ಉದಯವಾಹಿನಿ ತಾಳಿಕೋಟಿ: ಕಾಂಗ್ರೇಸ್ ಸರ್ಕಾರ ಘೋಸಿಸಿರುವ 5 ಗ್ಯಾರಂಟಿ ಯೋಜನೆಗಳಲ್ಲಿ ಇಗಾಗಲೇ 4 ಗ್ಯಾರಂಟಿಗಳನ್ನು ಜಾರಿಗೆ ತರಲಾಗಿದೆ. ಇದರಿಂದ ರಾಜ್ಯದಲ್ಲಿರುವ ಬಡ-ಕೂಲಿ ಕಾರ್ಮಿಕರಿಗೆ, ಮಹಿಳೆಯರಿಗೆ ಹಾಗೂ ವಿದ್ಯಾರ್ಥಿಗಳಿಗೆ ತುಂಬಾ ಅನಕೂಲವಾಗಿದೆ. ಈ ಹಿಂದೆ ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರ ಇದ್ದು ಸಿದ್ದರಾಮಯ್ಯನವರೇ ಮುಖ್ಯಮಂತ್ರಿಗಳಾಗಿದ್ದಾಗ ಸಾಮಾನ್ಯ ಬಡವರಿಗೆ ಅನಕೂಲವಾಗಲಿ ಎಂಬ ಕಾರಣಕ್ಕಾಗಿ ಇಂದಿರಾ ಕ್ಯಾಂಟಿನ್‌ಗಳನ್ನು ತೆರೆಯಲಾಯಿತು. ಇಂದು ಹಲವಾರು ಜಿಲ್ಲೆ ಹಾಗೂ ತಾಲೂಕಾ ಕೇಂದ್ರಗಳಲ್ಲಿ ಅವು ಅತ್ಯುತ್ತಮವಾಗಿ ನಡೆಯುತ್ತೀವೆ. ಇತ್ತಿಚೀಗೆ ಮುಖ್ಯಮಂತ್ರಿಗಳು ಇಗಾಗಲೇ ಅಸ್ತಿತ್ವದಲ್ಲಿರುವ ಈ ಕ್ಯಾಂಟಿಗಳನ್ನು ಸಧೃಢಗೊಳಿಸಿ ಇವುಗಳ ಸಂಖ್ಯೆಯನ್ನು ಹೆಚ್ಚಿಸುವುದರೊಂದಿಗೆ ಇಗಾಗಲೇ ಪೂರೈಸುತ್ತೀರುವ,ತಿಂಡಿ-ತಿನಿಸುಗಳೊ0ದಿಗೆ ಇನ್ನೂ ಕೆಲವು ವಿಶೇಷ ಆಹಾರ ಪದಾರ್ಥಗಳನ್ನು ಹೆಚ್ಚುವರಿಯಾಗಿ ಪುರೈಸುವ ಯೋಜನೆಯನ್ನು ಪ್ರಕಟಿಸಿದ್ದಾರೆ ಇದು ಸ್ವಾಗತಾರ್ಹ ಕ್ರಮವಾಗಿದೆ.
ವಿಜಯಪುರ ಜಿಲ್ಲೆಯ ಕೆಲವು ತಾಲೂಕಗಳಲ್ಲಿ ಇಗಾಗಲೇ ಈ ಕ್ಯಾಂಟಿನಗಳು ನಡೆಯುತ್ತೀವೆ. ಆದರೆ ತಾಳಿಕೋಟಿಯಲ್ಲಿ ಇಲ್ಲಿಯವರೆಗೆ ಇಲ್ಲದೆ ಇರುವುದರಿಂದ ಇಲ್ಲಿಯು ಸಹ ಒಂದು ಇಂದಿರಾ ಕ್ಯಾಂಟಿನ್ ಆಗಬೇಕೆಂಬುದು ಸಾರ್ವಜನಿಕರ ಬಹುದಿನಗಳ ಬೇಡಿಕೆಯಾಗಿದೆ. ತಾಳಿಕೋಟಿ ನೂತನ ತಾಲೂಕಾ ಕೇಂದ್ರವಾಗಿ ರಚನೆಯಾದ ನಂತರ ಪ್ರತಿದಿನ ಸಾವಿರಾರು ಜನರು ಇಲ್ಲಿಗೆ ಬರುತ್ತಾರೆ. ಇಲ್ಲಿ ಉದ್ಯೋಗದ ಅವಕಾಶವಿರುವುದರಿಂದ ನೂರಾರು ಬಡ ಕೂಲಿ ಕಾರ್ಮಿಕರು ಬರುತ್ತಾರೆ, ಜೋತೆಗೆ ಸಮೀಪದ ಗ್ರಾಮಗಳಿಂದ ಸಾವಿರಾರು ವಿದ್ಯಾರ್ಥಿಗಳು ವ್ಯಾಸಂಗಕ್ಕಾಗಿ ಬರುತ್ತಾರೆ ಇವರೆಲ್ಲರಿಗೂ ಹೆಚ್ಚಿನ ಹಣ ಕೊಟ್ಟು ಹೊಟೇಲಗಳಲ್ಲಿ ತಿನ್ನಲು ಸಾಧ್ಯವಾಗುವುದಿಲ್ಲ. ಇವರೆಲ್ಲರಿಗೂ ಅನಕೂಲವಾಗಲು ಇಂದಿರಾ ಕ್ಯಾಂಟಿನ್ ಇರಬೇಕಾಗಿರುವುದು ಅತ್ಯಗತ್ಯವಾಗಿದೆ.
ಒಟ್ಟಾರೇ ಇಲ್ಲೊಂದು ಇಂದಿರಾ ಕ್ಯಾಂಟಿನ್ ಸ್ಥಾಪನೇಯ ಅಗತ್ಯವಿದೆ. ಇದಕ್ಕೆ ಅಗತ್ಯವಾಗಿ ಬೇಕಾದ ಸವಲತ್ತುಗಳು ಇಲ್ಲಿ ಲಭ್ಯ ಇವೆ ಈ ಭಾಗದ ಶಾಸಕರಾದ ಸಿ. ಎಸ. ನಾಡಗೌಡ(ಅಪ್ಪಾಜಿ) ಅವರು ಇಚ್ಛಾಶಕ್ತಿ ತೋರಿದರೆ ಇಂದಿರಾ ಕ್ಯಾಂಟಿನ್  ಆರಂಭ ಆಗುವುದರಲ್ಲಿ ಸಂದೆಹವೇ ಇಲ್ಲ.
೧) ಇಂದಿರಾ ಕ್ಯಾಂಟಿನ್ ಆರಂಭಿಸಲು
ಅಗತ್ಯವಾಗಿ ಬೇಕಾಗುವ ಎಲ್ಲ ಸೌಲತ್ತುಗಳು
ಇಲ್ಲಿ ಲಭ್ಯಇವೆ. ಪಟ್ಟಣ ತಾಲೂಕಾ ಕೇಂದ್ರವಾಗಿರುವುದರಿ0ದ
ಎಲ್ಲರಿಗೂ ಅನಕೂಲವಾಗುತ್ತದೆ. ಇಬ್ರಾಹೀಂ ಮನ್ಸೂರ ಪುರಸಭೆ ಮಾಜಿ ಸದಸ್ಯರು

೨) ಪಟ್ಟಣದಲ್ಲಿ ಇಂದಿರಾ ಕ್ಯಾಂಟಿನ್  ಆಗಬೇಕೆಂಬುದು
ಸಾರ್ವಜನಿಕರ ಬಹುದಿನಗಳ ಬೇಡಿಕೆಯಾಗಿದೆ
ಇದರಿಂದ ಪಟ್ಟಣಕ್ಕೆ ಬರುವ ಬಡ-ಕೂಲಿಕಾರ್ಮಿಕ
ಹಾಗೂ ವಿದ್ಯಾರ್ಥಿಗಳಿಗೆ ಕಡಿಮೆ ಖರ್ಚಿನಲ್ಲಿ ತಮ್ಮ
ಹಸಿವು ನೀಗಿಸಲು ಸಾಧ್ಯವಾಗುತ್ತದೆ. – ಗೋಪಾಲ ಕಟ್ಟಿಮನಿ ತಾಲೂಕಾಧ್ಯಕ್ಷ ಅಂಬೇಡ್ಕರ್ ಸೇನೆ

Leave a Reply

Your email address will not be published. Required fields are marked *

error: Content is protected !!