ಉದಯವಾಹಿನಿ, ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದೇ, ಬಂದಿದ್ದು, ಭಯೋತ್ಪಾದಕರಿಗೆ ಹಾಗೂ ಜಿಹಾದಿ ರಕ್ಕಸರಿಗೆ ಕರ್ನಾಟಕ ಸ್ವರ್ಗವಾಗಿ ಮಾರ್ಪಟ್ಟಿದೆ ಎಂದು ಪ್ರತಿಪಕ್ಷ ಬಿಜೆಪಿ ದೂರಿದೆ. ಈ ಕುರಿತು ತನ್ನ ಸಾಮಾಜಿಕ ಜಾಲತಾಣ ಎಕ್ಸ್‍ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ, ತಾವೆಂತಹ ದೇಶದ್ರೋಹದ ಕೆಲಸವನ್ನು ಮಾಡಿದರೂ, ಕಾಂಗ್ರೆಸ್ ಪಕ್ಷ ನಮ್ಮ ಬೆಂಬಲಕ್ಕಿರಲಿದೆ ಎಂಬ ಕಾರಣಕ್ಕೆ ಜಿಹಾದಿಗಳು ಅಟ್ಟಹಾಸ ಮೆರೆಯುತ್ತಿದ್ದಾರೆ. ಕರ್ನಾಟಕವನ್ನು ಮತ್ತೊಂದು ತಾಲಿಬಾನ್ ಮಾಡಲು ಕಾಂಗ್ರೆಸ್ ಸಿದ್ದವಾಗಿ ನಿಂತಂತೆ ಕಾಣುತ್ತಿದೆ!! ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೆಸರು ಉಲ್ಲೇಖ ಮಾಡದೆ ಸಿದ್ಧ ಎಂದು ಟ್ವೀಟ್ ಮಾಡಿದೆ.
ಮತ್ತೊಂದು ಎಕ್ಸ್‍ನಲ್ಲಿ ಬಿಜೆಪಿ, ಶಿವಮೊಗ್ಗದಲ್ಲಿ ಈ ಹಿಂದೆ ವಿಧ್ವಂಸಕ ಕೃತ್ಯ ಎಸಗಿದ ಗೂಂಡಾಗಳನ್ನೆಲ್ಲೆ ಬಿಡುಗಡೆಗೊಳಿಸಿದ್ದು ಕಾಂಗ್ರೆಸ್ ಸರ್ಕಾರ!. ಪೊಲೀಸ್ ಅಧಿಕಾರಗಳ ಮೇಲೆಯೇ ಮತಾಂಧರು ಕಲ್ಲುತೂರಾಟ ನಡೆಸಿದ್ದು, ಅನೇಕ ಪೊಲೀಸರೇ ಗಾಯಗೊಂಡಿದ್ದರೂ ಅದರ ಬಗ್ಗೆ ಚಕಾರವೆತ್ತದ ನಿಮ್ಮ ಸರ್ಕಾರಕ್ಕೆ ಕನಿಷ್ಠ ಮಾನ ಮರ್ಯಾದೆ ಉಳಿದಿದೆಯೇ?.
ನಮ್ಮ ದಕ್ಷ, ಸಮರ್ಥ, ಶಕ್ತಿಯುತ ಪೊಲೀಸ್ ಅಧಿಕಾರಿಗಳ ಕೈ ಕಟ್ಟಿ ಹಾಕಿ ಮೂಲಭೂತವಾದಿಗಳ ತಾಳಕ್ಕೆ ಕುಣಿಯುವ ಹಾಗೆ ಮಾಡಿರುವ ನಿಮ್ಮ ಸರ್ಕಾರಕ್ಕೆ ಅಧಿಕಾರದಲ್ಲಿ ಮುಂದುವರಿಯಲು ಯಾವ ನೈತಿಕತೆಯೂ ಉಳಿದಿಲ್ಲ! ಇನ್ನು ನಾಲ್ಕು ಪೈಸೆಯ ಗೌರವವನ್ನೂ ಉಳಿಸಿಕೊಳ್ಳದ ನಿಮ್ಮ ಸರ್ಕಾರದ ವಿರುದ್ಧ ಯಾವ ಸಂಚಿನ ಅಗತ್ಯವೂ ಇಲ್ಲ.
