಳಿಗೆ ಪತ್ರ ರವಾನಿಸಲಾಯಿತು. ಹೊಸದಾಗಿ ಮದ್ಯದ ಅಂಗಡಿಗಳಿಗೆ ಪರವಾನಗಿ ನೀಡುವ ಅಬಕಾರಿ ಇಲಾಖೆಯ ನಿರ್ಧಾರ ಸರಿಯಿಲ್ಲ, ದುಶ್ಚಟದಿಂದ ಅನೇಕ ಬಡ ಕುಟುಂಬಗಳು ಬೀದಿ ಪಾಲಾಗಿವೆ. ಒಂದೆಡೆ ಬೆಲೆ ಏರಿಕೆ, ಬಡತನ, ನಿರುದ್ಯೋಗದಿಂದ ಜೀವನ ತತ್ತರಿಸುತ್ತಿದ್ದರೆ. ಇನ್ನೊಂದೆಡೆ ರಾಜ್ಯದ ಜನರ ನೈತಿಕ ಮೌಲ್ಯ ಕುಸಿಯುತ್ತಿದೆ‌. ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರ ಹೆಚ್ಚಳಕ್ಕೆ ಮುಖ್ಯ ಕಾರಣವಾಗಿದೆ. ಸರಕಾರ ಈ ಕೂಡಲೇ‌ ಹೊಸ‌ ಅಂಗಡಿಗಳ ಪರವಾನಿಗೆ ನೀಡುವ ಮಂಜೂರಾತಿಯನ್ನು ವಾಪಾಸ್ಸು ಪಡೆಯಬೇಕೆಂದು ಪತ್ರದಲ್ಲಿ ಒತ್ತಾಯಿಸಿದರು. ಈ ಸಂದರ್ಭದಲ್ಲಿ ಕೆಆರ್ ಎಸ್ ತಾಲೂಕ ಘಟಕ ಅಧ್ಯಕ್ಷ ಸಂತೋಷ್ ಹಿರೇದಿನ್ನಿ ಮಾರುತಿ ಜಿಲ್ಲಾಪುರ, ವೆಂಕಟೇಶ ನಾಯಕ, ತಿರುಪತಿ ಮಸ್ಕಿ, ಬಾಲ ಸ್ವಾಮಿ, ನಾಗೇಶ್ ಹಿರೆದಿನ್ನಿ ಸೇರಿದಂತೆ ಇನ್ನಿತರಿದ್ದರು.

Leave a Reply

Your email address will not be published. Required fields are marked *

error: Content is protected !!